SHIRSI: ಅಕ್ರಮ ಗಾಂಜಾ ಮತ್ತು ಚರಾಸ್ ಮಾರಾಟ: ಒರ್ವನ ಬಂಧನ* *ನಗರ ಠಾಣೆ ಸಿಬ್ಬಂದಿಗಳಿಂದ ಡ್ಯಾಶಿಂಗ್ ಕಾರ್ಯಾಚರಣೆ*



*ಅಕ್ರಮ ಗಾಂಜಾ ಮತ್ತು ಚರಾಸ್ ಮಾರಾಟ: ಒರ್ವನ ಬಂಧನ* *ನಗರ ಠಾಣೆ ಸಿಬ್ಬಂದಿಗಳಿಂದ ಡ್ಯಾಶಿಂಗ್ ಕಾರ್ಯಾಚರಣೆ*
ಶಿರಸಿ ನಗರದ ಭೀಮನಗುಡ್ಡ ಅರಣ್ಯ ಪ್ರದೇಶದ ಹತ್ತಿರ ಅಕ್ರಮವಾಗಿ ಗಾಂಜಾ ಮತ್ತು ಚರಾಸ್  ಮಾರಾಟ ಮಾಡುತ್ತಿದ್ದ ಮಂಗಳೂರಿನ ಶಕ್ತಿ ನಗರದ ವಿಕ್ರಮ ಯಾನೆ ವಿಕ್ಕಿ ದೇವದಾಸ ಶೆಟ್ಟಿ ಈತನ್ನನ್ನು  ಶಿರಸಿ ನಗರ ಠಾಣೆ ಪೊಲೀಸರು ಹೊಂಚು ಹಾಕಿ ಬಂಧಿಸಿದ ಘಟನೆ ವರದಿಯಾಗಿದೆ.ಆರೋಪಿಯು ಅಕ್ರಮವಾಗಿ ಗಾಂಜಾ ಮತ್ತು ಚರಾಸ್ ಸಾಗಾಟ ಮಾಡಿಕೊಂಡು ಬಂದು ಭೀಮನಗುಡ್ಡದ ಅರಣ್ಯ ಪ್ರದೇಶದ ಬಳಿ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದು ಇತನಿಂದ   ಅಂದಾಜು 12 ಸಾವಿರ ರೂ ಬೆಲೆಯ 115 /- ಗ್ರಾಂ  ಗಾಂಜಾ, 50 ಸಾವಿರ ರೂ  ಮೌಲ್ಯದ 25 ಗ್ರಾಂ ಚರಾಸ್ ಹಾಗೂ ಕೃತ್ಯಕ್ಕೆ ಬಳಸಲಾದ  ಮಾರುತಿ ಅಲ್ಟ್ ಕಾರು, ಚಿಲುಮೆ, ರೋಲಿಂಗ್ ಪೆಪರ್,ಗಾಂಜಾ ಕ್ರಷರ್ ಡಬ್ಬ ಮತ್ತು 4,450/- ರೂ ನಗದು ಹಣವನ್ನು  ಜಪ್ತಿ ಪಡಿಸಿಕೊಳ್ಳಲಾಗಿದೆ.ಎಸ್ಪಿ  ಎಂ ನಾರಾಯಣ್  ಮಾರ್ಗದರ್ಶನ  ಡಿಎಸ್ಪಿ  ಗಣೇಶ ಕೆ‌ಎಲ್ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಕಿ ಸಿಪಿಆಯ್ ಶಶಿಕಾಂತ ವರ್ಮಾ, ಪಿಎಸ್ಐ ನಾಗಪ್ಪ ಬಿ  ಸಿಬ್ಬಂದಿಗಳಾದ ಹನುಮಂತ ಕಬಾಡಿ, ಮಲ್ಲಿಕಾರ್ಜುನ ಕುದರಿ, ಅರುಣ ಲಮಾಣಿ, ಮಂಜುನಾಥ ಕಾಶಿಕೋವಿ,ಸದ್ದಾಂ ಹುಸೇನ್,ಪ್ರವೀಣ್ ಎನ್,ರಾಜಶೇಖರ ರವರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವೀನ ಹಳೆಯದು

نموذج الاتصال