DHARWAD:ವಿದ್ಯಾ ಅಭ್ಯಾಸ ಜೋತೆಗೆ ವೃತ್ತಿಗಳ ಕಡೆಗೊ ಗಮನ ವಿರಲಿ": ಡಾ ನಾಲತವಾಡ.

DHAR"ವಿದ್ಯಾ ಅಭ್ಯಾಸ ಜೋತೆಗೆ ವೃತ್ತಿಗಳ ಕಡೆಗೊ ಗಮನ ವಿರಲಿ": ಡಾ ನಾಲತವಾಡ.  

ಧಾರವಾಡ 24: ಸ್ಥಳೀಯ ಹಜರತ್ ನಿಜಾಮುದ್ದೀನ್ ಪ್ರೌಢಶಾಲೆ  ಹಾಗೂ ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್ ಆಯೋಜಿಸಲಾದ ಒಂದು ದಿನದ ವೃತ್ತಿ  ಮಾರ್ಗದರ್ಶನದ ಕಾರ್ಯಾಗಾರದಲ್ಲಿ  ಮುಖ್ಯ ಅತಿಥಿಯಾಗಿ ಡಾ ಎನ್ ಬಿ ನಾಲತವಾಡ ವಿದ್ಯಾರ್ಥಿಗಳನ್ನು ಕರೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಜೊತೆಯಲ್ಲಿ ವಿವಿಧ ವೃತ್ತಿಗಳ ಬಗ್ಗೆ ಗಮನ ವಿರಬೇಕು ಎಂದು ನುಡಿದರು. 

ಸಂಪನ್ಮೂಲ ವ್ಯಕ್ತಿಯಾದ ಶ್ರೀ ಮೊಹಮ್ಮದ್ ಅಫ್ಜಲ್ ಸೌನೂರ್ ಏ ಎಂ ಪಿ ಯ ದೇಹ ಉದ್ದೇಶ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಹೇಳಿ ವೈದ್ಯಕೀಯ ವಿಭಾಗದಲ್ಲಿರುವ ವೃತ್ತಿ  ಅವಕಾಶಗಳ ಬಗ್ಗೆ ವಿವರಿಸಿದರು. ಡಾ. ಮುಸದ್ದಿಕಾ ಖಾನಂ ಕಿತ್ತೂರ್, ಮಾನಸಿಕ ಸಂತೋಲನ ಹಾಗೂ ವಿದ್ಯಾಭ್ಯಾಸದ ಕುರಿತು ಅಮೂಲ್ಯವಾದ ಮಾಹಿತಿ ನೀಡಿದರು,

 ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಅಫ್ತಾಬ್ ಅತ್ತಾರ್, ಸ್ಟಡಿ ಟೆಕ್ನಿಕ್ಸ್ ಎಂಬ ವಿಷಯದ ಮೇಲೆ ಸಮಗ್ರವಾದ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಉಪಾಧ್ಯಕ್ಷ ಇಸ್ಮಾಯಿಲ್  ತಾಡಪತ್ತರಿ, 

ಎ ಎಂ ಪಿ ವತಿಯಿಂದ ಬಂದಂತಹ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಧನ್ಯವಾದಗಳು ವ್ಯಕ್ತ ಪಡಿಸಿ ಇಂಥ ಕಾರ್ಯಕ್ರಮಗಳು ಮೇಲಿಂದ ಮೇಲೆ ಆಗುತ್ತಾ ಇರಬೇಕು ಎಂದು

 ಅಭಿಪ್ರಾಯಪಟ್ಟರು. ಶಾಲೆಯ ಮುಖ್ಯಾಧ್ಯಾಪಕರಾದ ಸಿರಾಜ್ ಅಹಮದ್ ಮನಿಯಾರ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು, ಶ್ರೀಮತಿ ಎಸ್ ಎ ಖಲಾಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 ಕಾರ್ಯಕ್ರಮದಲ್ಲಿ ಜನಾಬ್ ಇನಾಮದಾರ್, ಜನಾಬ್ ಮುಳಗುಂದ್, ಶ್ರೀಮತಿ ಇನಾಮದಾರ್, ಶ್ರೀಮತಿ ನದಾಫ್  ಹಾಗೂ ಅಪಾರ್ ಸಂಖ್ಯೆಯಲ್ಲಿ

 ವಿದ್ಯಾರ್ಥಿಗಳು ಆಸಕ್ತಿಯಿಂದ ಹಾಜರಿದ್ದರು.
ನವೀನ ಹಳೆಯದು

نموذج الاتصال