ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ಪ್ರಮೋದ ಮುತಾಲಿಕ್ ಆಕ್ರೋಶ

 ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ಪ್ರಮೋದ ಮುತಾಲಿಕ್ ಆಕ್ರೋಶ 
ಧಾರವಾಡ: ಸೇವೆಯ ನೆಪದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಹಿಂದೂ ಸಂಪ್ರದಾಯಕ್ಕೆ ಅಪಮಾನ ಮಾಡುತ್ತಿವೆ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಹಬ್ಬಕ್ಕೆ ಸರ್ಕಾರ ಅಧಿಕೃತ ರಜೆ ಘೋಷಣೆ ಮಾಡಿದ್ದು, ಈ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ದಸರಾ ರಜೆಯ ಆದೇಶ ಉಲ್ಲಂಘಿಸುವ ಯಾವ ಯಾವ ಸಂಸ್ಥೆಗಳ ಶಾಲೆಗಳು ಇವೆಯೋ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
 ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಧಾರವಾಡ ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಸಂಘಟನಾ ಕಾರ್ಯದರ್ಶಿ ಮುಂಜುನಾಥ ಕಾಟಕರ್, ತಾಲೂಕು ಅಧ್ಯಕ್ಷ ಮೈಲಾರ ಗುಡ್ಡಪ್ಪನವರ, ಮಹಾಲಿಂಗ ಅಗಳಿ, ಸೋಮಶೇಖರ ಸೇರಿದಂತೆ ಹಲವರು ಇದ್ದರು.
 *ಇಸ್ರೇಲ್ ದೇಶಭಕ್ತಿ ಎಲ್ಲರಿಗೂ ಮಾದರಿ; ಪ್ರಮೋದ ಮುತಾಲಿಕ್* 

ಧಾರವಾಡ: ಭಯೋತ್ಪಾದನೆ ವಿಷಯದಲ್ಲಿ ಇಸ್ರೇಲ್ ದೇಶಭಕ್ತಿ ಎಲ್ಲರಿಗೂ ಮಾದರಿ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ತಿಳಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಸೇನೆ ಹಾಗೂ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ಇಸ್ರೇಲ್ ಬೆಂಬಲಕ್ಕೆ ಇದ್ದೇವೆ. ನಮ್ಮ ಹೋರಾಟ ಭಯೋತ್ಪಾದಕ ಚಟುವಟಿಕೆ ವಿರುದ್ಧ ಈ ಕುರಿತು ಒಗಟ್ಟಾಗಿರಬೇಕು ಭಯೋತ್ಪಾದಕ ಚಟುವಟಿಕೆ ಮಟ್ಟ ಹಾಕಬೇಕೆಂದು ತಿಳಿಸಿದರು.
ನವೀನ ಹಳೆಯದು

نموذج الاتصال