ಕDHARWAD: ಕ್ಯಾನ್ಸರ್ ನಿರ್ಮೂಲನಾ ಅಭಿಯಾನಕ್ಕಾಗಿಕಿಶೋರ್ ಕುಮಾರ್ ಸಂಗೀತ ಕಾರ್ಯಕ್ರಮ.

ಕ್ಯಾನ್ಸರ್ ನಿರ್ಮೂಲನಾ   ಅಭಿಯಾನಕ್ಕಾಗಿ
ಕಿಶೋರ್ ಕುಮಾರ್   ಸಂಗೀತ ಕಾರ್ಯಕ್ರಮ. 
  ಧಾರವಾಡ : ಕಿಶೋರ್ ಕುಮಾರ್ ಒಬ್ಬ ಸಮೃದ್ಧಿಭರಿತ ಶ್ರೇಷ್ಠ ಗಾಯಕರಾಗಿದ್ದರು.  ಅವರು ವಿವಿಧ ಭಾಷೆಗಳಾದ ಹಿಂದಿ, ಬಂಗಾಳಿ, ಮರಾಠಿ, ಅಸ್ಸಾಮೀ, ಗುಜರಾತಿ, ಕನ್ನಡ, ಭೋಜ್‌ಪುರಿ, ಮಳಯಾಳಮ್ ಮತ್ತು ಒರಿಯಾ ಸಹಿತ ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡುಗಳನ್ನ ಹಾಡಿ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಮಾಜಿಮಹಾಪೌರರು ಈರೇಶ ಅಂಚಟಗೇರಿ ಅಭಿಪ್ರಾಯಪಟ್ಟರು.
  ಅವರು ನಗರದ   ಆಲೂರು ವೆಂಕಟರಾವ ಭವನದಲ್ಲಿ ಎಂ ಕೆ ಸ್ಕ್ವೇರ್ ಫೌಂಡೇಶನ್ ವತಿಯಿಂದ  ಖ್ಯಾತ ಗಾಯಕ ಕಿಶೋರಕುಮಾರ 95 ನೇ ಹುಟ್ಟುಹಬ್ಬದ  ಸ್ಮರಣಾರ್ಥ ರಿಮಝಿಮಗಿರೆ ಸಾವನ  ಸಂಗೀತ ಸಂಕಲನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
   
ಮೊಹಮ್ಮದ್ ರಫೀ, ಮತ್ತು ಮುಕೇಶ್‌ರೊಂದಿಗೆ, ಅವರು 1950 ರ ದಶಕದಿಂದ 1980 ರ ದಶಕದ ಮಧ್ಯದವರೆಗೆ ಬಾಲಿವುಡ್‌ನ ಪ್ರಧಾನ ಪುರುಷ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು.  ಅವರ ಸ್ಮರಣಿಕೆ ಕಾರ್ಯಕ್ರಮ ಹಾಗು ಕ್ಯಾನ್ಸರ್ ನಿರ್ಮೂಲನಾ   ಅಭಿಯಾನ ಆಯೋಜಿಸಿದ್ದು ಕಾರ್ಯಕ್ರಮದ ಆಯೋಜಕರಿಗೆ ಅಭಿನಂದನೆಗಳು ಎಂದರು. 
    ಈ ಸಂದರ್ಭದಲ್ಲಿ  ಡಾ ಉಮೇಶ ಹಳ್ಳಿಕೇರಿ, ಸದಾನಂದ ಕುರಡಿಕೇರಿ, ಬಸವರಾಜ ಹೊರಕೆರಿ,ಡಾ ನಿತಿನಚಂದ್ರ ಹತ್ತಿಕಾಳ,
  ಮೋಹನ ಅರ್ಕಸಾಲಿ, 
 ಸುನೀಲ ಬಾಗೆವಾಡಿ , ಮಲ್ಲಿಕಾರ್ಜುನ 
ಚಿಕ್ಕಮಠ  ಹಾಗೂ ಗಣ್ಯಮಾನ್ಯರು ಸಂಗೀತ ಪ್ರೇಮಿಗಳು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال