DHARWAD:ಅಭ್ಯಾಸ ಒಂದು ಹೊರೆಯಲ್ಲ ಡಾ.ರಾಜನ್ ದೇಶಪಾಂಡೆ.

ಅಭ್ಯಾಸ ಒಂದು ಹೊರೆಯಲ್ಲ ಡಾ.ರಾಜನ್ ದೇಶಪಾಂಡೆ.
"ವಿದ್ಯಾರ್ಥಿಗಳು ಓದಿ ಜ್ಞಾನವನ್ನು ಸಂಪಾದಿಸಬೇಕು. ಶ್ರಮ ವಹಿಸಿ ದುಡಿಯಬೇಕು ಮತ್ತು ಪ್ರಾಮಾಣಿಕವಾಗಿ ಸಂಪಾದಿಸಬೇಕು. ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಪ್ರೋತ್ಸಾಹಿಸಿದ ಪಾಲಕರನ್ನು, ಸಹಾಯ ಮಾಡಿದ ದಾನಿಗಳನ್ನು, ಗುರುಗಳನ್ನು ಎಂದಿಗೂ ಮರೆಯಬಾರದು." ಎಂದು ಮಕ್ಕಳ ತಜ್ಞ ಡಾ.ರಾಜನ್ ದೇಶಪಾಂಡೆ ಹೇಳಿದರು.
ಅವರು
ಧಾರವಾಡ ಮಾಳಮಡ್ಡಿಯ ಪ್ರಹ್ಲಾದ ವಿದ್ಯಾರ್ಥಿ ನಿಲಯದ ಹಳೆಯ ವಿದ್ಯಾರ್ಥಿಗಳು ಮಾಡಿಕೊಂಡಿರುವ ನಿಲಯ ಫೌಂಡೇಶನ್ ತನ್ನ ಮಾತೃ ಸಂಸ್ಥೆ ಪ್ರಹ್ಲಾದ ವಿದ್ಯಾರ್ಥಿ ನಿಲಯದ ಸಹಕಾರದೊಂದಿಗೆ ಸಂಘಟಿಸಿದ ಸಮಾರಂಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಿ ಮಾತನಾಡಿದರು. ವಿಶೇಷ ಆಹ್ವಾನಿತ ಅತಿಥಿಗಳಾಗಿ ಸಾಹಿತಿ ಡಾ.ಕೃಷ್ಣ ಕಟ್ಟಿ ಮತ್ತು ಪ್ರಖ್ಯಾತ ವೈದ್ಯ ಡಾ.ರಾಘವೇಂದ್ರ ಬೆಳಗಾಂವಕರ  ವೇದಿಕೆಯಲ್ಲಿದ್ದರು.  ನಿಲಯದ ಕಾರ್ಯದರ್ಶಿ ಕೃಷ್ಣ ಆರ್ ದೇಶಪಾಂಡೆ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಹ ವೆಂ  ಕಾಖಂಡಿಕಿಯವರು ಸಹ ವೇದಿಕೆಯಲ್ಲಿದ್ದರು.

ಅತಿಥಿ ಡಾ.ಕೃಷ್ಣ ಕಟ್ಟಿಯವರು ಮಾತನಾಡುತ್ತಾ "ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು. ಆಸಕ್ತಿ ಇರುವ ಕ್ಷೇತ್ರ ಆರಿಸಿಕೊಂಡು ಅದರಲ್ಲಿ ಪ್ರಾವೀಣ್ಯತೆಯನ್ನು ಗಳಿಸಬೇಕು. ತಮ್ಮ ಪ್ರತಿಭೆಗೆ ಸಿಕ್ಕ ಶಿಷ್ಯವೇತನ ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಆಸಕ್ತಿಯ ವಿಷಯ ಆರಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಎಂದು ಹೇಳಿದರು. ಇನ್ನೋರ್ವ ಅತಿಥಿ ಡಾ.ರಾಘವೇಂದ್ರ ಬೆಳಗಾಂವಕರ ಮಾತನಾಡಿ "ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ. ಶಿಕ್ಷಣವನ್ನು ಪಡೆಯಲು ಇಂದು ಸಾಕಷ್ಟು ಅವಕಾಶಗಳಿವೆ. ಉದ್ಯೋಗ ದೊರೆತಾಗ ಸಮಾಜದ ಋಣ ತೀರಿಸುವ ಮನಸ್ಸು ಮಾಡಬೇಕು. ನಿಲಯ ಫೌಂಡೇಶನ್ ಮತ್ತೆ ಉಳಿದವರಿಗೆ ಸಹಾಯ ಮಾಡಲು ಕೈ ಜೋಡಿಸಬೇಕು. ಎಂದರು.         ಅಧ್ಯಕ್ಷೀಯ ನುಡಿಗಳಲ್ಲಿ ಕೆ ಆರ್ ದೇಶಪಾಂಡೆಯವರು ನಿಲಯ ಫೌಂಡೇಶನ್ ಕಾರ್ಯವನ್ನು ಶ್ಲಾಘಿಸಿ, ಶಿಷ್ಯವೇತನ ಪಡೆದ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ರಂಗನಾಥ ಯಾದವಾಡ ಶಿಷ್ಯವೇತನ ಪಡೆದವರ ಹೆಸರುಗಳನ್ನು ಓದಿದರು.
ಒಟ್ಟು ಎಂಬತ್ತು ವಿದ್ಯಾರ್ಥಿಗಳಿಗೆ ಹದಿನೆಂಟು ಲಕ್ಷ ರೂಪಾಯಿ ಶಿಷ್ಯವೇತನ ವಿತರಿಸಲಾಯಿತು.
                   ಶ್ರೀಧರ ಕುಲಕರ್ಣಿ, ಸಮೀರ ಜೋಶಿ, ಅನಿಲ ಹರಿಹರ, ರಾಜೀವ್ ಪಾಟೀಲ ಕುಲಕರ್ಣಿ, ಸುಧೀಂದ್ರ ದೇಶಪಾಂಡೆ, ಎಸ್ ಎಮ್ ದೇಶಪಾಂಡೆ ಮೊದಲಾದವರು ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು.   ದೀಪಕ ಸಾನಬಾಳ ಪ್ರಾರ್ಥನೆ .ವಿದ್ಯಾಸಾಗರ ದೀಕ್ಷಿತ ಕಾರ್ಯಕ್ರಮ ನಿರ್ವಹಣೆ , ಸಂಜಯಕುಮಾರ ಕುಲಕರ್ಣಿ ಸ್ವಾಗತ ಡಾ. ಹ ವೆಂ ಕಾಖಂಡಿಕಿ ಪ್ರಾಸ್ತಾವಿಕ , ಡಾ.ಆರ್ ವೈ ಕಟ್ಟಿ ವಂದನಾರ್ಪಣೆ ಮಾಡಿದರು.
ನವೀನ ಹಳೆಯದು

نموذج الاتصال