ಪಾದಚಾರಿಗೆ ಬಿ ಆರ್ ಟಿ ಎಸ್ ಡಿಕ್ಕಿ ಸಾವು .
ಧಾರವಾಡ 07 : ಧಾರವಾಡದ ಜೆಎಸ್ಎಸ್ ಕಾಲೇಜ್ ಬಳಿ ಇರುವ ಕೇಸರ ಹೋಟೆಲ್ ಎದುರುಗಡೆ ಬಿ ಆರ್ ಟಿ ಎಸ್ ಬಸ್ಸ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಅಡಿಯಲ್ಲಿ ಸಿಲುಕಿದ ರಾಜಸ್ಥಾನ್ ಮೂಲದ ನಿವಾಸಿ
ಬಡಿಗತನದ ಕೆಲಸಕ್ಕೆ ಧಾರವಾಡಕ್ಕೆ ಬಂದಿದ್ದ ವಿಜಯ ದಾನ್ (40) ವ್ಯಕ್ತಿ ಗಂಭೀರ ಗಾಯಗೊಂಡಿದ್ದ. ಕೂಡಲೇ ಎಸ್ ಡಿ ಎಮ್ ಆಸ್ಪತ್ರೆಗೆ ಸಾಗಿಸಲಾಗಿತ್ತು ,ಚಿಕಿತ್ಸೆಯು ಫಲಕಾರಿ ಆಗದೆ ಸಾವನಪ್ಪಿದ್ದಾರೆ. ಧಾರವಾಡ ಸಂಚಾರಿ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.