*ಸಹಿ ರೀ ಸಹಿ* ( Signature its Signature )
ಮರಾಠಿ ರಂಗಭೂಮಿಯ ಹೆಸರಾಂತ ಕಲಾವಿದ ಶ್ರೀ ಕೇದಾರ್ ಶಿಂಧೆ ಅವರ ಒಂದು ನಗೆ ನಾಟಕವೇ ಈ *ಸಹೀ ರೀ ಸಹಿ* ನಾಟಕ. ಹೇಳಲು ಇದೊಂದು ನಗೆ ನಾಟಕ, ಆದರೆ ರಂಗದಲ್ಲಿ ಎಲ್ಲಾ ಬಗೆಯ ವ್ಯವಸ್ಥೆಗಳನ್ನು ಮೈಗೂಡಿಸಿಕೊಂಡು ಅತ್ಯದ್ಬುತವಾದ ಕಲಾ ವ್ಯವಸ್ಥೆ ಇದು. ಈ ನಾಟಕದ ಬಗ್ಗೆ ಎಷ್ಟು ನಾವೇಳಿದರೂ ಅದು ಕಡಿಮೆಯೇ ಹೌದು, ನೋಡಿಯೇ ಆಹ್ವಾದಿಸಿ ಆನಂದಿಸಬೇಕು.
ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿ, ರಂಗದ ಮೇಲೆ ನಾಲ್ಕು ವ್ಯಕ್ತಿಗಳ ನಟನೆಯನ್ನು, ಪಾದರಸದಂತೆ, ಕಾಸ್ಟ್ಯೂಮ್ ಬದಲಾಯಿಸಿಕೊಂಡು, ಎಲ್ಲಿಯೂ ಸಮಯ ವ್ಯರ್ಥ ಮಾಡದೆ ಏಕ ವ್ಯಕ್ತಿ ಅದೂ ರಂಗದ ಮೇಲೆ ನಟಿಸುವುದೆಂದರೆ ಅದೊಂದು ವಿಸ್ಮಯವೇ ಸರಿ. ಅಂಥಹ ಟ್ಯಾಲೆಂಟ್ ಹೊಂದಿರುವಾತ ನನ್ನ ಹೃದಯದ ಗೆಳೆಯ *ಯಶವಂತ ಸರ್ ದೇಶಪಾಂಡೆ.* ಆತನ ಮತ್ತು ನನ್ನ ನಡುವಿನ ಗೆಳೆತನ ಇಂದಿಗೆ ಇಪ್ಪತ್ತು ವರುಷಗಳು ಕಳೆದಿವೆ. ಆತ ಗೆಳೆಯ ಎಂಬುದಕ್ಕಿಂತ ಆತನಲ್ಲಿರುವ ಆ ಓಜು ನನಗೆ ಆಪ್ತತತೆಯನ್ನು ತರುತ್ತದೆ. ಚಲನ ಚಿತ್ರಗಳಲ್ಲಿ ನಟರು ದ್ವಿಪಾತ್ರ, ತ್ರಿಪಾತ್ರವೇ ಏಕೆ ಕಮಲ ಹಾಸನ್ ಅವರು ದಶಾವತಾರ ಎನ್ನುವ ಚಲನಚಿತ್ರದಲ್ಲಿ 10 ಪಾತ್ರಗಳನ್ನು ನಿರ್ವಹಿಸಿದ್ದರು. ಬೇರೆ ಬೇರೆ ಸಮಯದಲ್ಲಿ ಶೂಟ್ ಮಾಡಿ ಅದನ್ನು ಎಡಿಟ್ ಮಾಡಿ ರೀಲ್ ನಲ್ಲಿ ತೋರಿಸುವುದು ಬೇರೆ. ಆದರೆ ಯಶವಂತ ಈ ಸಹಿ ರೀ ಸಹಿ ನಾಟಕದಲ್ಲಿ ಏಕವ್ಯಕ್ತಿಯಾಗಿ, ಅದೂ ಲೈವ್ ನಲ್ಲಿ ಮದನ್ ಸುಖಾತ್ಮೆ, ಗಲಗಲಿ, ಹರಿ, ರಂಗ ಹೀಗೆ ನಾಲ್ಕು ವ್ಯಕ್ತಿತ್ವಗಳ ನಾಲ್ಕು ರೋಲನ್ನು ನಮ್ಮ ಕಣ್ಮುಂದೆ ನಟಿಸುವಾಗ ಅದು ಸುಖೇದಾಶ್ಚರ್ಯವಾಗದೆ ಇರಲಾರದು. ನಾಟಕದ ಬಗ್ಗೆ ಹೆಚ್ಚು ಬರೆಯುತ್ತಾ ಹೋದರೆ ನಾಟಕದ ಬಗ್ಗೆ ಆಸಕ್ತಿ ಕ್ಷೀಣಿಸಬಹುದೆಂದು ನಾಟಕದ ಬಗ್ಗೆ ಏನನ್ನೂ ಬರೆಯಲಾರೆ. ಅದನ್ನು ನೋಡಿಯೇ ಆನಂದಿಸಬೇಕು.
