ನಾಳೆ ಎನ್ ಟಿ ಟಿ ಎಫ್ 65ನೇ ಸ್ಥಾಪನಾ ದಿನಾಚರಣೆ.

ನಾಳೆ ಎನ್ ಟಿ ಟಿ ಎಫ್ 65ನೇ ಸ್ಥಾಪನಾ ದಿನಾಚರಣೆ.


ಧಾರವಾಡ 23 :
ನಗರದ ಪುತಿಷ್ಠಿತ ಕೌಶಲ್ಯ ತರಬೇತಿ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ನೆಟ್ಟೂರು ಟೆಕ್ನಿಕಲ್ ಟ್ರೈನಿಂಗ್ ಫೌಂಡೇಶನ್ (NTTF) 65 ನೇ ವರ್ಷದ ಸ್ನಾಪನಾ ದಿನಾಚರಣೆಯನ್ನು ನಾಳೆ  24 ರಂದು ಕನಾ೯ಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ  ಆಚರಿಸುತ್ತಿದೆ ಎಂದು ಪ್ರಾಂಶುಪಾಲರಾದ  ಎನ್ ಎಸ್ ಪೀಟರ್ ಅವರು
ತಿಳಸಿದರು . ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
1959ರಲ್ಲಿ ಸ್ಥಾಪನೆಯಾದ ಎನ್ ಟಿ ಟಿ ಎಫ್ ಕೈಗಾರಿಕೆಗೆ ಸಂಬಂಧಿಸಿದ ಕೌಶಲ್ಯಗಳನ್ನು ಅಸಂಖ್ಯೆ 25000 ಸಾವಿರಕ್ಕೂ ಹೆಚ್ಚು ಯುವಜನತೆಗೆ ತರಬೇತಿ ನೀಡಿ ಭಾರತದ ಬೆಳವಣಿಗೆಗೆ ಅಪಾರವಾದ ಕೊಡುಗೆಯನ್ನು ನೀಡಿದೆ ಎಂದರು.

ಈಗ ಒಂಬತ್ತು ವಿಷಯಗಳಲ್ಲಿ ವಿಭಾಗಗಳನ್ನು ಮಾಡಲಾಗಿದೆ ಎನ್ ಟಿ ಟಿ ಎಫ್ ತರಬೇತಿಯನ್ನು ಪಡೆದಿರುವ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ತಮ್ಮ ಕೈಗಾರಿಕಾ ಕೌಶಲ್ಯದ ಮೂಲಕ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರು.

ಈ 65 ನೇ ಮೈಲುಗಲ್ಲು ವರ್ಷದ ಆಚರಣೆಯಲ್ಲಿ ಎನ್ ಟಿ ಟಿ ಎಫ್ ಧಾರವಾಡ ತನ್ನ ಬೇಲೂರು ಕ್ಯಾಂಪಸಿನಲ್ಲಿ
 ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ  95  ವಿದ್ಯಾರ್ಥಿಗಳು ಭಾಗವಹಿಸಿ ರಕ್ತದಾನ ಮಾಡಿದರು, ಮುಂದಿನ ತಿಂಗಳಿನಿಂದ ಸ್ಥಳೀಯ ಕೈಗಾರಿಕೆ ಮತ್ತು ಶಾಲಾ-ಕಾಲೇಜುಗಳೊಂದಿಗೆ ವಾಲಿಬಾಲ್ ಪಂದ್ಯ  ಆಯೋಜಿಸಿದೆ.  ನಿನ್ನೆ 65 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ಎಂದರು.

ಎನ್ ಟಿ ಟಿ ಎಫ್ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹಾಗೂ ಕೈಗಾರಿಕಾ ವ್ಯವಸ್ಥೆಗೆ ಸರಿಹೊಂದುವ ಕೌಶಲ್ಯಯುಕ್ತ ಯುವ ಸಮುದಾಯವನ್ನು ಅಭಿವೃದ್ಧಿಪಡಿಸುವ ಕಾಯಕವನ್ನು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ
ಲತಾ ನಾಯ್ಡು ಮಂಜುನಾಥ್ ಕೋರಕೊಪ್ಪ ಜಿ ಎಸ್ ಕಲ್ಪನಾ ಉಪಸ್ಥಿತರಿದ್ದರು.

ನವೀನ ಹಳೆಯದು

نموذج الاتصال