ಧಾರವಾಡ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಧಾರವಾಡದ ಕಲಿಕಾರ್ಥಿ ಸಹಾಯ (ಅಧ್ಯಯನ) ಕೇಂದ್ರದಲ್ಲಿ 2024-25 ನೇ ಸಾಲಿಗೆ ಆನ್‌ಲೈನ್ ಪ್ರವೇಶ ಪ್ರಾರಂಭಗೊಂಡಿವೆ ಎಂದು ಸಂಯೋಜಕ ಎಚ್.ಎನ್.ನಾಗರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಮುಕ್ತ ಹಾಗೂ ದೂರ ಶಿಕ್ಷಣ ನೀಡುವ ರಾಜ್ಯದ ಏಕೈಕ ವಿಶ್ವವಿದ್ಯಾಲಯ. ಇದೀಗ ಜುಲೈ ಆವತ್ತಿ ಪ್ರವೇಶ ಪ್ರಾರಂಭಿಸಿದೆ ಎಂದು ಹೇಳಿದರು.
ಯುಸಿಜಿ, ಡಿಇಬಿ ಹಾಗೂ ಎಐಸಿಟಿಇ, 'ಎ'ಪ್ಲಸ್ ಮಾನ್ಯತೆ ಪಡೆದಿರುವ ಮುಕ್ತ ವಿವಿಯು 'ಎಲ್ಲರಿಗೂ ಉನ್ನತ ಶಿಕ್ಷಣ ಎಲ್ಲಡೆ' ಎಂಬ ಧ್ಯೇಯವಾಕ್ಯದೊಂದಿಗೆ ಪ್ರತಿಯೊಬ್ಬರ ಮನೆಯ ಬಾಗಿಲಿಗೆ ಶಿಕ್ಷಣ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.
ಧಾರವಾಡ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲಕ್ಕೆ ಧಾರವಾಡದ ಜ್ಯುಬ್ಲಿ ವೃತ್ತದಲ್ಲಿ ಮೈಸೂರು ಮುಕ್ತ ವಿವಿ ಕಲಿಕಾರ್ಥಿ ಸಹಾಯ ಕೇಂದ್ರ ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಯುಜಿಸಿ ಹೊಸ ನಿಯಮದಂತೆ ಕಲಿಕಾರ್ಥಿ ಏಕಕಾಲದಲ್ಲಿ ಎರಡು (ಭೌತಿಕ ಹಾಗೂ ದೂರ ಶಿಕ್ಷಣ) ಕೋರ್ಸ್ಗೆ ಪ್ರವೇಶ ಪಡೆಯಬಹುದು. ಅಲ್ಲದೇ, ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯ ಇದೆ ಎಂದು ತಿಳಿಸಿದರು.
50 ಕ್ಕೂ ಅಧಿಕ ಕೋರ್ಸ್ಗಳಿವೆ. ಧಾರವಾಡದಲ್ಲೇ ಪರೀಕ್ಷೆಗಳು ನಡೆಯಲಿವೆ. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ, ತರಬೇತಿ ಜೊತೆಗೆ ಉದ್ಯೋಗ ಮೇಳದ ಮೂಲಕ ಉದ್ಯೋಗ ಲಭಿಸಲಿದೆ ಎಂದರು.
ಬಿಎ, ಬಿಕಾಂ, ಬಿಎಸ್ಸಿ ಸಾಮಾನ್ಯ, ಬಿಎಸ್ಸಿ ಐಟಿ, ಬಿಎಸ್ಸಿ ಹೋಂ ಸೈನ್ಸ್, ಬಿಬಿಎ, ಬಿಸಿಎ, ಬಿಎಸ್‌ಡಬ್ಲುö್ಯ, ಬಿಎಲ್‌ಐಎಸ್ಸಿ ವಿಷಯದಲ್ಲಿ ಸ್ನಾತಕ ಪದವಿ, ವಿವಿಧ ವಿಷಯಗಳ ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ್ಗೆ ಅವಕಾಶ ಇರುವುದಾಗಿ ಹೇಳಿದರು.
ಇದಲ್ಲದೇ, ಸ್ನಾತಕೋತ್ತರ ವಿಭಾಗದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ಉರ್ದು, ಸಂಸ್ಕೃತಿ, ಇತಿಹಾಸ, ಅರ್ಥಶಾಸ್ತ, ರಾಜ್ಯಶಾಸ್ತ, ಸಮಾಜಶಾಸ್ತ, ಸಾರ್ವಜನಿಕ ಆಡಳಿತ, ಶಿಕ್ಷಣ, ಪತ್ರಿಕೋದ್ಯಮ ಹೀಗೆ ಹಲವಾರು ಕೋರ್ಸ್ಗಳಿವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಅಂಕಪಟಿಗಳು, ಆಧಾರ್ ಕಾರ್ಡ್ ಹಾಗೂ ಎಂಟು ಭಾವಚಿತ್ರ ಒಳಗೊಂಡ ಮೂರು ಸೆಟ್ ಝರಾಕ್ಸ್ ಪ್ರತಿಗಳು ಮತ್ತು ಮೂಲ ದಾಖಲೆಗಳೊಂದಿಗೆ ಪ್ರವೇಶ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಪ್ರವೇಶಾತಿಗೆ ನ.15 ಕೊನೆಯ ದಿನ. ಮಾಹಿತಿಗಾಗಿ ಜ್ಯುಬ್ಲಿ ಸರ್ಕಲ್‌ನ ಎಕ್ಸಿಸ್ ಬ್ಯಾಂಕ್ ಎಟಿಎಂ ಮೇಲ್ಗಡೆ ಇರುವ ಉದ್ಯೋಗ ಭವನ ಮೊದಲ ಮಹಡಿಯ ಕೆಎಸ್‌ಓಯು ಅಧ್ಯಯನ ಕೇಂದ್ರ ಅಥವಾ ಮೊ: 9480062375 , ಕಚೇರಿ ಸಂಖ್ಯೆ ಮೊ: 9480043794 ಕ್ಕೆ ಸಂಪರ್ಕಿಸಲು ಕೋರಿದರು.