DHARWAD:ಗುರುವಂದನಾ, ಸ್ನೇಹ ಸಮ್ಮಿಲನ ಸಮಾರಂಭ.

ಗುರುವಂದನಾ,  ಸ್ನೇಹ ಸಮ್ಮಿಲನ ಸಮಾರಂಭ.     
  ಧಾರವಾಡ 17 : ಇಂದಿನ ಮಕ್ಕಳಿಗೆ ಶಿಕ್ಷಕರು ಬದುಕುವದನ್ನ ಮಾತ್ರ ಕಲಿಸುತ್ತಿದ್ದಾರೆ ಅಂದರೆ ವೈದ್ಯಕೀಯ, ಇಂಜನಿಯರಿಂಗ ಹೀಗೆ ಅನೇಕ ಕ್ಷೇತ್ರ ಸೀಟು ಹೇಗೆ ಪಡೆಯಬೇಕು ಅನ್ನೋದು ಮಾತ್ರ ಕಲಿಸುತ್ತಿದ್ದು ಬಾಳುವುದು ಹೀಗೆ ಅಂದರೆ ಜೀವನ ನಿರ್ವಹಣೆಯ ಬಗ್ಗೆ ಕಲಿಸಲಾಗುತ್ತಿಲ್ಲ ಇದು ಇಂದಿನ ಶಿಕ್ಷಣ ಪದ್ದತಿಯ ದುಸ್ಥಿತಿ ಎಂದು ನಿವೃತ್ತ ಶಿಕ್ಷಕ
ಮತ್ತು ಕಲಾವಿದ ಸುರೇಶ ವಿ.
ಕುಲಕರ್ಣಿ  ಮುಖ್ಯ
ಅತಿಥಿಯಾಗಿ       ಮಾತನಾಡಿದರು  ಅವರು  ಪಾಠಾಭ್ಯಾಸ ಆದರ್ಶ ಪ್ರಾಥಮಿಕ ಶಾಲೆಯ 1989ರಿಂದ 1996ರ
ವಿದ್ಯಾರ್ಥಿ ಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ 
ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು, ಮಕ್ಕಳಿಗೆ ಚಿತ್ರ ಕಲೆಯ ಬಗ್ಗೆ ತಿಳುವಳಿಕೆ ಅತೀ ಕಡಿಮೆ ಇರುವದರಿಂದ ವಿಜ್ಞಾನ ,ಭೂಗೂಲ,ಗಣಿತ , ಜೀವಶಾಸ್ತ್ರ ಈ ವಿಷಯದ ಪರೀಕ್ಷೆ ಬರೆಯಲು ಸಮಯ ಸಾಕಾಗಲಿಲ್ಲ ಎಂಬುದು ದುರದೃಷ್ಟಕರ ಸಂಗತಿ ಅದಕ್ಕೆ ಪಾಲಕರು ಸಹ ಕಾರಣ ಎಂದರು.
ಶಿಕ್ಷಕರು ಕಲಿಸುವಾಗ ಆ ಯಾ ವಿಷಯವಾರು ಚಿತ್ರ ಗಳನ್ನು ಅತೀ ಕಡಿಮೆ ಸಮಯದಲ್ಲಿ ಹೇಗೆ ಬಿಡಿಸಲು ಸಾಧ್ಯ ಎಂಬುವದನ್ನು ಕಲಿಸಿದ್ದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯಲು ಸಾಧ್ಯ. ಅದೇ ರೀತಿ ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆಯ ಬಗ್ಗೆ ದಿನವು ಪಾಠದ ಮೊದಲು ಅದ೯ಗಂಟಿ
ಹೇಳಿದಲ್ಲಿ ಹೇಗೆ ಬಾಳಬೇಕು ಎಂಬುದು ಅವರು ಕಲಿಯುತ್ತಾರೆ ಎಂದರು.
  ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹೂವಣ್ಣ 
ಗಡದಾರ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದ ರು ,ಶಾಲೆಯ ಮುಖ್ಯ ಶಿಕ್ಷಕರಾದ ಗಿರಿಜಾ ನಾರಾಯಣಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ವಿ.ಎ. ಬಾಳಗಿ, ಎಂ.ಜಿ. ಮುಲ್ಲಾ, ಡಿ.ಸಿ. ಕುಲಕರ್ಣಿ, ಪಿ.ಬಿ.
ಪೂಜಾರ, ಎ.ವೈ. ದೇಸಾಯಿ,
ಎಸ್.ಕೆ. ಗಂಗಣ್ಣವರ, ಕೆ.
ಎಚ್. ನಾಯಕ, ಎಂ.ಎ.
ಬಡಿಗೇರ,
ಚನವೀರಗೌಡರ,
ಎಸ್‌.ಎ.
ಕರಣಿ, ಜಿ.ಐ. ಹೊಂಡದಕಟ್ಟಿ, ಕೆ.ಎಸ್‌. ಸಾಂಬ್ರಾಣಿ, ಬಿ.ಜಿ. ಬಾರ್ಕಿ ಅವರಿಗೆ ಕಾರ್ಯಕ್ರಮದಲ್ಲಿ 
ಸನ್ಮಾನ ಮಾಡಲಾಯಿತು.  ಶ್ರದ್ಧಾಂಜಲಿ ಸಭೆ
 ನದಾಫ, ಶ್ರೀಮತಿ ಎಸ್.ಎಂ. ಸವಡಿ,  ಬುದಾರಪುರ,  ರಾಮಚಂದ್ರ ಪಾಟೀಲ, ಶ್ರೀಮತಿ ಎಸ್.ಪಿ. ಸಾಂಗ್ಲಿಕರ,  ಶಿಂಧೆ,  ಭಟ್,  ಎಸ್.ಎಫ್. ಗೊಜನೂರ ಅಗಲಿದ ಗೆಳೆಯರಿಗೆ ನೆನೆಯಲಾಯಿತು.  ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಹಭೋಜನ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೂಂಡಿತು.
ನವೀನ ಹಳೆಯದು

نموذج الاتصال