ಪೋಲಿಯೋ ನಿರ್ಮೂಲನೆಗಾಗಿ ರೋಟರಿ ಸಾರಿ ರನ್
ಧಾರವಾಡ : ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡ ಇವರ ವತಿಯಿಂದ ನಡೆದ "ರೋಟರಿ ಸಾರಿ ರನ್" ಒಂದು ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ಸಾರುವ ಜಾಗೃತಿ ಕಾರ್ಯಕ್ರಮ ನಿನ್ನೆ
ಧಾರವಾಡದಲ್ಲಿ ಜರುಗಿತು.
ಬೆಳಗಿನ ಜಾವ ಧಾರವಾಡದ ದಟ್ಟವಾದ ಮಂಜು ಕವಿದ ವಾತಾವರಣದಲ್ಲಿ ಕರ್ನಾಟಕ ಮಹಾವಿದ್ಯಾಲಯದಲ್ಲಿ ವಿವಿಧ ಸಂಘಟನೆಗಳಿಗೆ ಸೇರಿದ್ದ ನೂರಾರು ಜನ ಮಹಿಳೆಯರು ಸೇರಿದ್ದರು
ಜುಂಬಾ ನೃತ್ಯ ಚಟುವಟಿಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಸವಿತಾ ಅಮರಶೆಟ್ಟಿಯವರು ಚಾಲನೆ ನೀಡಿದರು. ಮಹಿಳೆ ಶಕ್ತಿಯ ಸಂಕೇತ, ಆಕೆಯಿಂದಲೇ ಜಾಗೃತಿ ಹಾಗೂ ಸುಧಾರಣೆ ಪ್ರಾರಂಭ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪೋಲಿಯೋ ವಿರುದ್ದ ರೋಟರಿ ಕೈಗೊಳ್ಳುತ್ತಿರುವ ಎಲ್ಲ ಕಾರ್ಯಕ್ರಮ ಗಳನ್ನು ವಿವರಿಸಿದರು. ಪೋಲಿಯೋ ನಿರ್ಮೂಲನೆ ಗೆ ಕೊಡಲ್ಪಡುತ್ತಿರುವ ಔಷಧಿಯನ್ನು ರೋಟರಿ, 5 ವರ್ಷ ವಯಸ್ಸಿನಲ್ಲಿ ಎಲ್ಲ ಮಕ್ಕಳಿಗೆ ತಲುಪಿಸುವಂತಹ ಮಹತ್ತರ ಪಾತ್ರ ವಹಿಸುತ್ತಿದೆ.ನಮ್ಮ ಕ್ಲಬ್‌ನ ಕಡೆಯಿಂದ ಇವತ್ತಿನ ದಿನ ಪೋಲಿಯೋ ನಿರ್ಮೂಲನೆಗಾಗಿ ಹಣವನ್ನು ಅಂತರಾಷ್ಟ್ರೀಯ ರೋಟರಿ ಗೆ ಕೊಡಲಾಗುತ್ತದೆ ಎಂದರು.
ಪ್ರಾರಂಭಿಕವಾಗಿ ಈ ಕಾರ್ಯಕ್ರಮವನ್ನು ಜುಂಬಾ ನೃತ್ಯದೊಂದಿಗೆ ಆರಂಭಿಸಲಾಯಿತು. ನಂತರ ಮಹಿಳೆಯರು ಸಾಲುಗಳನ್ನು ಮಾಡಿಕೊಂಡು, ಎಲ್.ಐ.ಸಿ ರಂಗಾಯಣ ಕೋರ್ಟ್ ಸರ್ಕಲ್ ಮಾರ್ಗವಾಗಿ ಭಾರತ ಸ್ಕೌಟ್ ಹಾಗೂ ಗೈಡ್ಸ್ ಮುಟ್ಟಿದರು. ದಾರಿಯುದ್ದಕ್ಕೂ ಪೋಲಿಯೋ ನಿರ್ಮೂಲನೆ ಸಂಬಂಧವಾಗಿ ಘೋಷಣೆಗಳನ್ನು ಕೂಗಲಾಯಿತು.
ಸಾರಿ ರನ್ ನಲ್ಲಿ ಪಾಲ್ಗೊಂಡ ಎಲ್ಲ ಮಹಿಳೆಯರಿಗೆ ಪದಕ ಹಾಗೂ ಪ್ರಶಸ್ತಿಪತ್ರ ಕೊಡಲಾಯಿತು.
ಸುಮಾರು 260 ಮಹಿಳೆಯರು ಪಾಲ್ಗೊಂಡಿದ್ದರು.ಅಬಾಲವೃದ್ದರಾಗಿ ಎಲ್ಲ ವಯಸ್ಸಿನ ಮಹಿಳೆಯರು ಪಾಲ್ಗೊಂಡಿದ್ದು, ಮುನವಳ್ಳಿ, ಬಿಜಾಪುರ ಹಾಗೂ ರಾಯಚೂರಿನಿಂದಲೂ ಮಹಿಳೆಯರು ಬಂದು ಪಾಲ್ಗೊಂಡಿದ್ದದು ಒಂದು ವಿಶೇಷವಾಗಿತ್ತು. ಎಂಟು ವಯಸ್ಸಿನ ಪುಟ್ಟ ಮಗುವಿನಿಂದ ಎಂಭತ್ತು ವಯಸ್ಸಿನ ವೃದ್ಧ ಮಹಿಳೆಯವರೆಗೆ ಎಲ್ಲರೂ ಒಂದೇ ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದರು.
ಕ್ಲಬ್‌ನ ಅಧ್ಯಕ್ಷರಾದ ಗೌರಿ ಮದಲಭಾವಿ ಎಲ್ಲರನ್ನು ಸ್ವಾಗತಿಸಿದರು. , ಕಾರ್ಯಕ್ರಮದ ಸಂಯೋಜಕರು ರೋ.ಡಾ.ಶ್ವೇತಾ ಶೂರಪಾಲಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು.ಸುಮನ್ ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯದರ್ಶಿಯಾದ ಸ್ಮಿತಾ ಮಂತ್ರಿ ವಂದಿಸಿದರು.