DHARWAD: ಕಾರ್ಮಿಕರ ಹಿತ ಕಾಪಾಡಲು ಸಲಹೆ, ಸೂಚನೆ ನೀಡಿದ ಸಚಿವರು*

*ವಿವಿಧ ಸಂಸ್ಥೆಗಳ ಕಾರ್ಮಿಕರ ಸಮಸ್ಯೆಗಳ ಚರ್ಚೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌*
==============
*ಕಾರ್ಮಿಕರ ಹಿತ ಕಾಪಾಡಲು ಸಲಹೆ, ಸೂಚನೆ ನೀಡಿದ ಸಚಿವರು*
ಬೆಂಗಳೂರು, ಸೆಪ್ಟೆಂಬರ್‌ 9: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಇಂದು ವಿಕಾಸಸೌಧದಲ್ಲಿ ವಿವಿಧ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. 
ಕಾರ್ಮಿಕರ ಅಹವಾಲುಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಡಳಿತ ಮಂಡಳಿಗೆ ಸಲಹೆ, ಸೂಚನೆಗಳನ್ನು ನೀಡಿದರು. ನೌಕರರ ಹಿತದೃಷ್ಟಿಯಿಂದ ಹಲವಾರು ಕಾನೂನುಗಳಿದ್ದು, ಅವುಗಳನ್ನು ಬಳಸುವಂತೆ ತಿಳಿಸಿದರು. ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳಲ್ಲಿ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. 
*ಆರ್ ಟಿಪಿಎಸ್ ನೌಕರರ ಸಮಸ್ಯೆ ಚರ್ಚೆ*
ರಾಯಚೂರಿನ ಆರ್‌ಟಿಪಿಎಸ್‌ ನಲ್ಲಿ ಕರ್ತವ್ಯ ನಿರ್ವಹಿಸುವ ನೌಕರರ ಸಮಸ್ಯೆಗಳ ಬಗ್ಗೆ ಮೊದಲಿಗೆ ಚರ್ಚೆ ನಡೆಸಿದ ಸಚಿವ ಲಾಡ್‌ ಅವರು, ಪರಿಹಾರ ಸೂಚಿಸಿದರು., 
ಆರ್‌ಟಿಪಿಎಸ್‌ ನ ಕೆಲವು ನೌಕರರ ಖಾಯಂಗೊಳಿಸುವ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಸಚಿವ ಸಂಪುಟದ ಗಮನಕ್ಕೆ ತರಲಾಗುವುದು ಎಂದು ಸಚಿವರು ತಿಳಿಸಿದರು. ಇದಲ್ಲೆ ಕನಿಷ್ಠ ವೇತನ ಸಮಸ್ಯೆ, ಗ್ರ್ಯಾಚುಯಿಟಿ, ಆರೋಗ್ಯ ಸೌಲಭ್ಯಗಳು, ರಜೆ ಸಮಸ್ಯೆಗಳ ಬಗ್ಗೆ ನೌಕರರ ಸಂಘದ ಪದಾಧಿಕಾರಿಗಳು ವಿವರವಾದ ಮನವಿಯನ್ನು ಸಚಿವರಿಗೆ ಸಲ್ಲಿಸಿದರು. ಈ ಎಲ್ಲಾ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. 

ಈ ಸಭೆಯಲ್ಲಿ  ಕೆ.ಪಿ.ಸಿ.ಎಲ್ ಪ್ರಧಾನ ವ್ಯವಸ್ಥಾಪಕರಾದ ಶ್ರೀ ನಾಗರಾಜ್, ನೌಕರರ ಸಂಘದ ಅಧ್ಯಕ್ಷರಾದ ಅಯ್ಯಣ್ಣ ಮಾಮನಿ, ಉಪಾಧ್ಯಕ್ಷರಾದ ಎಸ್‌ ಬಿ ಪಾಟೀಲ್‌, ಹಾಗೂ ನೌಕರ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು
*ಉದಯ ಟೀವಿ ನೌಕರರ ಸಮಸ್ಯೆಗಳ ಚರ್ಚೆ*
ಕಾರ್ಮಿಕ ಸಚಿವರಾದ ಸಂತೋಷ್‌ ಲಾಡ್‌ ಅವರು, ಉದಯ ಟೀವಿ ನೌಕರರ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಚರ್ಚಿಸಿದರು. 
ಈ ಸಭೆಯಲ್ಲಿ ಉದಯ ಟೀವಿ ಆಡಳಿತ ಮಂಡಳಿಯ ಕಾನೂನು ಸಲಹೆಗಾರರಾದ ಹರ್ಷ, ಬಾಲಾಜಿ, ಥಾಮಸ್, ಕಾರ್ಮಿಕ ಇಲಾಖೆಯ ಆಯುಕ್ತರಾದ ಗೋಪಾಲಕೃಷ್ಣ, ಜಂಟಿ ಕಾರ್ಮಿಕ ಆಯುಕ್ತರಾದ ಶ್ರೀ ರವಿಕುಮಾರ್, ಉಪ ಕಾರ್ಮಿಕ ಆಯುಕ್ತರಾದ ಡಾ ಮಂಜುನಾಥ್, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉದಯ ಟೀವಿ ನೌಕರ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು.
*ಕಾರ್ಲ್‌ ಜೆಸ್‌ ಸಂಸ್ಥೆಯ ನೌಕರರ ಸಭೆ* 
ಕಾರ್ಲ್‌ ಜೆಸ್‌ ಸಂಸ್ಥೆಯ ನೌಕರರ ಸಂಘಟನೆಯ ಪ್ರಮುಖರು ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಸಚಿವರು, ಅಹವಾಲು ಆಲಿಸಿದರು. 

