DHARWAD:ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಕರೆ -ಕೊಳಚೆ ಅಭಿವೃದ್ದಿ ಮಂಡಳಿಯ ಅಧ್ಯಕ್ಷರು, ಶಾಸಕರಾದ ಪ್ರಸಾದ ಅಬ್ಬಯ್ಯ

ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಕರೆ -ಕೊಳಚೆ ಅಭಿವೃದ್ದಿ ಮಂಡಳಿಯ ಅಧ್ಯಕ್ಷರು, ಶಾಸಕರಾದ ಪ್ರಸಾದ ಅಬ್ಬಯ್ಯ 
 ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳನ್ನು ಕಲ್ಪಿಸಬೇಕು. ಮಕ್ಕಳಲ್ಲಿರುವ ಕ್ರಿಯಾಶೀಲತೆಯನ್ನು ಪ್ರತಿಯೊಬ್ಬ ಪಾಲಕರು, ಶಿಕ್ಷಕರು ಗುರುತಿಸಿ ಅವರಿಗೆ ಬೆನ್ನುತಟ್ಟುವ ಕಾರ್ಯ ಮಾಡಬೇಕು ಅಂತಹ ಕಾರ್ಯವನ್ನು ಬಣ್ಣದಮನೆ ಸಾಂಸ್ಕೃತಿಕ ವೇದಿಕೆ ಮಾಡುತ್ತಿರುವುದು ಸಂತಸ ಎಂದು ಕೊಳಚೆ ಅಭಿವೃದ್ದಿ ಮಂಡಳಿಯ ಅಧ್ಯಕ್ಷರು,ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
 ಅವರು ಗದಗದ ಬಣ್ಣದಮನೆ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಬಾಲಭವನ ಸೊಸೈಟಿ ಸಹಯೋಗದಲ್ಲಿ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ಚಿಣ್ಣರ ಚಿತ್ರ ಚಿತ್ತಾರ ಸ್ಪರ್ಧೆಯ ಪುಟ್ಟ ಕಲಾವಿದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂಕಗಳೇ ಇಂದು ಸರ್ವಸ್ವವಾಗಿದೆ. ಅಂಕಗಳನ್ನಾಧರಿಸಿ ವ್ಯಕ್ತಿತ್ವ ಅಳೆಯಲಾಗದು. ಮಕ್ಕಳಿಗೆ ಒತ್ತಡರಹಿತ ಶಿಕ್ಷಣ ಕೊಡಿಸುವುದು ಅಗತ್ಯ. ಧಾರವಾಡ ಸಾಹಿತ್ಯ, ಕಲೆ, ಸಂಸ್ಕೃತಿಯ ತವರೂರು. ಕಲೆ ಎಲ್ಲರಿಗೂ ಒಲಿಯುವುದಿಲ್ಲ. ತಪಸ್ಸಿನಂತೆ ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಮಾತ್ರ ಕಲೆ ಸಿದ್ಧಿಸಿಕೊಳ್ಳಬಹುದು ಎಂದರು. 
 ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮಕ್ಕಳಲ್ಲಿ ಉತ್ತಮ ಹವ್ಯಾಸಗಳು ರೂಢಿಸಬೇಕು. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದರು. 
 ಕಲಾವಿದರಾದ ಚಿ.ಸು. ಕೃಷ್ಣಶೆಟ್ಟಿ, ಕೆ.ವಿ. ಸುಬ್ರಮಣ್ಯ, ಸವಿತಾ ಅಮರಶೆಟ್ಟಿ ಎಂ.ಎ ಚಿಕ್ಕಮಠ, ಮೋಹನ ಸಿದ್ದಾಂತಿ ಇದ್ದರು. 
 
 ಈ ಸ್ಪರ್ಧೆಯಲ್ಲಿ ಗೆದ್ದ 300 ವಿದ್ಯಾರ್ಥಿ ಕಲಾವಿದರಿಗೆ 3000 ರೂ ನಗದು ಬಹುಮಾನದೊಂದಿಗೆ ಪ್ರಮಾಣಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು
ರಾಘವ ಕಮ್ಮಾರ ಪ್ರಾರ್ಥಿಸಿದರು. ವಿಜಯ ಕಿರೇಸೂರ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. 
ಮಾರ್ತಾಂಡಪ್ಪ ಕತ್ತಿ ವಂದಿಸಿದರು.
.
ನವೀನ ಹಳೆಯದು

نموذج الاتصال