ಧಾರವಾಡದಲ್ಲಿ ಪಂಡಿತ ದೀನ ದಯಾಳ ಉಪಾಧ್ಯಾಯ ಜಯಂತಿ ಆಚರಣೆ
ಧಾರವಾಡ
ಧಾರವಾಡದ ವಾರ್ಡ ಸಂಖ್ಯೆ 4 ರಲ್ಲಿ ಅಕ್ಕಿ ಸಮುದಾಯ ಭವನದ ಎದುರು ಪಂಡಿತ ದೀನದಯಾಳ ಉಪಾಧ್ಯಾಯ ಅವರ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷದ ಬೂತಮಟ್ಟದ ಕಾರ್ಯಕರ್ತರೊಂದಿಗೆ ಜಿಲ್ಲಾಧ್ಯಕ್ಷರು ತಿಪ್ಪಣ್ಣ ಮಜ್ಜಗಿ ಹಾಗು ಮಾಜಿಮಹಾಪೌರರು ಈರೇಶ ಅಂಚಟಗೇರಿ ಅವರು ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನಗಳನ್ನ ಸಲ್ಲಿಸಿ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು , ವಿಶ್ವದ ಅತಿದೊಡ್ಡ ಪಕ್ಷ ಬಿಜೆಪಿ ಪಕ್ಷವನ್ನ ಸಧೃಡಗೊಳಿಸಲು ನಾವೆಲ್ಲ ಕಾರ್ಯಕರ್ತರು ಮನೆಮನೆಗೆ ತೆರಳಿ ಸದಸ್ಯರನ್ನಾಗಿಸಿ ಪಕ್ಷವನ್ನ ಬಲಿಷ್ಠಗೊಳಿಸಲು ಕರೆ ನೀಡಿದರು.
ಮಾಜಿಮಹಾಪೌರ ಈರೇಶ ಅಂಚಟಗೇರಿ ಮಾತನಾಡಿ, ಪಂಡಿತ ದೀನದಯಾಳ ಉಪಾಧ್ಯಾಯ ಅವರ ಜನಸಂಘದ ಸಂಸ್ಥಾಪಕರು. ಭಾರತೀಯ ಜನತಾ ಪಕ್ಷ ಸ್ಥಾಪನೆಗೆ ಜೀವನವನ್ನೆ ಮುಡಿಪಾಗಿಟ್ಟು ಧಾರೆ ಎರೆದು ಬಿಜೆಪಿ ಸ್ಥಾಪನೆ ಮಾಡಿದವರು. ಅಂತ್ಯೋದಯದ ಪರಿಕಲ್ಪನೆ ಅಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯಗಳು ತಲುಪಬೇಕು. ಕಾರಣ ನಾವೆಲ್ಲ ಕಾರ್ಯಕರ್ತರು ಕನಿಷ್ಠ ನೂರು ಸದಸ್ಯರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಸಿ, ಸಕ್ರಿಯ ಕಾರ್ಯಕರ್ತರಾಗಬೇಕು ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ಮಾಜಿಮಹಾಪೌರರು ಈರೇಶ ಅಂಚಟಗೇರಿ, ಅಧ್ಯಕ್ಷರಾದ ಸುನೀಲ ಮೋರೆ , ಶ್ರೀನಿವಾಸ ಕೋಟ್ಯಾನ , ಬಸಣ್ಣ ಪಳೋಟಿ, ಜಗದೀಶ ಅಕ್ಕಿ, ಪ್ರಣಿತ ರಾಮನಗೌಡರ, ಜಗದೀಶ ಅಕ್ಕಿ, ಶಕ್ತಿ ಹಿರೇಮಠ ,ಗುರು ಗುಮಗೊಳಮಠ ,ಸಂತೋಷ ತಮದಂಡಿ, ಸಂಕಲ್ಪ ಕಲ್ಯಾಣಶೆಟ್ಟಿ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.