DHARWAD:ಎಫ್.ಪಿ.ಎ.ಇಂಡಿಯಾ ಧಾರವಾಡ ಶಾಖೆಯಲ್ಲಿ ವಿಶ್ವ ಗರ್ಭ ನಿರೋಧಕ ಮತ್ತು ಅಂತರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆ ಆಚರಣೆ

ಎಫ್.ಪಿ.ಎ.ಇಂಡಿಯಾ ಧಾರವಾಡ ಶಾಖೆಯಲ್ಲಿ ವಿಶ್ವ ಗರ್ಭ ನಿರೋಧಕ ಮತ್ತು ಅಂತರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆ ಆಚರಣೆ
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಸ್ಪ್ರಿಂಟ್ ಯೋಜನೆ ಅಡಿಯಲ್ಲಿ ವಿವಿಧ ಜನ ಜಾಗೃತಿ ಕಾರ್ಯಕ್ರಮಗಳ ಮೂಲಕ ವಿಶ್ವ ಗರ್ಭ ನಿರೋಧಕ ಮತ್ತು  ಅಂತರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆಯನ್ನು ಆಚರಿಸಲಾಯಿತು.
 ಇದರ ಕುರಿತಂತೆ ನಾಗರಿಕರಿಗೆ ಅರಿವು ಮೂಡಿಸಲು ಜಲ ಜಾಗೃತಿ ಚಟುವಟಿಕೆಗಳಾದರೆ ರ‍್ಯಾಲಿ, ಸಿಗ್ನೇಚರ್ ಕ್ಯಾಂಪೇನ್, ಸಭೆಗಳನ್ನು ಆಯೋಜಿಸಲಾಗಿತ್ತು. ಇದರ ನೇತೃತ್ವವನ್ನು ಎಫ್, ಪಿ.ಎ ಇಂಡಿಯಾ ಧಾರವಾಡ ಶಾಖಾ ವ್ಯವಸ್ಥಾಪಕೀ ಸುಜಾತಾ ವಹಿಸಿಕೊಂಡು ಮಾತನಾಡಿದ ಅವರು  ಹೆಚ್ಚೆಚ್ಚು ಮಕ್ಕಳು ಬೇಕೆಂಬ ಹಂಬಲದಲ್ಲಿರುವ ದಂಪತಿಗಳು, ಅವರವರ ಕುಟುಂಬ ಆರೋಗ್ಯದ ಮೇಲೆ ಮತ್ತು ಆರ್ಥಿಕ ಪರಿಸ್ಥಿತಿ ಮೇಲಾಗುವ ದುಷ್ಪರಿಣಾಮಗಳ ಕುರಿತು ಹೇಳಿದರು. ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಸುರಕ್ಷಿತ ಗರ್ಭಪಾತ ಕಾಗಿ ಅನೇಕ ವಿನೂತನ ಉಪಕರಣಗಳು ಲಭ್ಯವಿದೆ. ಇವುಗಳ ಸದುಪಯೋಗ ಪಡಿಸಿಕೊಂಡು ಕುಟುಂಬ ಆರೋಗ್ಯ ಮತ್ತು ಆರ್ಥಿಕತೆ ಬೆಳವಣಿಗೆಗಾಗಿ ಶ್ರಮಿಸಬೇಕೆಂದು. ಎಫ್,ಪಿ,ಎ ಇಂಡಿಯಾ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸುತ್ತಿದೆ  ಸುಜಾತಾ ಆನಿಶೆಟ್ಟರ್ ತಿಳಿಸಿದರು.

              ವೈದ್ಯಾಧಿಕಾರಿ ಡಾ. ನಸರಿನ್ ಹೊನ್ನಳ್ಳಿ ಮಾತನಾಡಿ, ಗರ್ಭ ನಿರೋಧಕ ತಡೆಗಟ್ಟುವಿಕೆ ವಿಧಾನಗಳಲ್ಲಿ ಬಹಳಷ್ಟು ಮಾರ್ಗಗಳಿವೆ. ವೈದ್ಯರ ಸಲಹೆ ಪಡೆದು,ಆರೋಗ್ಯ ತಪಾಸಣೆ ಮಾಡಿಕೊಂಡು ಔಷಧಿಯನ್ನು ಉಪಯೋಗಿಸುವುದು ಉತ್ತಮ. ತಂತ್ರಜ್ಞಾನ, ವಿಜ್ಞಾನ ಇತ್ತೀಚೆಗೆ ಗರ್ಭ ನಿರೋಧಕ ವಿಧಾನದಲ್ಲಿ ಹೊಸ ಹೊಸ ಆವಿಷ್ಕಾರಗಳ ಮೂಲಕ ಯಾವುದೇ ಅಪಾಯವಿಲ್ಲದ ಸರಳ ಸೂಕ್ತ ಉಪಕರಣಗಳನ್ನು ಕಂಡುಹಿಡಿದಿವೆ. 

