DHARWAD:ಬಸವಾದಿ ಶರಣರು ಧಾರ್ಮಿಕ ಹಾಗೂ ಸಾಮಾಜಿಕ ಕ್ರಾಂತಿ ಮೂಲಕ ಮಾನವ ಕ್ಷೇತ್ರದ ಶುದ್ಧೀಕರಣ ಮಾಡಲೆತ್ನಿಸಿ

ಧಾರವಾಡ :- ಬಸವಾದಿ ಶರಣರು ಧಾರ್ಮಿಕ ಹಾಗೂ ಸಾಮಾಜಿಕ ಕ್ರಾಂತಿ ಮೂಲಕ ಮಾನವ ಕ್ಷೇತ್ರದ ಶುದ್ಧೀಕರಣ ಮಾಡಲೆತ್ನಿಸಿ 
ನಿಷ್ಕಿçÃಯಗೊಂಡ ಸಮಾಜವನ್ನು ಸಕ್ರೀಯಗೊಳಿಸುವಲ್ಲಿ ಕಂಕಣ ಬದ್ಧರಾದರು ಎಂದು ಮುಂಡಗೋಡ ಅತ್ತಿವೇರಿ ಬಸವಧಾಮದ ಪೂಜ್ಯ ಮಾತೆ ಬಸವೇಶ್ವರಿ ಹೇಳಿದರು.
ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬಸವಕೇಂದ್ರ ಆಯೋಜಿಸಿದ ಶ್ರಾವಣ ಮಾಸದ ನಿತ್ಯ ವಚನೋತ್ಸವದ ಮಂಗಲೋತ್ಸವ ಹಾಗೂ ಶಾಲಾ ಮಕ್ಕಳಿಗೆ ಏರ್ಪಡಿಸಿದ ವಚನ ಲೇಖನ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಆರ್ಶಿವಚನ ನೀಡಿ ಮಾತನಾನಾಡಿದರು. ಕನ್ನಡದ ನೆಲದ ಮೇಲೆ ಪ್ರಥಮ ಸಮಾಜೋ ಧಾರ್ಮಿಕ ಆಂದೋಲನ ಆರಂಭಿಸಿದ ಶರಣರ ಚಿಂಥನೆಯು ಸಾಮಾಜಿಕ ಪ್ರಜಾಪ್ರಭುತ್ವದ ಅಡಿಪಾಯವಾಗಿತ್ತು. ಅವರು ತೋರಿದ ಮಾರ್ಗ ಬೀರಿದ ಬೆಳಕು ನುಡಿದಂತೆ ನಡೆದ ವಚನಗಳು ಮಾನವನ ಮುನ್ನಡೆಗೆ ಸಹಾಯಕವಾಗಿವೆ. ೯೦೦ ವರ್ಷದಿಂದ ಪ್ರಚಲಿತವಿರುವ ವಚನ ಸಾಹಿತ್ಯದ ನೈಜ ದರ್ಶನದ ಮುಂದೆ ಯಾವ ದರ್ಶನದ ಅವಶ್ಯಕತೆಯಿಲ್ಲ ಎಂದರು.
ಕೆ.ಎA.ಎಫ್ ನಿರ್ದೇಶಕರಾದ ಶ್ರೀಮತಿ ಶಿವಲೀಲಾ ಕುಲಕರ್ಣಿ ಮಾತನಾಡಿ, ವಚನಗಳು ಮಾನವನ ಬದುಕಿನ ಮೌಲ್ಯಗಳು ಇವು ೧೨ ನೇ ಶತಮಾನದಿಂದ ೨೧ ನೇ ಶತಮಾನ ಅಷ್ಟೆ ಅಲ್ಲ ಮಾನವನ ಪೀಳಿಗೆಗೆ ಪೂರಕವಾಗಿವೆ. ಶರಣರ ಸಾಹಿತ್ಯ ಸಂರಕ್ಷಣೆ ಇಂದಿನ ಪೀಳಿಗೆಗೆ ಅವಶ್ಯವಾಗಿದೆ ಈ ನಿಟ್ಟಿನಲ್ಲಿ ಬಸವ ಕೇಂದ್ರ ಆಯೋಜಿಸಿದ ವಚನ ಲೇಖನ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದಿರುವುದು ಸಂತಸದ ಸಂಗತಿ ಎಂದರು.
ಸAಶೋಧಕ ಡಾ.ವೀರಣ್ಣ ರಾಜೂರ ಅಧ್ಯಕ್ಷತೆವಹಿಸಿ ಮಾತನಾಡಿ, ಈ ಧರ್ಮವನ್ನು ಅಳಿಸಿ ಹಾಕಬೇಕು ವಚನದ ಪ್ರಚಾರವನ್ನು ಕಡಿಮೆ ಮಾಡಬೇಕು ಎಂದು ಯಾರೇ ಏನೆ ಮಾಡಿದರೂ ಅವರಿಗೆ ಯಶಸ್ಸು ಸಿಗುದಿಲ್ಲ. ಬಸವಾದಿ ಶರಣರ ಹಾಗೂ ಅವರ ತತ್ವಗಳಿಗೆ ಅಪಾರ್ಥ ಕಲ್ಪಿಸುವುದು ಅದನ್ನು ಕುಬ್ಜಗೊಳಿಸಿ ಅದರ ವ್ಯಾಪ್ತಿಯನ್ನು ಕಡಿಮೆಗೊಳಿಸುವ ಜೊತೆಗೆ ಬೇರೆ ಬೇರೆ ವಿಚಾರಗಳನ್ನೊಳಗೊಂಡ ಪುಸ್ತಕದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬಸವಣ್ಣನವರ ಕ್ರಾಂತಿಕಾರಿ ದರ್ಶನದಲ್ಲಿ ಗೊಂದಲ ಸೃಷ್ಠಿಸಿ ವಚನ ಚಳುವಳಿಯ ಸದಾಶಯ ಹಾಗೂ ಶರಣರ ಬದುಕಿದ ಆ ಇತಿಹಾಸವನ್ನೆ ಸುಳ್ಳು ಸೃಷ್ಠಿ ಎಂಬAತೆ ಬಿಂಬಿಸುವ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಲೇ ಇವೆ. ಅನೇಕ ವರ್ಷದಿಂದ ಇದನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ ಆದರೂ ೯೦೦ ವರ್ಷದಿಂದ ಜೀವಂತವಾಗಿ ಉಳಿದ ಬಂದ ಬದುಕಿನ ಸಾಹಿತ್ಯ ಸೂರ್ಯ ಪ್ರಕಾಶದಂತೆ ಬೆಳಗುತ್ತಲೇ ಇದೆ. ಹೀಗಾಗಿ ಇಂದಿನ ಮಕ್ಕಳು, ಯುವಜನರು ವಚನ ಸಾಹಿತ್ಯ, ಶರಣ ತತ್ವ ಅಳವಡಿಸಿಕೊಂಡು ಅದನ್ನು ಆಚರಿಸುವುದರ ಜೊತೆಗೆ ಶರಣರ ಬದುಕಿನಂತೆ ಬಾಳಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.

