ಗೂಂಜಾಳಕ್ಕೆ ಬೆಂಬಲ ಬೆಲೆ ರೂ, 3000 ನಿಗದಿ ಮಾಡಬೇಕು, ಬೆಳೆ ನಷ್ಟ ಪರಿಹಾರ ನೀಡಲು ಆಗ್ರಹ.
ಧಾರವಾಡ:--ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(ಆರ್.ಕೆ.ಎಸ್.) ವತಿಯಿಂದ ಗೂಂಜಾಳಕ್ಕೆ ಬೆಂಬಲ ಬೆಲೆ ರೂ, 3000 ನಿಗದಿ ಮಾಡಬೇಕು, ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಧಾರವಾಡ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು.
ಜಿಲ್ಲೆಯ ಧಾರವಾಡ ಕಲಘಟಗಿ ಮತ್ತು ಅಳ್ನಾವರ ತಾಲೂಕಿನ ರೈತರುಗಳಾದ ನಾವು ಗೊಂಜಾಳವನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದೇವೆ . ಈ ಬೆಳೆಯೇ ನಮ್ಮ ಜೀವನಕ್ಕೆ ಆಧಾರವಾಗಿದೆ. ಕಳೆದ ವರ್ಷ ಬರಗಾಲದಿಂದ ಗೊಂಜಾಳ ಮಣ್ಣುಪಾಲಾಯಿತು.
ಈ ವರ್ಷ ಉತ್ತಮ ಮಳೆಯಾದ ಕಾರಣ, ಉತ್ತಮ ಫಸಲು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ನಮಗೆ, ಗುಂಜಾಳ ಕೈ ಸೇರುವ ಹೊತ್ತಿಗೆ, ಅಕಾಲಿಕ ವಿಪರೀತ ಮಳೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಾರದೆ ನಿರಾಸೆ ಉಂಟು ಮಾಡಿದೆ. ಇಂತಹ ಸಂದರ್ಭದಲ್ಲಿ ಕೈಗೆ ಬಂದಿರುವ ಅಲ್ಪಸ್ವಲ್ಪ ಗುಂಜಾಳವನ್ನು ಮಾರಾಟ ಮಾಡಲು ಹೋದರೆ ಕಳೆದ ವಾರದಲ್ಲಿ, 3000 ದಿಂದ 3200 ವರೆಗೆ ಮಾರಾಟವಾಗಿದ್ದ, ಗೂಂಜಾಳ ಈಗ 1800-2000 ಮಾರಾಟವಾಗುತ್ತಿರುವುದರಿಂದ ರೈತರ ಚಿಂತೆಗೀಡು ಮಾಡಿದೆ. ನಾಲ್ಕು ಕೆಜಿ ಗೂಂಜಾಳ ಬೀಜಕ್ಕೆ 1500 ರಿಂದ 2000 ಕೊಟ್ಟು ತಂದು ಬಿತ್ತನೆ ಮಾಡಿದ್ದೇವೆ. ಅದೇ ಗುಂಜಾಳ ಮಾರುಕಟ್ಟೆಗೆ ಮಾರಾಟಕ್ಕೆ ಹೋದರೆ 1000 ಕೆಜಿ ಗೊಂಜಾಳಕ್ಕೆ 1800 -2000 ಕೇಳುತ್ತಿದ್ದಾರೆ. ಗುಂಜಾಳ ಬೆಳೆಯಲು ಬೀಜ ಗೊಬ್ಬರ, ಕೀಟನಾಶಕ ಸಿಂಪಡಿಸಲು ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಈ ಪರಿಸ್ಥಿತಿಯಲ್ಲಿ ನಾವು ಮಾರಾಟ ಮಾಡಿದರೆ, ಖರ್ಚು ಮಾಡಿದ ಹಣ ವಾಪಸ್ ಬಾರದೆ ನಮ್ಮ ದುಡಿಮೆ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ.
ಈ ಕೂಡಲೇ ಗೊಂಜಾಳ ಬೆಳೆಗೆ ಕನಿಷ್ಠ 3,000 ಕ್ವಿಂಟಲ್ ಗೆ ನಿಗದಿ ಮಾಡಬೇಕೆಂದು ಮನವಿಯಲ್ಲಿ
ದೀಪಾ ಧಾರವಾಡ ಜಿಲ್ಲಾಧ್ಯಕ್ಷರು,
ಶರಣು ಗೋನವಾರ ಜಿಲ್ಲಾ ಕಾರ್ಯದರ್ಶಿ ಆಗ್ರಹಿಸಿದ್ದಾರೆ.