ಇಂಜನಿಯರ್ಸಗಳು ಸಮಾಜ, ಸಂಸ್ಕೃತಿ ಮತ್ತು ಮಾನವ ನಡವಳಿಕೆಯೊಂದಿಗೆ ಅಂತರ್ಸಂಪರ್ಕ ಗಟ್ಟಿಗೊಳ್ಳಿಸಲಿ - ಶಾಸಕ ಅರವಿಂದ ಬೆಲ್ಲದ
ಸಿವಿಲ್ ಇಂಜನಿಯರಿಂಗ ಕ್ಷೇತ್ರವು ಸಮಾಜ, ಸಂಸ್ಕೃತಿ ಮತ್ತು ಮಾನವ ನಡವಳಿಕೆಯೊಂದಿಗೆ ಅಂತರ್ಸಂಪರ್ಕವನ್ನು ಹೊಂದಿದ ಕ್ಷೇತ್ರವಾಗಿದೆ. ಅದನ್ನು ಸುಭದ್ರವಾಗಿ ಕಟ್ಟಿಕೊಡುವ ಕಾರ್ಯವಮ್ನು ಧಾರವಾಡದ ತಮ್ಮ ಅಸೋಸಿಯೇಷನ್ ಮಾಡುತ್ತಿರುವುದು ನಮ್ಮ ನಗರಕ್ಕೆ ಹೆಮ್ಮೆಯ ಸಂಗಿತಿಯಾಗಿದೆ ಎಂದು ಶಾಸಕರಾದ ಅರವಿಂದ ಬೆಲ್ಲದ ಹೇಳಿದರು.
ಅವರು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಲೋಕಲ ಸೆಂಟರ್ ಧಾರವಾಡ ವತಿಯಿಂದ ನಗರದ ಆಲೂರ ವೆಂಕಟರಾವ ಸಭಾಭವನದಲ್ಲಿ ಏರ್ಪಡಿಸಿದ್ದ ಅಸೋಸಿಯೇಷನ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಪದಾಧಿಕಾರಿಗಳು ಅಧಿಕಾರ ಬಂದಾಗ ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ಎಲ್ಲರಿಗೂ ಸಮಾನವಾಗಿ ಹಂಚಿಕೊಳ್ಳುವ ಕಾರ್ಯವಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತ ಸದಸ್ಯರಾದ ಎಸ್ ವ್ಹಿ ಸಂಕನೂರ ತಮ್ಮ ಸಂದೇಶದಲ್ಲಿ ದೇಶವನ್ನು ಕಟ್ಟುವಲ್ಲಿ ಮತ್ತು ಪ್ರಗತಿಪಥದತ್ತ ಸಾಗುವಲ್ಲಿ ಇಂಜನಿಯರ್‌ಗಳ ಪಾತ್ರ ಪ್ರಮುಖವಾಗಿದೆ. ಅಂತವರಲ್ಲಿ ಸರ್ ಎಮ್ ವಿಶ್ವೇಶ್ವರಯ್ಯನವರು ಇಂಜಿನಿಯರ್ಸ್ ಸಮೂಹಕ್ಕೆ ಆದರ್ಶಪ್ರಾಯವಾಗಿದ್ದವರು. ವಿಶ್ವೇಶ್ವರಯ್ಯನವರು ದೇಶದ ಆಣೆಕಟ್ಟು, ಕಾರ್ಖಾನೆಗಳ ನಿರ್ಮಾಣ ಹೀಗೆ ಅಭಿವೃದ್ಧಿಶೀಲ ವಿಚಾರಗಳ ಮೂಲಕ ಜಗತ್ಪಸಿದ್ದರಾಗಿದ್ದರು. ಅಂತವರ ಆದರ್ಶದಲ್ಲಿ ನಾವು ಮುನ್ನಡೆಯಬೇಕು. ಈ ವಿಚಾರದಲ್ಲಿ ಧಾರವಾಡದ ತಮ್ಮ ಅಸೋಶಿಯೇಷನ್ ಕಾರ್ಯಮಾಡುತ್ತಿರುವುದು ಶ್ಲಾಘನೀಯವಾದ ಕಾರ್ಯ ಎಂದು ತಮ್ಮ ಅಭಿಪ್ರಾಯದಲ್ಲಿ ತಿಳಿದರು.
ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ನ ಅಧ್ಯಕ್ಷರಾದ ಸುನೀಲ ಬಾಗೇವಾಡಿ ಮಾತನಾಡಿ ಸದಸ್ಯರಿಗೆ ಮಾರ್ಗದರ್ಶನ ನೀಡಲು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಲು ಮುಂಬರುವ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾಗಿ ಇಂ.ಸುನೀಲ ಬಾಗೇವಾಡಿ, ಉಪಾಧ್ಯಕ್ಷರಾಗಿ ಇಂ.ಅರುಣ ಶೀಲವಂತ, ಕಾರ್ಯದರ್ಶಿಯಾಗಿ ಇಂ
ಸಿದ್ದನಗೌಡ ಪಾಟೀಲ, ಖಜಾಂಚಿಯಾಗಿ ಇಂ ಕಬೀರ ನದಾಫ್ ಮತ್ತು ಕಾರ್ಯಕ್ರಮ ಸಂಯೋಜಕರಾಗಿ ದಾಮೋದರ ಹೆಗಡೆ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಇವರಿಗೆ ಶಾಸಕರಾದ ಅರವಿಂದ ಬೆಲ್ಲದ ಪುಷ್ಪ ನೀಡಿ ಶುಭಕೋರಿದರು.
ಆರಂಭದಲ್ಲಿ ವಸುಧಾ ಚಕ್ರವರ್ತಿ ಅವರ ತಂಡದಿಂದ ಮತ್ತು ದಾಮೋದರ ಹೆಗಡೆ ಇಂಜನಿಯರ್ಸಗಳು ತ ಕಚೇರಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಇಂಜಿನಿಯರ್ಗಳಾದ ಎಮ್.ನಾರಾಯಣ, ಬಸವರಾಜ ಬಂಡಿವಡ್ಡರ, ಕಿರಣ ಶಿಂಧೆ, ಆನಂದ ಶಿವಾಪೂರ, ಕೆ.ಎನ್ ಪಾಟೀಲ, ಎಸ್ ಜಿ ಜೋಶಿ ಮತ್ತು ಮಹಾದೇವ ಕರ್ಜಗಿ, ಆರ್.ಆರ್ ಬಾರಕೇರ, ಶಂಕರ ಜೀರಾಳ, ಗುರು ಮತ್ತೂರ, ಮೆಹಬೂಬ್ ಬಾಷಾ, ಹುಬ್ಬಳ್ಳಿ ಅಸೋಸಿಯೇಷನ್ನಿನ ಇಂಜಿನಿಯರ್ಗಳಾದ ದೇವಕಿ ಜಿ, ವಸಂತ ಪಾಲಕರ, ಉಳವಪ್ಪ ಸುಣಗಾರ, ಅಶೋಕ ಬೆಸ್ತಾ , ರವಿರಾಜ್ ಕೊಡ್ಲಿ, ಮೆಹಬೂಬ ನದಾಫ್
ಎಮ್ ಎನ್ ಪಾಟೀಲ, ವಿನಾಯಕ ಜೋಶಿ, ಅಶ್ವಿನ ಕೊಪ್ಪಿಕರ, ಹಾಗೂ ಬಿಲ್ಡಿಂಗ್ ಮೆಟೀರಿಯಲ್ಸ್ ವಿತರಕರು, ಅಲ್ಟ್ರಾಟೆಕ್, ಜೆ ಕೆ ಸಿಮೆಂಟ್,ಕಮಲ್ ಮಾರ್ಕೆಟಿಂಗ್ ಅಧಿಕಾರಿಗಳು ಇದ್ದರು.ಮಾರ್ತಾಂಡಪ್ಪ ಕತ್ತಿ ಕಾರ್ಯಕ್ರಮ ನಿರೂಪಿಸಿದರು. ಇಂ ವಿಜಯೆಂದ್ರಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಕು.ವಸುಧಾ ಚಕ್ರವರ್ತಿ ಪ್ರಾರ್ಥಿಸಿದರು. ದಾಮೋದರ ಹೆಗಡೆ ಸ್ವಾಗತಿಸಿದರು. .ಸಿದ್ದನಗೌಡ ಪಾಟೀಲ ವಂದಿಸಿದರು.