ಬಸವಕೇAದ್ರ ಅಧ್ಯಕ್ಷ ಸಿದ್ದರಾಮ ನಡಕಟ್ಟಿ, ಉಮೇಶ ಕಟಗಿ, ಶಿವಣ್ಣ ಶರಣ್ಣವರ, ರವಿಕುಮಾರ ಕಗ್ಗಣ್ಣವರ ಶಕುಂತಲಾ ಮನ್ನಂಗಿ ಇದ್ದರು. ಬಸವ ಕೇಂದ್ರ ಕಾರ್ಯದರ್ಶಿ ಬಸವಂತ ತೋಟದ ಪ್ರಾಸ್ತಾವಿಕ ಮಾತನಾಡಿದರು. ಎಫ್.ಬಿ.ಕಣವಿ ನಿರೂಪಿಸಿದರು. ಶೇಖರ ಕುಂದಗೋಳ ಸ್ವಾಗತಿಸಿದರು. ಮೃತ್ಯುಂಜಯ ಶೆಟ್ಟರ ವಚನ ಸಂಗೀತ ನಡೆಸಿಕೊಟ್ಟರು. ವಚನ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನಗದು ವಿತರಣೆ ಮಾಡಿತು.
ನವೀನ ಹಳೆಯದು

نموذج الاتصال