ಇನ್ನು ಪೊಲೀಸರ ಕರ್ತವ್ಯ, ಕರ್ತವ್ಯದಲ್ಲಿನ ಒತ್ತಡ, ಒತ್ತಡದಲ್ಲಿ ಒದಗುವ ಆತಂಕ ಇವೆಲ್ಲವೂ ಇದ್ದಿದ್ದೇ ಎಂದಾದರೂ ಸಹ ನಮ್ಮ ಹುಬ್ಬಳ್ಳಿ - ಧಾರವಾಢದ ಹೆಮ್ಮೆಯ ಪೊಲೀಸ್ ಕಮೀಷನರ್ ಸಾರ್ ಅವರ ಬಳಿ ಈ ನಗೆ ನಾಟಕದ ಬಗ್ಗೆ ಒಮ್ಮೆ ಚರ್ಚಿಸುವಾಗ *ನೋಡ್ರೀ ನಮ್ಮ ಅಧಿಕಾರಿ ಹಾಗೂ ಸಿಬ್ಬಂಧಿಗಳೂ ಸಹ ಒತ್ತಡದಲ್ಲಿರುತ್ತಾರೆ, ಅವರಿಗೊಂದು ಈ ನಾಟಕದ ಪ್ರದರ್ಶನ ಮಾಡಿ ಎಂದು ಹುರಿದುಂಬಿಸಿದರು.* ಕಾರಣ ಕಲೆ, ಸಾಹಿತ್ಯ, ಓದುವಿನ ಹವ್ಯಾಸ, ಹಾಡುಗಾರಿಕೆ ಬಲ್ಲವರಾದರೂ ಎಲ್ಲರೂ ನನ್ನವರು ಎಂದು ಬಿಗಿದಪ್ಪುವ ಮನಸ್ಥಿತಿಯ ಅಧಿಕಾರದಲ್ಲಷ್ಠೇ ಅಲ್ಲ, ಹೃದಯವಂತನಾಗಿಯೂ ಮೇರುವಲ್ಲಿರುವ ವ್ಯಕ್ತಿತ್ವ ಅವರದ್ದಾಗಿದ್ದರಿಂದ ಈ ಕಾರ್ಯಕ್ರಮವನ್ನು ಆಯೋಜಿಸಲು ಅನುವಾಯಿತು.
ಬಿಡುವಿಲ್ಲದ ಕರ್ತವ್ಯ, ಗಣೇಶೋತ್ಸವ, ಈದ್ ಮಿಲಾದ, ಡ್ರಗ್ಸ್ ಮೇಲಿನ ಯುದ್ದ, ಬಡ್ಡಿ ಕುಳಗಳ ಮೇಲಿನ ಕ್ರಮ, ರೌಡಿ ಪೆರೇಡ್, ಅಪರಾಧ ( ಕಳ್ಳತನ ) ಪ್ರಕರಣಗಳ ಪತ್ತೆ, ಸಂಚಾರಿ ಸುವ್ಯವಸ್ಥೆ ಹೀಗೆ ಹತ್ತು ಹಲವು ಆಯಾಮಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ, ಂಥಹ ಕಿಷ್ಠ ನೌಕರಿಯಲ್ಲಿ ಪೊಲೀಸರಿಗೆ ಬೆನ್ನುಲುಬಾಗಿ ಸಾಥ್ ನೀಡಿದ ಅವರ ಕುಟುಂಬಸ್ಥರಿಗೆ ಈ *ಸಹಿ ರೀ ಸಹಿ* ಎಂಬ ನಾಟಕವನ್ನು 30-9-2024 ರಂದು ಸಂಜೆ 06-30ಕ್ಕೆ ಹುಬ್ಬಳ್ಳಿಯ ಸವಾಯ್ ಗಂಧರ್ವ ಹಾಲ್ ನಲ್ಲಿ ಆಯೋಜಿಸಲಾಗಿದೆ. ಮಾನ್ಯ ಪೊಲೀಸ್ ಕಮೀಷನರ್ ಅವರ ಕೃಪೆಯಿಂದ ಎಲ್ಲಾ ಸಿಬ್ಬಂಧಿ ಹಾಗೂ ಅವರ ಕುಟುಂಬಸ್ಥರಿಗೆ ಆಯೋಜಿಸಿದೆ. ಈ ಹಿಂದೆ ಮಾನ್ಯ ಪೊಲೀಸ್ ಕಮೀಷನರ್ ಅವರೇ *ಲಾಫಿಂಗ್ ಬುದ್ದ* ಎನ್ನುವ ಚಲನ ಚಿತ್ರವನ್ನು ಕೇವಲ ಪೊಲೀಸರಿಗಾಗಿಯೇ ಅಂದು ಧಾರವಾಢದ INOX ನಲ್ಲಿ ಆಯೋಜಿಸಲಾಗಿತ್ತು. ಮಾನ್ಯರು ಸಿನಿಮಾ ನೋಡಲು ಬರುವಾಗ ಅವರಿಗೆ ವಿಸಿ ಇತ್ತೆಂದು ಹಾಗೆಯೇ ಕರ್ತವ್ಯದ ಕರೆಗೆ ಓಗೊಟ್ಟು ಹೋಗಿದ್ದರು. ಒತ್ತಟ್ಟಿಗಿರಲಿ ಇರಲಿ ಅದು. ಅಂತೆಯೇ ಪೊಲೀಸರಿಗಾಗಿ ಈ ನಾಟಕವನ್ನ ಆಯೋಜಿಸಿದೆ. ಕಾರಣ ಪೊಲೀಸರು ಉತ್ತಮವಾಗಿದ್ದರೆ ಮಾತ್ರ ಈ ಸಮಾಜವನ್ನು ಕಾಪಾಡಲು ಸಾಧ್ಯ ಎಂದೇ ಅಂಬೋಣ.
30-9-2024 ರಂದು ಸಂಜೆ 06-30 ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲಿನಲ್ಲಿ ಈ ನಗೆ ನಟಕ *ಸಹಿ ರೀ ಸಹಿ* ಪ್ರದರ್ಶನವಿದೆ. ಪೊಲೀಸ್ ಮತ್ತು ಕುಟುಂಬದವರಿಗೆ ಗಂಗಾವತಿ ಸಿಲ್ಕ್ ನ ಮಾಲಕ ಆನಂದ್ ಅವರು ಸಹ ಖುಷಿಯಿಂದ ಆಯೋಜಿಸಿದ್ದಾರೆ. *ಯಶವಂತನ ದಶವಂತ ಕ್ಯಾರೆಕ್ಟರ್ ನೋಡುವ ಖುಷಿ ನಮ್ಮೊಳಗಾಗಲಿ.* ಪೊಲೀಸರೆಂದರೆ ಮೂಗು ಮುರಿಯುವ ಈ ಕಾಲಘಟ್ಟದಲ್ಲಿ ಅವರೂ ನಮ್ಮವರೇ ಎಂದು ಪ್ರೀತಿ ತೋರುವ ನಮ್ಮ ಹೆಮ್ಮೆಯ ಪೊಲೀಸ್ ಕಮೀಷನರ್ ಶ್ರೀ ಶಶಿಕುಮಾರ್ ಸಾರ್, ಶ್ರೀ ಯಶವಂತ ಸರ್ ದೇಶಪಾಂಡೆ, ಗಂಗಾವತಿ ಸಿಲ್ಕ್ ನ ಶ್ರೀ ಆನಂದ್ ಅವರಿಗೆಲ್ಲರೂ ಶುಭ ಹಾರೈಸೋಣ. ಪೊಲೀಸ್ ಒತ್ತಡದಿಂದ ಆಚೆ ಬರಲಿ ಎಂದು ಆಶಿಸೋಣ.
ನಗೆ ನಾಟಕ : *ಸಹಿ ರೀ ಸಹಿ*
ಕೃಪೆ : *N ಶಶಿಕುಮಾರ್, IPS, COP, HD City,*
ನಟನೆ, ನಿರ್ದೇಶನ : *ಯಶವಂತ್ ಸರ್ ದೇಶಪಾಂಡೆ*
ಆಯೋಜಕರು: *ಆನಂದ್, ಗಂಗಾವತಿ ಸಿಲ್ಕ್ ಹೌಸ್*
ಸ್ಥಳ: *ಸವಾಯ್ ಗಂಧರ್ವ ಹಾಲ್, ಹುಬ್ಬಳ್ಳಿ,*
ಸಮಯ : *ಸಂಜೆ 06-30*
ಪೊಲೀಸ್ ಹಾಗೂ ಕುಟುಂಬದವರಿಗೆ ಸ್ವಾಗತ
✍️ *ರವೀ ಚಿಕ್ಕನಾಯಕನಹಳ್ಳಿ*