ದೇವಸ್ಥಾನದ ನಾಮ ಫಲಕ ಉದ್ಘಾಟಿನೆ - ಶಂಕರ ಶೇಳಕೆ.
ಧಾರವಾಡ 13 : ರವಿವಾರ ಪೇಟ ಬಾಳೆಕಾಯಿ ಓಣಿಯ ಶ್ರೀ ನಾಮದೇವ ಹರಿಮಂದಿರ ಶ್ರೀ ವಿಠಲ ರುಕ್ಮಿಣಿ ಶ್ರೀ ಸಿದ್ದವಿನಾಯಕ ದೇವಸ್ಥಾನದ ನಾಮಫಲಕವನ್ನು ಪಾಲಿಕೆ ಸದಸ್ಯ ಶಂಕರ ಶೇಳಕೆ ವಿಜಯ ದಷಮಿ ದಿನ ಸಾಯಂಕಾಲ ಉದ್ಘಾಟಿಸಿದರು , ಈ ಮಂದಿರ ಶ್ರೀ ನಗರೇಶ್ವರ ದೇವಸ್ಥಾನ ಹತ್ತಿರ ಇದ್ದರು ಚಿಕ್ಕ ಬಾಳೆಕಾಯಿ ಓಣಿಯಲ್ಲಿ ಇದ್ದುದರಿಂದ ನಾಮದೇವ ಸಿಂಪಿ ಸಮಾಜದ ಬಾಂಧವರಿಗೆ ಬಿಟ್ಟು ಇತರರಿಗೆ ಗೊತ್ತಾಗುತ್ತಿರಲಿಲ್ಲ ಮುಖ್ಯ ರಸ್ತೆಯಲ್ಲಿ ನಾಮಫಲಕ ಅಳವಡಿಸಿದ ಕಾರಣ ಎಲ್ಲರಿಗೂ ಗುಡಿಯನ್ನು ಗುರತಿಸಲು ಅನುಕೂಲ ಆಗುತ್ತದೆ, ನಿಮ್ಮ ಸಮಾಜಕ್ಕೆ ಸಹಾಯ ಸಹಕಾರ ನೀಡಲು ನಾನು ಸದಾ ಸಿದ್ದ ಎಂದರು. ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಮಧುಸೂದನ ಪಿಸೆ,ಉಪಾಧ್ಯಕ್ಷ ಪ್ರಭಾಕರ ಭೂಂಗಾಳೆ, ಕಾಯ೯ದಶಿ೯ ಲಕ್ಷ್ಮಣ ಮುಳೆ, ಸುರೇಶ ಸದರೆ, ಧೂಂಡಿಬಾ ಕ್ಷಿರಸಾಗರ,ಕ್ರಿಷ್ಣಾ ಚಿಕ್ಕೂಡೆ೯, ಆನಂದ ರೇಣಕೆ,ಧನಂಜಯ ಪಿಸೆ, ನವೀನ ಮಿರಜಕರ ಮುಂತಾದವರು ಇದ್ದರು.