DHARWAD: ಶರಣ ಸಮಾಜದ ಶಾಂತಿ ಸ್ವಾಸ್ಥ್ಯ ಹಾಳು ಮಾಡುವ ಕೃತಿ ವಚನ ದರ್ಶನ

ಶರಣ ಸಮಾಜದ ಶಾಂತಿ  ಸ್ವಾಸ್ಥ್ಯ ಹಾಳು ಮಾಡುವ ಕೃತಿ ವಚನ ದರ್ಶನ
 ಧಾರವಾಡ  21 :
 ಶರಣ ಸಮಾಜದ ಶಾಂತಿ  ಸ್ವಾಸ್ಥ್ಯ ಹಾಳು ಮಾಡುವ ಕೃತಿ ವಚನ ದರ್ಶನ ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ ಅಧ್ಯಕ್ಷ ಡಾ ಶಶಿಕಾಂತ ಪಟ್ಟಣ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ವಚನ ದರ್ಶನ ಎಂಬ ಕಳಪೆ ಮಟ್ಟದ  ಕೃತಿಯನ್ನು ಈ ಕೂಡಲೇ ಮುಟ್ಟುಗೋಲು ಹಾಕಬೇಕೆಂದರು.
 ಬಸವ ತತ್ವವು ಜಗತ್ತಿನ ಪ್ರಗತಿಪರ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಮಾದರಿ ಎನಿಸಿದ ಶರಣರ  ಅನುಭವ ಮಂಟಪ ಪರಿಕಲ್ಪನೆಯನ್ನು ಬುಡುಮೇಲು ಮಾಡುವ ರೀತಿಯಲ್ಲಿ  ಕೆಲ ಸಂಪ್ರದಾಯವಾದಿಗಳು ವಚನ ದರ್ಶನ ಕೃತಿ ರಚಿಸಿದ್ದಾರೆ ಎಂದು  ಹೇಳಿದರು.
 ಬಸವಣ್ಣನವರು ವರ್ಗ ವರ್ಣ ಲಿಂಗಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಬಂಡಾಯ ಧೋರಣೆ ಹೊಂದಿದ ಪುರೋಗಾಮಿ ವಿಚಾರಗಳಿಂದ ವಚನ ಚಳುವಳಿಯನ್ನು ಹುಟ್ಟು ಹಾಕಿದರು  . ಎಲ್ಲಾ ಕಾಯಕದ ವರ್ಗದವರು ಇಂತಹ ಅಪೂರ್ವ ವೈಚಾರಿಕ ಕ್ರಾಂತಿಗೆ ತಮ್ಮನ್ನು ತೊಡಗಿಸಿಕೊಂಡರು. ಕಂಬಾರ ಕುಂಬಾರ ಅಗಸ ಬೆಸ್ತ ಮಾದಿಗ ಮೇದಾರ ಹೀಗೆ ಬದುಕಿನಲ್ಲಿ ಅಗತ್ಯವಿರುವ ಶ್ರಮ ಸಂಸ್ಕೃತಿಯ ವಾರಸುದಾರರು ಶರಣರು.  
      ಶರಣರು  ಹೊರಗಿನ ಭೌತಿಕ ದೇವರಗಳನ್ನು ಗುಡಿ ಸಂಸ್ಕೃತಿ ಕಂದಾಚಾರ ಬಹುದೇವೋಪಾಸನೆ ಸಾಂಪ್ರದಾಯಿಕ  ಅಂಧ ಶೃದ್ಧೆಗಳ ವಿರುದ್ಧ ಬಂಡೆದ್ದರು ಶರಣರು
.  ವಚನ ಚಳುವಳಿಗೆ ತನ್ನದೇ ಆದ ಸ್ವಾನುಭಾವದ ನೆಲೆ ಇದೆ. ಅದು ವೇದ ಆಗಮ ಶಾಸ್ತ್ರ  ಪುರಾಣಗಳಿಂದ ಪ್ರಭಾವಿತವಾಗದೆ ಅದಕ್ಕೆ ಭಿನ್ನವಾಗಿ  ತನ್ನ ಕಾಯಕದ ಪಾರಿಭಾಷಿಕ ಪದಗಳಿಂದ ಸುಂದರ ಮುಕ್ತ ಶೈಲಿಯ ಗದ್ಯ ಪದ್ಯ ಮಿಶ್ರಿತ  ಪುರೋಗಾಮಿ   ಸಾಹಿತ್ಯ ಎನ್ನುವುದು ಹಲವು ಶತಕಗಳಿಂದ ದಾಖಲಾಗಿದೆ. ಇಂತಹ ಸುಂದರ  ವಚನ ಸಾಹಿತ್ಯವೂ ಹನ್ನೆರಡನೆಯ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಸುಮಾರು 250 ವರ್ಷಗಳ ವರೆಗೆ  ಕಾಲಗರ್ಭದಲ್ಲಿ ಹೂತು ಹೋಗಿತ್ತು.
     ಹದಿನೈದನೆಯ ಶತಮಾನದ ಹಂಪಿಯ ಪ್ರೌಢದೇವರಾಯನ ಕಾಲದಲ್ಲಿ ಮತ್ತೆ ವಚನಗಳು ಸಂಕಲನಕ್ಕೆ ಮತ್ತು ಸಂಪಾದನೆಗೆ   ಒಳಪಟ್ಟವು  . ಶೂನ್ಯ  ಸಂಪಾದನೆ ಕೃತಿಯೂ   ಸಹಿತ ಅನ್ಯ ಧರ್ಮಿಯರ   ಪೈಪೋಟಿಗೆ ಇಳಿದು ಕೆಲವು ಪವಾಡ ಪುರಾಣ ಕಲ್ಪಿತ ದೃಶ್ಯಗಳನ್ನು ಸೇರಿಸಿದರು.     ಆಗ ಸಂಸ್ಕೃತ ಉಕ್ತಿಗಳ ಸೇರಿಕೆ ಪ್ರಕ್ಷಿಪ್ತತೆ ಮತ್ತು ಖೋಟಾ ವಚನಗಳ ಸೇರ್ಪಡೆಯಿಂದಾಗಿ ವಚನ ಚಳುವಳಿಯಲ್ಲಿ ಸ್ವಲ್ಪ ಗೊಂದಲ ಉಂಟಾಗಿದ್ದು ಸಹಜ ಮತ್ತು ಸ್ವಾಭಾವಿಕ . ಇಂತಹ ಪ್ರಕ್ಷಿಪ್ತತೆ ಪರಿಷ್ಕರಣೆಯ ಬಗ್ಗೆ ಡಾ ಫ ಗು ಹಳಕಟ್ಟಿ ಪ್ರೊ ಶಿ ಶಿ ಬಸವನಾಳ ಡಾ ಆರ್ ಸಿ ಹಿರೇಮಠ ಡಾ ಎಂ ಎಂ ಕಲಬುರ್ಗಿ ಮುಂತಾದ ಅನೇಕ ಸಂಶೋಧಕರು   ವಚನಗಳಲ್ಲಿನ ಪ್ರಕ್ಷಿಪ್ತತೆಯ ನಿವಾರಣೆ ಒಂದು ವೈಜ್ಞಾನಿಕ ಮತ್ತು ವೈಚಾರಿಕ ಶರಣರ ಆಶಯಗಳ ಮೇಲೆ ನಡೆಯಬೇಕು ಎಂದೆನ್ನುವ ಅಭಿಪ್ರಾಯಗಳು ದಾಖಲಾಗಿವೆ.     ಈಗ ಅಯೋಧ್ಯಾ ಪ್ರಕಾಶನದವರು ಶ್ರೀ ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಹೊರ ತಂದ ವಚನ ದರ್ಶನ ಎಂಬ ಕೃತಿಯು ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ  ಕೃತಿಯಾಗಿದೆ.
