DHARWAD:ಭಾರತದ ಆರ್ಥಿಕತೆ ಏರುಗತಿಯಲ್ಲಿ ಸಾಗಿದೆ -ಡಾ. ಎಂ.ಗೋವಿಂದ ರಾವ್ ಅಭಿಮತ. OR ಶೇಕಡ 65 ರಷ್ಟು ಜನಸಂಖ್ಯೆಗೆ ಅಗತ್ಯವಾದ ಕೌಶಲ್ಯಯುತವಾದ ಶಿಕ್ಷಣದ ಅವಶ್ಯಕ --ಡಾ. ಎಂ.ಗೋವಿಂದ ರಾವ್.

ಭಾರತದ ಆರ್ಥಿಕತೆ ಏರುಗತಿಯಲ್ಲಿ ಸಾಗಿದೆ -ಡಾ. ಎಂ.ಗೋವಿಂದ ರಾವ್ ಅಭಿಮತ. OR 
ಶೇಕಡ 65 ರಷ್ಟು ಜನಸಂಖ್ಯೆಗೆ ಅಗತ್ಯವಾದ ಕೌಶಲ್ಯಯುತವಾದ ಶಿಕ್ಷಣದ ಅವಶ್ಯಕ --ಡಾ. ಎಂ.ಗೋವಿಂದ ರಾವ್.India's economy is on the rise -Dr. M. Govinda Rao Abhimata. OR 
65% of the population needs skilled education --Dr. M. Govinda Rao.
ಧಾರವಾಡ 02 : 
ಕಳೆದ ನಾಲ್ಕು ದಶಕದಲ್ಲಿ ಭಾರತದ ಆರ್ಥಿಕತೆ ಏರುಗತಿಯಲ್ಲಿ ಸಾಗಿದ್ದು, ಕೈಗಾರಿಕೆ, ತಂತ್ರಜ್ಞಾನ, ‌ಕೃಷಿ, ವಿದೇಶಿ ವ್ಯಾಪಾರ, ನವೋದ್ಯಮ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಏಕಸ್ವಾಮ್ಯ ಸಾಧಿಸುವಲ್ಲಿ ‌ಮಹತ್ತರ ಬೆಳವಣಿಗೆ ಕಂಡಿದೆ ಎಂದು  ನವದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆಂಡ್ ಪಾಲಿಸಿಯ ವಿಶ್ರಾಂತ ನಿರ್ದೇಶಕ ಡಾ. ಎಂ.ಗೋವಿಂದ ರಾವ್ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿಶ್ವವಿದ್ಯಾಲಯವು 'ಶಿಕ್ಷಣ ತಜ್ಞರ' ದಿನಾಚರಣೆಯ ಅಂಗವಾಗಿ ಶುಕ್ರವಾರದಂದು ಕವಿವಿ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ ಡಾ.ಡಿ.ಸಿ.ಪಾವಟೆ ಸ್ಮಾರಕ ಮೂಲತತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ 'ಶತಮಾನೋತ್ಸವ ವರ್ಷದಲ್ಲಿ ವಿಕಸಿತ  ಭಾರತದ ಸುಧಾರಣೆಯ ಅತ್ಯಗತ್ಯ' ಎಂಬ ವಿಷಯದ ಕುರಿತು ಮಾತನಾಡಿದರು. 

ವಿಶ್ವಬ್ಯಾಂಕ್ ವರದಿಯ ಪ್ರಕಾರ ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದೆ ಎಂದ ಅವರು 20247ರ ವರಗೆ ಐದು ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಿದ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಲಿದೆ ಎಂದರು. ಕರೋನಾ ನಂತರದಲ್ಲಿ ದೇಶದ ಜಿಡಿಪಿಯಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ ಎಂದ ಅವರು ಮುಂದಿನ 25 ವರ್ಷಗಳಲ್ಲಿ ಭಾರತದ ಜಿಡಿಪಿ ಶೇಕಡಾ 9%ರಷ್ಟು ಆಗಲಿದೆ ಎಂದ ಅವರು ಪ್ರಸ್ತುತ ಶೇಕಡಾ 44% ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದು, 42 % ರಷ್ಟು ಜನರು ಸಣ್ಣ ಉದ್ಯಮಗಳನ್ನು ಅವಲಂಭಿಸಿದ್ದು ಉಳಿದಂತೆ 20 ಜನರು ಉತ್ಪಾದಕತೆಯ ಕ್ಷೇತ್ರದಲ್ಲಿ ಉದ್ಯೋಗವನ್ನು ಹೊಂದಿದ್ದಾರೆ. ಎಂದು ವಿಶ್ಲೇಷಿಸಿದ ಅವರು ಐಟಿ ಕ್ಷೇತ್ರದ ಹೆಚ್ಚು ವೇತನ ಪಡೆಯುವ ಉದ್ಯೋಗ ದೂರಿಕಿಸುವಲ್ಲಿ ಭಾರತೀಯ ಯುವ ಸಮುದಾಯ ಪೂರಕವಾದ ವಿದ್ಯಾರ್ಹತೆ ಪದವಿ ಹೊಂದದೆ ಇರುವದು ಗಮನಾರ್ಹ ಸಂಗತಿ ಆಗಿದೆ ಎಂದು ಅವರು ಕೌಶಲ್ಯ ಆಧಾರಿತ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದರು.

ಡಿಜಿಟಲ್‌ ‌ಮೂಲಭೂತ ಸೌಕರ್ಯದಲ್ಲಿ ಭಾರತ ‌ಮುಂಚೂಣಿಯಲ್ಲಿದ್ದು, ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಸುಧಾರಣೆ ಹೊಂದಬೇಕಾಗಿದ್ದು, ವ್ಯಾಪಾರ, ಪ್ರವಾಸೋದ್ಯಮ ಮತ್ತು ಹೊಟೇಲ್ ಉದ್ಯಮ ಕ್ಷೇತ್ರವು ಹೆಚ್ಚು ಉದ್ಯೋಗ ಅವಕಾಶಗಳು ಇದ್ದು ಈ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯ ಆಧಾರಿತ ಶಿಕ್ಷಣ ನೀಡವ ಅಗತ್ಯವಿದೆ ಎಂದ ಅವರು ತ್ವರಿತ ಗತಿಯಲ್ಲಿ ಮೂಲಭೂತ ಸೌಕರ್ಯಗಳ ವೃದ್ಧಿ, ಮತ್ತು ಉದ್ಯೋಗ ಮತ್ತು ಆರ್ಥಿಕತೆ ವೃದ್ದಿಗಾಗಿ ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸಿದ್ದು, ಪ್ರಸ್ತುತ ಗುಜರಾತ್ ರಾಜ್ಯದಲ್ಲಿ ಅತಿಹೆಚ್ಚು ವಿಶೇಷ ಆರ್ಥಿಕ ವಲಯಗಳನ್ನು ಹೊಂದಿದೆ ಎಂದರು. ಸಂವಿಧಾನಿಕವಾಗಿ ಕಾರ್ಮಿಕ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬೇಕಾಗಿದೆ ಎಂದ ಅವರು  ವಿದೇಶಾಂಗ ವ್ಯಾಪಾರ ಆಮದು ಮತ್ತು ರಫ್ತುಗಳ ತೆರಿಗೆಗಳಲ್ಲಿ ಸುಧಾರಣೆ ತರುವುದು ಅವಶ್ಯಕವಾಗಿದೆ ಎಂದ ಅವರು ಪ್ರಸ್ತುತ ಶೇಕಡ 5% ರಷ್ಟು ರಫ್ತು ವ್ಯಾಪಾರದಲ್ಲಿ ಏರಿಕೆಯಾಗಿದೆ ಎಂದರು.
2023ರ ಪ್ರಕಾರ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆ ಕಂಡಿಎ ಎಂದ ಅವರು ಸಧ್ಯ ಭಾರತದ ಜನಸಂಖ್ಯೆ 1.43 ಟ್ರಿಲಿಯನ್ ಹೊಂದಿದ್ದು ಶೇಕಡ 65 ರಷ್ಟು ಜನಸಂಖ್ಯೆಗೆ ಅಗತ್ಯವಾದ ಕೌಶಲ್ಯಯುತವಾದ ಶಿಕ್ಷಣದ ಅವಶ್ಯಕತೆ ಇದ್ದು, ಭವಿಷ್ಯದಲ್ಲಿ ಉತ್ಪಾದಕ ಮಾನವ ಸಂಪನ್ಮೂಲವನ್ನು ಸೃಷ್ಟಿಸಬೇಕಾಗಿದೆ ಎಂದ ಅವರು ಬರುವ ದಿನಗಳಲ್ಲಿ ನೀತಿ ಆಯೋಗ ಮತ್ತು ಯೋಜನಾ ನಿರೂಪಕರು  ತಯಾರಿಕಾ ವಲಯ, ಕೈಗಾರಿಕೆ, ತಂತ್ರಜ್ಞಾನ ಆರೋಗ್ಯ, ವಿದೇಶಿ ವ್ಯಾಪಾರ, ನವೋಧ್ಯಮ, ಕೃಷಿ ಮತ್ತು ಕೌಶಲ್ಯ ಅಭಿವೃದ್ಧಿಯತ್ತ ಹೆಚ್ಚು ಗಮನ ನೀಡಬೇಕಾದ ಅವಶ್ಯಕತೆ ಇದೆ ಎಂದರು. 
ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿ ಡಾ.ಡಿ.ಸಿ‌.‌ ಪಾವಟೆ ಅವರಿಂದಲೇ ದೇಶಾದ್ಯಂತ ಕೀರ್ತಿ ಹೆಚ್ಚಿಸುವಲ್ಲಿ ಅವರ ಪಾತ್ರ ಬಹಳ ಇದೆ ಎಂದ‌ ಅವರು ಡಾ.ಡಿ.ಸಿ.ಪಾವಟೆ ಅವರು ದೂರದೃಷ್ಟಿಯನ್ನು ಹೊಂದಿದ್ದರು. ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪಾವಟೆ ಅವರು ಘನತೆಯನ್ನು ಕೊಟ್ಟರು.ಪಾವಟೆ ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯೋಣ ಎಂದರು.

ಇದೇ ಸಂದರ್ಭದಲ್ಲಿ ಕವಿವಿ ವಿದ್ಯಾ ಸೌಧದ ಮುಂಭಾಗದಲ್ಲಿರುವ ಡಾ.ಡಿ.ಸಿ.ಪಾವಟೆ ಅವರ ಮೂರ್ತಿಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. 

ಕವಿವಿ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಬಿ.ಎಚ್ ನಾಗೂರ ಅತಿಥಿಗಳನ್ನು ಪರಿಚಯಿಸಿದರು.ಕಾರ್ಯಕ್ರಮದಲ್ಲಿ ಕವಿವಿ ಕುಲಸಚಿವರಾದ ಡಾ.ಎ.ಚೆನ್ನಪ್ಪ, ಮೂಲತತ್ವ ಉಪನ್ಯಾಸ ‌ಮಾಲಿಕೆಯ ಸಂಯೋಜಕ ಡಾ.ಮಲ್ಲಿಕಾರ್ಜುನ ಪಾಟೀಲ,  ಕಾರ್ಯಕ್ರಮ ನಿರೂಪಿಸಿದರು. ಮೌಲ್ಯಮಾಪನ ಕುಲಸಚಿವರಾದ  ಡಾ.ನಿಜಲಿಂಗಪ್ಪ ಮಟ್ಟಿಹಾಳ್,   ಪ್ರಸಾರಾಂಗ ನಿರ್ದೇಶಕ ಡಾ.ಅಶೋಕ ಹೂಲಿಬಂಡಿ, ಡಾ‌. ಸಂಜೀವ ಇನಾಮದಾರ, ಡಾ.ಶಿವಾನಂದ ಶೆಟ್ಟರ್, ಡಾ.ಎನ್.ಸಿದ್ದಪ್ಪ ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು ಹಾಜರಿದ್ದರು.

ಕರ್ನಾಟಕ ವಿಶ್ವವಿದ್ಯಾಲಯವು 'ಶಿಕ್ಷಣ ತಜ್ಞರ' ದಿನಾಚರಣೆಯ ಅಂಗವಾಗಿ ಶುಕ್ರವಾರದಂದು ಕವಿವಿ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ ಡಾ.ಡಿ.ಸಿ.ಪಾವಟೆ ಸ್ಮಾರಕ ಮೂಲತತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ 'ಶತಮಾನೋತ್ಸವ ವರ್ಷದಲ್ಲಿ ವಿಕಸಿತ  ಭಾರತದ ಸುಧಾರಣೆಯ ಅತ್ಯಗತ್ಯ' ಎಂಬ ವಿಷಯದ  ಕುರಿತು ಅರ್ಥಶಾಸ್ತ್ರಜ್ಞ  ಮತ್ತು  ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆಂಡ್ ಪಾಲಿಸಿಯ ವಿಶ್ರಾಂತ ನಿರ್ದೇಶಕ ಡಾ. ಎಂ.ಗೋವಿಂದ ರಾವ್ ಮಾತನಾಡಿದರು.

ಕರ್ನಾಟಕ ವಿಶ್ವವಿದ್ಯಾಲಯವು 'ಶಿಕ್ಷಣ ತಜ್ಞರ' ದಿನಾಚರಣೆಯ ಅಂಗವಾಗಿ ಶುಕ್ರವಾರದಂದು ಕವಿವಿ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ ಡಾ.ಡಿ.ಸಿ.ಪಾವಟೆ ಸ್ಮಾರಕ ಮೂಲತತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಡಿ.ಸಿ.ಪಾವಟೆ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ನವೀನ ಹಳೆಯದು

نموذج الاتصال