DHARWAD: ಅಕ್ಟೋಬರ್ 5 ರಂದು ಗೃಹ ಸಚಿವರ ಧಾರವಾಡ ಜಿಲ್ಲಾ ಪ್ರವಾಸ*

*ಅಕ್ಟೋಬರ್ 5 ರಂದು ಗೃಹ ಸಚಿವರ ಧಾರವಾಡ ಜಿಲ್ಲಾ ಪ್ರವಾಸ*

ಧಾರವಾಡ. 4: ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ಅವರು ಅಕ್ಟೋಬರ್ 5ರಂದು ಧಾರವಾಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. 

ಅಕ್ಟೋಬರ್ 5 ರಂದು ಬೆಳಿಗ್ಗೆ 6.20 ಕ್ಕೆ ವಿಮಾನದ ಮೂಲಕ‌ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸುವರು. ಬೆಳಿಗ್ಗೆ 10 ಗಂಟೆಗೆ ಧಾರವಾಡದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವರು. ಸಂಜೆ 4 ಗಂಟೆಗೆ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಯಿಂದ ರೋಣ ತಾಲ್ಲೂಕಿನ ಅಬ್ಬಿಗೇರಿಗೆ ಪ್ರಯಾಣಿಸುವರು. ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡುವರು. ಅಕ್ಟೋಬರ್ 6 ರಂದು ಬೆಳಿಗ್ಗೆ 7.55 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮರಳಿ ಪ್ರಯಾಣ ಮಾಡಲಿದ್ದಾರೆ ಎಂದು ಸಚಿವರ ಆಪ್ತ ಸಹಾಯಕರಾದ ಚಂದ್ರಶೇಖರ ವೀರಾಪೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
****
ನವೀನ ಹಳೆಯದು

نموذج الاتصال