ಅಹಿಂಸೆಯ ಮಹತ್ವ.
ಧಾರವಾಡ :ಧಾರವಾಡದ ಸನ್ಮತಿ ಜಿನಮಂದಿರದಲ್ಲಿ
ಚಾತುರ್ಮಾಸದ ನಿಮಿತ್ತ ಪ್ರತಿ ಶನಿವಾರ ಸಂಜೆ 4.15 ರಿಂದ ಡಾ.ಜಿನದತ್ತ ಹಡಗಲಿ ಇವರಿಂದ ನಡೆಯುತ್ತಿರುವ ಉಪನ್ಯಾಸ ಮಾಲಿಕೆಯಲ್ಲಿ ಎರಡನೇ ದಿನದ ಕಾರ್ಯಕ್ರಮದ
ಮುಖ್ಯಾoಶಗಳು.
ಮನುಕುಲ ಶಬ್ದಶಃ ಅಹಿಂಸೆಯನ್ನು ಅನುಸರಿಸಿದರೆ ಮಾನವೀಯ ಮೌಲ್ಯಗಳು ಉನ್ನತೀಕರಣಗೊಂಡು ಜಗತ್ತಿನಲ್ಲಿ ಶಾಂತಿ, ಪ್ರೀತಿ, ಸಮಾನತೆ ಮನೆಮಾಡುತ್ತದೆ ಆದರೆ ಈಗ ದುರುದ್ರಷ್ಟವಶಾತ್ ಜಗತ್ತಿನಲ್ಲೇನಾಗುತ್ತಿದೆ ನಿಮಗೆಲ್ಲ ಕಣ್ಣುಮುಂದೆಯೇ ಇದೆ ಇದಕ್ಕೆಲ್ಲ ಮೂಲ ಹಿಂಸೆಯೇ ಕಾರಣ ತಾವು ಮನುಷ್ಯಎಂಬುದನ್ನೇ ಮರೆತು ಹಿಂಸಾ ಮಾರ್ಗದಿಂದ ನಡೆಯುತ್ತಿರುವ ಪರಿಣಾಮ ಇನ್ನೊಬ್ಬರ ದುಃಖಕ್ಕೆ ಕಾರಣವಾಗುತ್ತಿದ್ದಾನೆ, "ಅಹಿಂಸಾ ಪರಮೋಧರ್ಮ" ಎನ್ನುವದು ಜೈನ ಧರ್ಮದ ಮೂಲ ಮಂತ್ರ ಅದಕ್ಕೇ ಅಹಿಂಸೆಯನ್ನು ಪ್ರತಿಪಾದಿಸುವವರು ಜೈನರು, ಆದ್ದರಿಂದ ಜಗತ್ತಿನಲ್ಲಿ ಇಂದು ಇದರ ಅಗತ್ಯವಿದೆ ಎಂದು ಅಹಿಂಸೆ ಮಹತ್ವವನ್ನು ತಿಳಿಸಿದರು.
ಸಂಕಲ್ಪ ಹಿಂಸೆ , ಉದ್ಯೋಗ ಹಿಂಸೆ , ಆರಂಭ ಹಿಂಸೆ, ಮತ್ತು ವಿರೋಧಿ ಹಿಂಸೆ ಎಂಬ ನಾಲ್ಕು ಪ್ರಕಾರದ ಹಿಂಸೆಗಳ ಬಗ್ಗೆ ವಿವರವಾಗಿ ಅವುಗಳ ಅರ್ಥ ಸಂದರ್ಭ ಉದಾಹರಣೆ ಸಹಿತ ಪ್ರಸ್ತುತ ಪಡಿಸಿದರು.
ಹಿಂಸೆ ಎನ್ನುವದು ಮಹಾ ಪಾಪವಾಗಿದೆ, ಯಾವದೇ ಕಾರಣಕ್ಕೂ ಪಾಪ ಕಾರ್ಯಕ್ಕೆ ಕೈಹಾಕದೆ ಸನ್ಮಾರ್ಗದಲ್ಲಿ ನಡೆಯುವದೇ ಜೀವನದ ಗುರಿಯಾಗಬೇಕೆಂದು ಬೋಧಿಸಿದರು.
ಉಪನ್ಯಾಸದ ನಂತರ ಇದೇ ವಿಷಯವಾಗಿ ಪ್ರಶೆಗಳನ್ನು ಕೇಳಿ ಉತ್ತರ ಪಡೆಯಲಾಗುತ್ತದೆ ಜೊತೆಗೆ ಬಹುಮಾನಗಳೂ ಉಂಟು ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಅತ್ಯಂತ ಉತ್ಸಾಹದಿಂದ ಭಾಗವಹಿದ್ದು ವಿಶೇಷವಾಗಿತ್ತು.