 ಸಮಾಜದಲ್ಲಿ ಗೊಂದಲ ಸೃಷ್ಟಿಸುವ  ಹುನ್ನಾರದಿಂದ ಬೇರೆ ಬೇರೆ ನಗರಗಳಲ್ಲಿ ವಚನ ದರ್ಶನ ಬಿಡುಗಡೆ ಮಾಡಿ ಪುಸ್ತಕವನ್ನು ಮಾರಾಟ ಮಾಡುತ್ತಿದ್ದಾರೆ  .  ವಚನ ಚಳುವಳಿಗೆ ವೇದ ಶಾಸ್ತ್ರ ಆಗಮ ಮೂಲ ಎನ್ನುವ ರೀತಿಯಲ್ಲಿ ಬಿಂಬಿಸುವ ವಚನ ದರ್ಶನವು ಬಸವ ಭಕ್ತರ ಭಾವನೆಗೆ ಧಕ್ಕೆ ತರುವ ಕಾರ್ಯವಾಗಿದೆ. ಸಾರ್ವಕಾಲಿಕ ಸಮಾನತೆ ಶಾಂತಿ ಪ್ರೀತಿ ಸಮ ಬಾಳು ಸಮಪಾಲು ಎನ್ನುವ  ಶ್ರೇಷ್ಠ ಧ್ಯೇಯ ಹೊಂದಿದ ಶರಣರ ಅಭಿವ್ಯಕ್ತಿಗೆ ಕಳಂಕ ತರುವ ವಚನ ದರ್ಶನವನ್ನು ಈ ಕೂಡಲೇ ಸರಕಾರ ಮುಟ್ಟುಗೋಲು  ಹಾಕಬೇಕೆಂದು ಎಲ್ಲ ಬಸವ ಪರ ಸಂಘಟನೆಗಳ ಕಾರ್ಯಕರ್ತರು ಸರಕಾರವನ್ನು  ಒತ್ತಾಯಿಸಿದರು . ಒಂದು ವೇಳೆ ಸರಕಾರವು ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ    ಬಸವ ಕೇಂದ್ರ ಬಸವ ತಿಳುವಳಿಕೆ ಸಂಶೋಧನಾ ಕೇಂದ್ರಪುಣೆ ಲಿಂಗಾಯತ ಏಕತಾ ಸಮಿತಿ ಅನುಭವ ಮಂಟಪ ಯಾಲಕ್ಕಿ ಶೆಟ್ಟರ ಕಾಲೋನಿ. ಬಸವ ಸಮಿತಿ ,ಶರಣ ಸಾಹಿತ್ಯ ಪರಿಷತ್, ಜೆ ಎಲ್ ಎಂ,  ರಾಷ್ಟ್ರೀಯ ಬಸವ ದಳ  ಮುಂತಾದ ಬಸವ ಪರ ಸಂಘಟನೆಗಳು ಉಗ್ರ ಹೋರಾಟ ಮಾಡುವದಾಗಿ ತಿಳಿಸಿದರು.
 ಪತ್ರಿಕಾ ಗೋಷ್ಠಿಯಲ್ಲಿ  ಬಸವ ಕೇಂದ್ರದ ಅಧ್ಯಕ್ಷ ಸಿದ್ರಾಮಣ್ಣ ನಡಕಟ್ಟಿ,   ಜಿ ವಿ ಕೊಂಗವಾಡ 
ಶೇಖರ  ಕುಂದಗೋಳ  , ಉಮೇಶ ಕಟಗಿ. ಎಂ ಎಸ ಸಿರಿಯಣ್ಣವರ ,,ಶಿವರುದ್ರಗೌಡ ಎಸ್ ಕೆ ಕುಂದರಗಿ  ಜಯಶ್ರೀ ಪಾಟೀಲ ಇದ್ದರು.
ನವೀನ ಹಳೆಯದು

نموذج الاتصال