ಈ ಸಭೆಯಲ್ಲಿ Carl Zeiss ಆಡಳಿತ ಮಂಡಳಿಯ ಕಾನೂನು ಸಲಹೆಗಾರರಾದ ಶ್ರೀ ಉಮೇಶ್ Carl Zeiss ಸಂಸ್ಥೆಯ ನೌಕರ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು. 

*AEQUES -SEZ ಸಂಸ್ಥೆಯ ನೌಕರರ ಸಮಸ್ಯೆಗಳ ಬಗ್ಗೆ ಸಭೆ* 
ಇದೇ ರೀತಿ AEQUES -SEZ ಸಂಸ್ಥೆಯ ನೌಕರರ ಸಮಸ್ಯೆಗಳ ಬಗ್ಗೆ ಸಭೆ ನಡೆಸಿದ ಸಚಿವರು, ನೌಕರರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. 

ಈ ಸಭೆಯಲ್ಲಿ AEQUES -SEZ ಸಂಸ್ಥೆಯ ಆಡಳಿತ ಮಂಡಳಿಯ ಪ್ರಮುಖರು,  AEQUES -SEZ ಸಂಸ್ಥೆಯ ನೌಕರ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು.   

*ಔಮ ಹಾಗೂ ಬಾಷ್‌ ಸಂಸ್ಥೆಯ ನೌಕರರ ಸಮಸ್ಯೆಗಳ ಬಗ್ಗೆ ಸಭೆ*
ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು  ಔಮ ಸಂಸ್ಥೆ ಹಾಗೂ ಬಾಷ್‌ ಕಂಪನಿಯ ನೌಕರರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು. 

ಈ ಸಭೆಯಲ್ಲಿ ಔಮ ಸಂಸ್ಥೆಯ ಆಡಳಿತ ಮಂಡಳಿಯ ಹೆಚ್.ಆರ್ ಶ್ರೀ  ವಿನಯ್ ಮತ್ತು ಪ್ರಮುಖರು, ಔಮ ಸಂಸ್ಥೆಯ ನೌಕರ ಸಂಘಟನೆಯ ಪ್ರಮುಖರಾದ ಶ್ರೀ ಮೈಕೆಲ್ ಫೆರ್ನಾಂಡಿಸ್, ಶ್ರೀ ಕಾಳಪ್ಪ ಮತ್ತು ಇತರೆ ಕಾರ್ಮಿಕ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು. ಬಾಷ್ ಕಂಪನಿಯ ಆಡಳಿತ ಮಂಡಳಿಯ ಹೆಚ್.ಆರ್ ಶ್ರೀ ಸುರೇಶ್, ಶ್ರೀ ಗೋಪಾಲಕೃಷ್ಣ ಜೋಶಿ, ಶ್ರೀ ಸತೀಶ್, ಕಾರ್ಮಿಕ ಸಂಘಟನೆಯ ಪರವಾಗಿ ಶಾಸಕರಾದ ಸುರೇಶ್ ಗೌಡ ಭಾಗವಹಿಸಿದ್ದರು. 

ಈ ಎಲ್ಲಾ ಸಭೆಗಳಲ್ಲಿ ಕಾರ್ಮಿಕ ಇಲಾಖೆಯ ಪರವಾಗಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಕಾರ್ಮಿಕ ಆಯುಕ್ತರಾದ ಗೋಪಾಲಕೃಷ್ಣ,  ಅಪರ ಕಾರ್ಮಿಕ ಆಯುಕ್ತರಾದ ಡಾ ಮಂಜುನಾಥ್, ಉಪ ಕಾರ್ಮಿಕ ಆಯುಕ್ತರಾದ ಶ್ರೀ ಅಮರೇಂದ್ರ, ಜಂಟಿ ಕಾರ್ಮಿಕ ಆಯುಕ್ತರಾದ ಶ್ರೀ ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال