DHARWAD:ಸಂಭ್ರಮದಿAದ ನೆರವೇರಿದ ಶ್ರೀ ಉಳವಿ ಚನ್ನಬಸವೇಶ್ವರರ ರಥೋತ್ಸವ

ಸಂಭ್ರಮದಿAದ ನೆರವೇರಿದ ಶ್ರೀ ಉಳವಿ ಚನ್ನಬಸವೇಶ್ವರರ ರಥೋತ್ಸವ
ಧಾರವಾಡ :-  ಶ್ರಾವಣ ಮಾಸದ ಕೊನೆಯ ದಿನವಾದ ಸೋಮವಾರದಂದು ಇತಿಹಾಸ ಪ್ರಸಿದ್ಧ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಮುಂಜಾನೆಯಿಂದ ಚನ್ನಬಸವೇಶ್ವರರಿಗೆ ವಿಶೇಷ ಪೂಜೆ, ಅಭಿಷೇಕ, ರುದ್ರ ಪಠಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಸಂಜೆ ೪ ಗಂಟೆಗೆ ನಡೆದ ರಥೋತ್ಸವ ಹಾಗೂ ನೂತನವಾಗಿ ನಿರ್ಮಿಸಿದ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಅತ್ತಿವೇರಿ ಬಸವಧಾಮದ ಶ್ರೀ ಮಾತೆ ಬಸವೇಶ್ವರಿ ಅವರು ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೇವಸ್ಥಾನದದಿಂದ ಹೊರಟ ರಥವು ಉಳವಿ ಚನ್ನಬಸವೇಶ್ವರ ವರ್ತುಳ ಹಾಗೂ ಹಿಂದಿ ಪ್ರಚಾರ ಸಭಾ ಮುಖ್ಯ ರಸ್ತೆ ಮೂಲಕ ಸಂಚರಿಸಿ ಮರಳಿ ದೇವಸ್ಥಾನಕ್ಕೆ ತಲುಪಿ ಸಂಪನ್ನಗೊAಡಿತು. ರಥೋತ್ಸವದುದ್ದಕ್ಕೂ ಭಕ್ತರು ಭಾರತ ದೇಶ, ಜೈ ಚನ್ನಬಸವೇಶ  ಹರ... ಹರ... ಮಹಾದೇವ ಎಂಬ ಘೋಷಣೆ ಕೂಗಿದರು. ಅಲ್ಲದೇ ನೆರೆದಿದ್ದ ಅಪಾರ ಜನಸ್ತೋಮವು ರಥಕ್ಕೆ ಹಣ್ಣು, ಉತ್ತತ್ತಿ, ಬಾಳೆ, ಕಿತ್ತಳೆ ಫಲ ಪುಷ್ಪ ಸಮರ್ಪಿಸಿ ಭಕ್ತಿಯ ಸಾಗರದಲ್ಲಿ ಮಿಂದೆದ್ದರು.
ಮುಂಜಾನೆಯಿಂದ ಸಂಜೆವರೆಗೂ ದೇವಸ್ಥಾನಕ್ಕೆ ಆಗಮಿಸಿದ ಸಾವಿರಾರು ಸಂಖ್ಯೆಯ ಭಕ್ತರು ಚನ್ನಬಸವೇಶ್ವರ ದರ್ಶನ ಪಡೆದು ಮಹಾಪ್ರಸಾದದಲ್ಲಿ ಪಾಲ್ಗೊಂಡರು.
 ಈ ಸಂದರ್ಭದಲ್ಲಿ  ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಸ್.ಆರ್. ರಾಮನಗೌಡರ, ಕಾರ್ಯಾಧ್ಯಕ್ಷ ಡಾ. ಕೆ.ಎಂ. ಗೌಡರ, ಗೌರವ ಕಾರ್ಯದರ್ಶಿ ಆರ್.ವೈ.ಸುಳ್ಳದ, ಹಾಗೂ ಧರ್ಮದರ್ಶಿಗಳಾದ ಟಿ. ಎಸ್. ಪಾಟೀಲ, ಬಸವರಾಜ ಸೂರಗೊಂಡ, ಜಿ.ಬಿ. ಅಳಗವಾಡಿ, ಎನ್.ಬಿ. ಗೋಲಣ್ಣವರ, ಸುರೇಶ ಪಟ್ಟಣಶೆಟ್ಟಿ, ರವಿಕುಮಾರ್ ಕಗ್ಗಣ್ಣವರ.  ಸುರೇಶ ಹೆಗ್ಗೇರಿ, ಶಂಕರ ಪಾಗದ, ಜಿ.ಐ. ವಾಣಿ, ವಿಜಯೇಂದ್ರ ಪಾಟೀಲ, ರಾಜು ಕೋಟಿ, ಜಿ.ಟಿ.ಶಿರೋಳ ಇದ್ದರು.
ನವೀನ ಹಳೆಯದು

نموذج الاتصال