ಇವುಗಳಲ್ಲಿ ಇಂಪ್ಲಾಟ್ಸ್ ಎಂಬುವುದು ಅತ್ಯಂತ ಸರಳ ಅಳವಡಿಕೆಯ ವಿಧಾನವಾಗಿದೆ. ಇದರ ಕುರಿತಂತೆ ವೈದ್ಯಾಧಿಕಾರಿ ಡಾ, ಹೊನ್ನಳ್ಳಿ ತಿಳಿಸುತ್ತಾ, ಈ ಇಂಪ್ಲನೋಟ ಎನ್, ಎಕ್ಸ್,ಟಿ ಒಂದು ಸಿಂಥೆಟಿಕ್ ಪಾಲಿಮರ್ ಉಳ್ಳ ಬೆಂಕಿಕಡ್ಡಿ ಗಾತ್ರ ಹೊಂದಿರುತ್ತದೆ. ಪ್ರೊಜೊಸ್ಟ್ರಾನಂತಹ ಇಟಿನೋಜಸ್ಟ್ರಾಲ ಎಂಬ ಹಾರ್ಮೋನ್ ಅನ್ನು ಹೊಂದಿರುತ್ತದೆ. ಅದನ್ನು ಅಳವಡಿಸಲು ಒಂದು ನವೀನತೆಯುಳ್ಳ
 ಉಪಕರಣದಲ್ಲಿ ಮೊದಲೇ ಲೋಡ್ ಮಾಡಲಾಗುತ್ತದೆ, ಯಾವುದೇ ನೋವಿಲ್ಲದೆ ಸರಳ ವಿಧಾನದಲ್ಲಿರುತ್ತದೆ.
            ಇಂಪ್ಲಾಟ್ಸ್ ಹೇಗೆ ಕೆಲಸ ಮಾಡುತ್ತದೆ? ಈ ಪ್ರಕ್ರಿಯೆಯಲ್ಲಿ ಅಂಡಾಣುವಿನ ಫಲವತ್ತತೆಯನ್ನು ತಡೆಗಟ್ಟಿ ಗರ್ಭ ಕಂಠದ ದ್ರವವನ್ನು ದಪ್ಪಗೊಳಿಸಿ, ವೀರ್ಯಾಣುಗಳು ಪ್ರವೇಶಿಸಲಾರದಂತೆ

 ನೋಡಿಕೊಳ್ಳುತ್ತದೆ. ಈ ರೀತಿ ಗರ್ಭಧಾರಣೆಯನ್ನು ತಡೆಗಟ್ಟುತ್ತದೆ. ಇದಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಮೂರು ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಮಕ್ಕಳು ಬೇಕೆಂದಾಗ ಅದನ್ನು ತೆಗೆಯುವ ಮತ್ತು ಅಳವಡಿಸುವ ವಿಧಾನ ಬಹಳ ಸರಳವಾಗಿರುತ್ತದೆ. ಒಟ್ಟಾರೆ ಇದು ಬಹಳ ಸುರಕ್ಷಿತ, ಪರಿಣಾಮಕಾರಿಯಾಗಿರುವ ವಿಧಾನ ಎಂದು ಡಾ ನಝರೀನ ತಿಳಿಸಿದರು.

           ಈ ಕಾರ್ಯಕ್ರಮದಲ್ಲಿ ಆರು ಜನ ಮಹಿಳೆಯರಿಗೆ ಇಂಪ್ಲನೋನ ಎನ್,ಎಕ್ಸ್,ಟಿ ಅಳವಡಿಸಲಾಯಿತು. ಬಂದಂತ ಪುರುಷ ಮತ್ತು ಮಹಿಳೆಯರಿಗೆ ಗರ್ಭ ನಿರೋಧಕಗಳ ಕುರಿತಂತೆ ಸಮಗ್ರ ಮಾಹಿತಿ ನೀಡಲಾಯಿತು. ಎಫ್,ಪಿ,ಏ ಇಂಡಿಯಾ ಧಾರವಾಡದಲ್ಲಿ ಹಮ್ಮಿಕೊಂಡಿದ್ದ ವಿಶ್ವಗರ್ಭ ನಿರೋಧಕ ದಿನಾಚರಣೆ ಸಮಾರಂಭದಲ್ಲಿ ಸಂಯೋಜಕರಾದ ಶಿಲ್ಪಾ ಅದರಗುಂಚಿ,

 ಎನ್.ಎಫ್.ಮಡಿವಾಳರ, ಆಶಾ ಕೋರಿಶೆಟ್ಟರ್, ಪ್ರಕಾಶ್ ಜೋಡಳ್ಳಿ, ಬಸಮ್ಮ ದೇಸಾಯಿ ಸೇರಿದಂತೆ ಸಿಬ್ಬಂದಿ, ಸಿಬ್ಬಂದೇತರ ಬಳಗ ಹಾಜರಿದ್ದರು.
ನವೀನ ಹಳೆಯದು

نموذج الاتصال