ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಧಾರವಾಡದ ಪದಾಧಿಕಾರಿಗಳಿಗೆ ಸನ್ಮಾನ.

ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಧಾರವಾಡದ ಪದಾಧಿಕಾರಿಗಳಿಗೆ ಸನ್ಮಾನ.

ಧಾರವಾಡ 25 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಧಾರವಾಡ ಶಹರ ಮತ್ತು ಧಾರವಾಡ ಗ್ರಾಮೀಣ ವಿಭಾಗದಿಂದ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾದ ರಮೇಶ ಲಿಂಗದಾಳ, ರಾಜಶೇಖರ ಹೊನ್ನಪ್ಪನವರ, ಉಮೇಶ ಕುರುಬರ, ಚಂದ್ರಶೇಖರ ತಿಗಡಿ, ಅಯ್ಯಪ್ಪ ಮೊಕಾಶಿ ಅವರುಗಳನ್ನು, ನವರಸ ಸ್ನೇಹಿತರ ವೇದಿಕೆ ಮತ್ತು ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ವತಿಯಿಂದ, ಸತ್ಕರಿಸಿ ಅಭಿನಂದಿಸಲಾಯಿತು, ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಖ್ಯಾತ ಗಣಿತ ತಜ್ಞರು ಕೆ ಜಿ ದೇವರಮನಿ ಮಾತನಾಡಿ, ನೌಕರರ ಸಂಘಕ್ಕೆ ಅವಿರೋಧ ಆಯ್ಕೆ ಒಳ್ಳೆಯ ಬೆಳವಣಿಗೆ, ಈ ಒಂದು ಅವಕಾಶವನ್ನು ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳು, ನೌಕರರಿಗೆ ಅದರಲ್ಲೂ ನೌಕರರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸಲಹೆ ನೀಡಿ, ಇದೇ ಸಂದರ್ಭದಲ್ಲಿ ಡಿಸೆಂಬರ್ 15 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಿಡುಗಡೆ ಆಗಲಿರುವ, ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ಶ್ರೀಮತಿ ಲೂಸಿ ಸಾಲ್ಡಾನಾ ರವರ ಸಾರ್ಥಕ ಬದುಕಿನ ಕುರಿತು ಶಿಕ್ಷಕ ಸಾಹಿತಿ ವಾಯ್ ಬಿ ಕಡಕೋಳರವರ ಸಂಪಾದಿತ ಕೃತಿಯನ್ನು ಆಧರಿಸಿ, ಬಾಬಾಜಾನ ಮುಲ್ಲಾ ಮತ್ತು ನಂದಪ್ಪಗೌಡ ದ್ಯಾಪೂರ ರವರು ಶಿಕ್ಷಕ ಕಲಾವಿದರುಗಳಿಗೆ ಅವಕಾಶ ನೀಡಿ, ಒಂದು ಒಳ್ಳೆಯ ಸಿನಿಮಾ ಹೊರಬರಲು ಕಾರಣರಾಗಿದ್ದಕ್ಕಾಗಿ ಇಡೀ ಚಿತ್ರ ತಂಡಕ್ಕೆ ಇದೇ ಸಂದರ್ಭದಲ್ಲಿ ಶುಭಾಶಯ ಕೋರಿದರು, ನಿರ್ದೇಶಕ ಬಾಬಾಜಾನ ಮುಲ್ಲಾ ಮಾತನಾಡಿ, ಕಷ್ಟಪಟ್ಟು ಬದುಕು ಕಟ್ಟಿಕೊಂಡ ಮೇಲೆ ತಾವಾಯಿತು ತಮ್ಮ ಸಂಸಾರವಾಯಿತು ಎನ್ನುವವರ ಮದ್ಯೆ ಅಕ್ಷರತಾಯಿ ಲೂಸಿ ಸಾಲ್ಡಾನ ತುಂಬಾ ಆದರ್ಶವಾಗಿ ನಿಲ್ಲುತ್ತಾರೆ, ಇಂತಹ ಆದರ್ಶ ವ್ಯಕ್ತಿಯ ನೈಜ ಬದುಕನ್ನು ಸಿನಿಮಾ ಮಾಡಿ ತೆರೆಗೆ ತರುತ್ತಿದ್ದೇವೆ ಎಲ್ಲರ ಸಹಕಾರ ಇರಲಿ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ ಲಿಂಗದಾಳ ನಾನು ಧಾರವಾಡ ಗ್ರಾಮೀಣ ಭಾಗದ ಮುಗದ ಸಿ ಆರ್ ಪಿಯಾಗಿ ಕಾರ್ಯ ಮಾಡುವಾಗ ಲೂಸಿ ಸಾಲ್ಡಾನ ಮುಗದ ಶಾಲೆಯ ಮುಖ್ಯ ಶಿಕ್ಷಕಿಯಾಗಿ ನನಗೆ ತುಂಬಾ ಸಹಕಾರ ನೀಡಿದ್ದಾರೆ, ಆ ಸಮಯದಲ್ಲಿ ಅವರು ಬಡ ಮಕ್ಕಳಿಗೆ ಸಹಾಯ ಮಾಡುವುದನ್ನು ನಾನು ಕಣ್ಣಾರೆ ಕಂಡಿರುವೆ,ಇಂತಹ ಆದರ್ಶ ಶಿಕ್ಷಕಿಯು ಚಿಕ್ಕ ವಯಸ್ಸಿನಲ್ಲಿ ತಂದೆ,ತಾಯಿ ಬಂಧು ಬಳಗದಿಂದ ದೂರವಾಗಿ ಎಲ್ಲೋ ರೈಲು ಸಿಬ್ಬಂದಿಯ ಆಶ್ರಯದಲ್ಲಿ ಬೆಳೆದು, ಬಾಲ್ಯದಲ್ಲೇ ಮದುವೆಯಾಗಿ, ಬಾಲ ವಿಧವೆಯಾಗಿ, ಎಲ್ಲೋ ಎದ್ದು ಬಿದ್ದು ಅಕ್ಷರ ಕಲಿತು, ಮರು ಮದುವೆಯಾಗದೇ, ತನ್ನ ಶಾಲಾ ಮಕ್ಕಳಲ್ಲಿ ಸಂತಸವನ್ನು ಕಂಡು, ಬಾಳಿ ಬದುಕಿದ ಮಹಾನ್ ತಾಯಿ ಎಂದರು. ಫಾಧರ್ ಸೋಜರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ, ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಅಧ್ಯಕ್ಷರಾದ ವಿ ಎನ್ ಕೀರ್ತಿವತಿ, ಕಾರ್ಯಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ, ರಾಜಶೇಖರ ಹೊನ್ನಪ್ಪನವರ, ಮಹಾಂತೇಶ ಹುಬ್ಬಳ್ಳಿ, ಎ ಎಚ್ ನದಾಫ್,ಪ್ರಮೀಳಾ ಜಕ್ಕಣ್ಣವರ ಎಂ ಎಸ್ ಗಾಣಿಗೇರ ಮಲ್ಲಿಕಾರ್ಜುನ ಉಪ್ಪಿನ, ಬಿ ಆರ್ ಜಕಾತಿ,ಮೌನೇಶ ಕಮ್ಮಾರ, ಮಂಜುಳಾ ಜ್ಯೋತಿ, ಕಮಲಾಕ್ಷಿ ಹರತಕ್ಕಡಿ,ಮುಂತಾದವರು ಇದ್ದರು.

ನವೀನ ಹಳೆಯದು

نموذج الاتصال