DHARWAD:ಕರ್ನಾಟಕ ಕಾನೂನು ವಿವಿಯ 6ನೇ ಘಟಿಕೋತ್ಸವ.

ಕರ್ನಾಟಕ ಕಾನೂನು ವಿವಿಯ 6ನೇ ಘಟಿಕೋತ್ಸವ.


    ಧಾರವಾಡ:--ನಗರದ ಕೃಷಿ ವಿಶ್ವವಿದ್ಯಾಲಯ ಆವರಣದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ಕಾರ್ಯಕ್ರಮ ಇಂದು ಜರುಗಿತು.
      ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆಗಿರುವ  ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು.
    ಭಾರತ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಡಾ.ಧನಂಜಯ ವೈ. ಚಂದ್ರಚೂಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
        ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಡಾ. ಎಚ್.ಕೆ.ಪಾಟೀಲ ಅವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದರು. 
    ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಡಾ. ಧನಂಜಯ ವೈ. ಚಂದ್ರಚೂಡ, ಡಾ. ಎಮ್. ವೀರಪ್ಪ ಮೊಯ್ಲಿ ಮತ್ತು ನ್ಯಾಯಮೂರ್ತಿ ಅಶೋಕ  ಹಿಂಚಗೇರಿ ಅವರಿಗೆ ಕಾನೂನು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ನೀಡಿ, ಗೌರವಿಸಲಾಯಿತು.
    ರ್ಯಾಂಕ್ ವಿಜೇತರಿಗೆ ಬಂಗಾರದ ಪದಕ ವಿತರಿಸಲಾಯಿತು.
     ಕರ್ನಾಟಕ ರಾಜ್ಯ ಕಾನೂನ ವಿಶ್ವವಿದ್ಯಾಲಯದ ಕುಲಪತಿ  ಪ್ರೂ ಡಾ ಸಿ ಬಸವರಾಜು,   ಆಡಳಿತ ವಿಭಾಗದ ಕುಲಸಚಿವರಾದ  ಅನುರಾಧ ವಸ್ತ್ರದ, ಕೆ.ಎ.ಎಸ್., ಡೀನರು, ನಿರ್ದೇಶಕರು ಮತ್ತು ಕುಲಸಚಿವರು (ಮೌಲ್ಯಮಾಪನ) ಪ್ರೊ, (ಡಾ) ರತ್ನಾ ಆರ್. ಭರಮಗೌಡರ ವಿವಿಧ ವಿಭಾಗದ ಡೀನ್ ಗಳು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال