ವಿದ್ಯಾಗಿರಿ ಪೊಲೀಸ ಠಾಣೆ ಧಾರವಾಡ ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆಯರಿಬ್ಬರು ಸೇರಿ 04 ಜನರ ಬಂಧನ
ದಿನಾಂಕ. 09/10/2024 ರಂದು ಧಾರವಾಡ ವಿದ್ಯಾಗಿರಿ ಪೊಲೀಸ ಠಾಣೆಯಲ್ಲಿ ದೂರುದಾರನೊಬ್ಬ ನೀಡಿದ ದೂರಿನ ಮೇರೆಗೆ ದಾಖಲಾದ ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿ ಒಟ್ಟು 04 ಜನರಿಗೆ ಬಂಧಿಸಿ ಅವರಿಂದ ಒಟ್ಟು 04 ವಿವಿಧ ಕಂಪನಿಯ ಮೊಬೈಲ್ ಪೋನುಗಳು, ಒಂದು ಸೊಡಾ ಕಂಪನಿಯ ಕಾರು, 5.50,000/- ರೂಪಾಯಿ ನಗದು ಹಣ. 85.05 ಗ್ರಾಂ ತೂಕದ 6,63,000/- ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳು ಹಾಗೂ 3000/- ರೂ ಬೆಲೆಬಾಳುವ ಬೆಳ್ಳಿಯ ಖಡಗ ಹೀಗೆ ಒಟ್ಟು 14,73,000/- ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.
ಬಂಧಿತ ಆರೋಪಿತರ ವಿವರ
1) ಆಕಾಶ ತಂದೆ ರವಿ ಉಪ್ಪಾರ, ಸಾ: ಧಾರವಾಡ
2) ಗಜಾಲಾಭಾನು @ ಅಂಜು @ ಪರ್ವೀನ ತಂದೆ ಬಸೀರ ನಗರಿ, ಸಾ: ಹುಬ್ಬಳ್ಳಿ
3) ಶ್ರೀಮತಿ ರೇಣುಕಾ @ ರಿಯಾನಾ ಕೋಂ ಆಕಾಶ ಉಪ್ಪಾರ, ಸಾ: ಧಾರವಾಡ
4) ಮಲ್ಲೀಕಜಾನ ತಂದೆ ಮೆಹಬೂಬಸಾಬ ನದಾಫ, ಹುಬ್ಬಳ್ಳಿ
ಬಂಧಿತ ಆರೋಪಿತರಿಂದ ಅವರು ಇದೇ ಮಾದರಿಯ ಇತರೆ ಪ್ರಕರಣಗಳನ್ನು ಮಾಡಿರುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು ಅಲ್ಲದೇ ಇಂತಹ ಪ್ರರಕಣಗಳಲ್ಲಿ ಸಿಲುಕಿರುವ ಇತರ ನೊಂದ ವ್ಯಕ್ತಿಗಳ ಬಗ್ಗೆ ಹಾಗೂ ಇದೇ ಮಾದರಿಯ ಪ್ರಕರಣಗಳನ್ನು ನಡೆಸುತ್ತಿರುವ ಇನ್ನಿತರ ಆರೋಪಿತರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು ಅಂತಹ ಎಲ್ಲ ಪ್ರಕರಣಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಪ್ರಭು ಗಂಗೆನಹಳ್ಳಿ. ಸಂಗಮೇಶ್ ದಡಗನಾಳ. ಮಾರುತಿ. ಗೋಳಾರಿ. Dcp ನಂದಗಾವಿ. Acp. ಪ್ರಶಾಂತ ಸಿದ್ಧನಗೌಡ್ರು ಇದ್ದರು.