DHARWAD:ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ 2024-25 ಉದ್ಘಾಟನೆ

ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ 2024-25 ಉದ್ಘಾಟನೆ 
ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳು  ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ರಾಜೀವಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ  ಸಪ್ತಾಪುರ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2024-25 ಕಾರ್ಯಕ್ರಮ‌ ಉದ್ಘಾಟನೆ ಆಯಿತು.
ಅಧ್ಯಕ್ಷತೆ ವಹಿಸಿದ್ದ  ಮಾಜಿಮಹಾಪೌರರು ಈರೇಶ ಅಂಚಟಗೇರಿಯವರು ಮಾತನಾಡಿ, ಮಕ್ಕಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಹದಿನಾಲ್ಕು ಶಾಲಾ ಮಕ್ಕಳು ಭಾಗವಹಿಸಿದ ಬೃಹತ ಕಾರ್ಯಕ್ರಮ ಇದಾಗಿದೆ.  ಆಯೋಜಕರಿಗೆ ಅಭಿನಂದನೆ ಸಲ್ಲಿಸುವೆ.  ಇಂದಿನ ದಿನಮಾನಗಳಲ್ಲಿ ಪ್ರತಿಭೆಗಳು ಶಾಲಾ ಮಟ್ಟದಲ್ಲಿ ಬೆಳೆದು ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಬೇಕು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ವಿದ್ಯಾರ್ಥಿಗಳು  ವಿದ್ಯಾಭ್ಯಾಸದ ಜತೆಗೆ ವಿವಿಧ ಕ್ರೀಡೆ ಹಾಗು ಆಸಕ್ತಿ ಇರುವ ಹವ್ಯಾಸಗಳನ್ನ ಬೆಳೆಸಿಕೊಂಡು ದೇಶದ ಸತ್ಪ್ರಜೆಗಳಾಬೇಕು ಎಂದರು.
ಇಂತಹ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಇನ್ನು ಹೆಚ್ವಿನ‌ ಮಟ್ಟದಲ್ಲಿ ಆಯೋಜಿಸಿ ನಮ್ಮ‌ ಸಂಸ್ಥೆ ಯಾವತ್ತು ತಮ್ಮೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುವದೆಂದು ಕಾರ್ಯಕ್ರಮದ ಆಯೋಜಕರಿಗೆ ಅಭಿನಂದಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಅಶೋಕ ಸಿಂದಗಿ ,  ಮಂಜುನಾಥ ಅಡಿವೇರ  ರಾಧಾಕೃಷ್ಣನ್ ,  ಜಿಜಿ ಹಿರೇಮಠ  ಬಸವರಾಜ ತಾಳಿಕೋಟಿ ,
 ಎಸ ವಾಯ ಯಕ್ಕುಂಡಿಮಠ, 
ಶೋಭಾ ಕುಸುಗಲ,  ವೀಣಾ ತುಪ್ಪದ,  ಸುಧಾ ಕಾಳೆ ಶಿಕ್ಷಕರು ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال