SHIGAOU:ಶಿಗ್ಗಾಂವ ಕ್ಷೇತ್ರದಲ್ಲಿ "ಜೋಡೆತ್ತುಗಳ" ಬಿರುಸಿನ ಮತಬೇಟೆ

ಶಿಗ್ಗಾಂವ ಕ್ಷೇತ್ರದಲ್ಲಿ "ಜೋಡೆತ್ತುಗಳ" ಬಿರುಸಿನ ಮತಬೇಟೆ
ಶಿಗ್ಗಾಂವ : ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಛಾಟಿ ಏಟು ನೀಡಬೇಕೆಂದರೇ ಬಿಜೆಪಿಯ ಹುರಿಯಾಳು ಭರತ ಬೊಮ್ಮಾಯಿಯನ್ನ ಗೆಲ್ಲಿಸಬೇಕೆಂದು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಜಗದೀಶ ಶೆಟ್ಟರ್ ಹಾಗೂ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಮತದಾರರಲ್ಲಿ ಮನವಿ ಮಾಡಿದರು.
ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಕೋಣನಕೇರಿಯಲ್ಲಿ ಪ್ರಚಾರಾರ್ಥವಾಗಿ ಮಾತನಾಡಿದ ಇಬ್ಬರು ನಾಯಕರು, ಭರತ ಬೊಮ್ಮಾಯಿ ಯುವಕನಾಗಿದ್ದು ಕ್ಷೇತ್ರದ ಅಭಿವೃದ್ಧಿ ಮಾಡುವುದರಲ್ಲಿ ಯಾವುದೇ ಅಳುಕು ಮತದಾರರಲ್ಲಿ ಬೇಡ ಎಂದರು.
ರಾಜ್ಯದಲ್ಲಿ ಆಡಳಿತ ನಡಸುತ್ತಿರುವ ಕಾಂಗ್ರೆಸ್ ಸರಕಾರ ವಕ್ಪ್ ಹೆಸರಿನಲ್ಲಿ ರೈತರ ಜಮೀನುಗಳಿಗೆ ಕಣ್ಣು ಹಾಕಿದೆ. ಮೂಡಾ ಹಗರಣದಲ್ಲಿ ಸ್ವತಃ ಸಿಎಂ ಸಿದ್ಧರಾಮಯ್ಯ ಸಿಲುಕಿದ್ದಾರೆ. ಆದರೂ ಭಂಡತನದಿಂದ ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂದು ಟೀಕಿಸಿದರು.
ಮಳೆಯಿಂದ ಹಾನಿಯಾದ ಮನೆ ಹಾಗೂ ಬೆಳೆಗಳಿಗೆ ಪರಿಹಾರ ನೀಡಲು ಮೀನಮೇಷ ಎಣಿಸಲಾಗುತ್ತಿದೆ. ಈಗೀನ ಸರಕಾರ ತೀರಾ ಕಡಿಮೆ ಪರಿಹಾರ ಕೊಟ್ಟು ಎಲ್ಲ ಹಣವನ್ನ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆಂದು ಮುನೇನಕೊಪ್ಪ ಹೇಳಿದರು.
ಬಾಳು ಮಗಜಿಕೊಂಡಿ, ಮುತ್ತಣ್ಣ ಮನಮಿ, ರೋಹಿತ ಮತ್ತಿಹಳ್ಳಿ, ಮಹ್ಮದ ಬಿಜಾಪುರ, ಶಶಿಧರ ಪಟ್ಟಣಶೆಟ್ಟಿ, ಅಣ್ಣಪ್ಪ ದೇಸಾಯಿ, ಸುಭಾಸ ಕಿತ್ತಲಿ, ಆದರ್ಶ ಉಪ್ಪಿನ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال