11 ಕ್ಕೆ ಉಚಿತ " ಮ್ಯೂಸಿಕ್ ಫೆಸ್ಟಿವಲ್"2024
ಧಾರವಾಡ 08 :
ಕರ್ನಾಟಕ ಕಾಲೇಜು ಆವರಣದ ಶ್ರಜನಾ ರಂಗಮಂದಿರದಲ್ಲಿ
11 ಕ್ಕೆ ಉಚಿತ " ಮ್ಯೂಸಿಕ್ ಫೆಸ್ಟಿವಲ್"2024 ಸಂಜೆ 5 ಗಂಟೆಗೆ ಆಯೋಜಿಸಿಲಾಗಿದ್ದು,
ಭಾರತೀಯ ಸಂಗೀತ ವಿದ್ಯಾಲಯ ಮತ್ತು ದಾಸ ಟ್ರಸ್ಟ್ ಧಾರವಾಡ ಹಾಗೂ ಗಂಗೂಬಾಯಿ ಸಂಗೀತ ವಿದ್ಯಾಲಯದ ಆಯೋಜಿತ ಸಂಗೀತ ಕಾರ್ಯಕ್ರಮ
ಶ್ರಾವಣಾ ಬಂತು ನಾಡಿಗೆ ಎಂದು ಹಾಡಿದ್ದು ಧಾರವಾಡದ ಖ್ಯಾತ ಕವಿ ದ. ರಾ. ಬೇಂದ್ರೆ. ಶ್ರಾವಣ ಎಂದರೆ ಕೇಳುವುದು. ಅಂದರೆ ಸಂಗೀತಕ್ಕೆ ಹೇಳಿ ಮಾಡಿಸಿದಂಥ ಮಾಸ. ವರ್ಷಾಧಾರೆಯ ನಡುವೆ ಮಳೆರಾಗ ಕೇಳುತ್ತ ಕೂರುವುದು ಒಂದು ದಿವ್ಯ ಅನುಭೂತಿಯೇ ಸರಿ. ಅಂಥ ಸಂದರ್ಭ ಇದೋ ಬಂದಿದೆ ಎಂದು ಕಾಯ೯ದಶಿ೯ ವಿನಯ ನಾಯಕ ತಿಳಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಧಾರವಾಡದ ನೆಲದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವುದು ಭಾರತೀಯ ಸಂಗೀತ ವಿದ್ಯಾಲಯ. ತೊಂಬತ್ತೆರಡು ವರ್ಷ ಹಿಂದೆ ಶುರುವಾದ ಈ ವಿದ್ಯಾಲಯವು, ಕೇವಲ ಧಾರವಾಡಲ್ಲಿ ಅಷ್ಟೇ ಅಲ್ಲದೇ ದೇಶಾದ್ಯಂತ ಸಂಗೀತ ರಸಿಕರಲ್ಲಿ ಹೆಸರಾಗಿದೆ ಎಂದರು. ಧಾರವಾಡದ ಹೆಮ್ಮೆಯ ಭಾರತೀಯ ಸಂಗೀತ ವಿದ್ಯಾಲಯ ಪ್ರತಿ ತಿಂಗಳು ಸಹ ಒಂದು ಸಂಗೀತ ಕಾರ್ಯಕ್ರಮ ಆಯೋಜಿಸುತ್ತಿರುವುದು ವಿದ್ಯಾಲಯದ ವೈಶಿಷ್ಟ್ಯ. ಇದಕ್ಕೆ ದಾಸ ಟ್ರಸ್ಟ್ ಕೈಜೋಡಿಸುತ್ತ ಬಂದಿದೆ.
ಭಾರತೀಯ ಸಂಗೀತ ವಿದ್ಯಾಲಯವು ಸ್ವತಃ ಕಾರ್ಯಕ್ರಮ ನಡೆಸುವುದರೊಟ್ಟಿಗೆ ಪ್ರತಿಷ್ಠಿತ ಸಂಘಗಳ ಜೊತೆಗೂಡಿ ಸಂಗೀತಪ್ರಿಯರಿಗೆ ನಾದವನ್ನು ಉಣಬಡಿಸುತ್ತಿದೆ. ಈ ಸಾರಿ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯವೂ ಕೂಡಿಕೊಂಡು ಆಗಸ್ಟ್ 11 ರಂದು "ಮ್ಯೂಸಿಕ್ ಫೆಸ್ಟಿವಲ್" ಅನ್ನು ಆಯೋಜಿಸಲಾಗಿದೆಈ ಮ್ಯೂಸಿಕ್ ಫೆಸ್ಟಿವಲ್ ಗೆ ಹುಬ್ಬಳ್ಳಿ ಧಾರವಾಡ ಶಾಸಕರಾದ ಮಹೇಶ ತೆಂಗಿನಕಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ.
ಈ ಕಾರ್ಯಕ್ರಮದಲ್ಲಿ ರೋಸಿ ದತ್ತಾ ಅವರು ಗಾಯನ ಪ್ರಸ್ತುಪಡಿಸಲಿದ್ದಾರೆ, ತಬಲಾಸಾಥಿಯಾಗಿ ಶ್ರೀಧರ್ ಮಾಂಡ್ರೆ ಮತ್ತು ಹಾರ್ಮೋನಿಯಂ ಸಹಕಾರದಲ್ಲಿ ಗುರುಪ್ರಸಾದ ಹೆಗಡೆ ಜೊತೆಯಾಗಲಿದ್ದಾರೆ.
ಧಾರವಾಡ ನಗರಿಯು ಸಂಗೀತದಿಂದಾಗಿ ವಿಶಿಷ್ಟ ಅಸ್ಮಿತೆಯನ್ನು ಪಡೆದಿದೆ. ಇಲ್ಲಿ ಡಾ. ಗಂಗೂಬಾಯಿ ಹಾನಗಲ್ ಅಚ್ಚಳಿಯದ ಹೆಸರು. ತಮ್ಮ ಕಿರಾನಾ ಘರಾಣೆಯ ಗಾಯನ ವಿಶಿಷ್ಟ ಕಂಠದಿಂದ ವಿದ್ವತ್ತಿನಿಂದ ಡಾ. ಗಂಗೂಬಾಯಿ ಹಾನಗಲ್ ಚಿರಸ್ಥಾಯಿಯಾಗಿದ್ದಾರೆ. ಅವರ ಹೆಸರಲ್ಲಿ ಸಂಗೀತ ವಿಶ್ವವಿದ್ಯಾಲಯ ಇರುವುದು ಇದಕ್ಕೆ ನಿದರ್ಶನ. ಅವರ ನೆನಪಲ್ಲಿ, ಸಂಗೀತಕಲೆಯನ್ನು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕರಾದ ಪಂಡಿತ್ ರಾಕೇಶ್ ಚೌರಾಸಿಯಾ ಅವರಿಗೆ ನೀಡಲಾಗುವುದು. ಖ್ಯಾತ ವೈದ್ಯ ನೇತ್ರತಜ್ಞ ಮತ್ತು ದಾನಿಗಳಾದ ಪದ್ಮಶ್ರೀ ಡಾ.ಎಂ.ಎಂ.ಜೋಷಿ ಪ್ರಸ್ತುತ ಪ್ರಶಸ್ತಿಯನ್ನು ಪ್ರದಾನ ಮಾಡುವರು. ತದನಂತರ ರಾಕೇಶ್ ಚೌರಾಸಿಯ ಅವರ ಕೊಳಲಿನ ವಾದನ. ತಬಲಾ ಸಾಥ್ ನೀಡುವವರು ಖ್ಯಾತ ಯುವಪ್ರತಿಭೆ ಓಜಸ್ ಅಧಿಯಾ ಅವರು.
ಈ ಕಾರ್ಯಕ್ರಮವನ್ನು ಮಾಯಾ ರಾಮನ್ ಹಾಗೂ ಮಂಜಿರಿ ಮೋಕ್ತಾಲಿ ನಿರ್ವಹಣೆ ಮಾಡಲಿದ್ದಾರೆ. ಆಗಸ್ಟ್ 11 ಭಾನುವಾರ ಸಂಜೆ ಐದು ಗಂಟೆಗೆ ಈ ಕಾರ್ಯಕ್ರಮವಿದೆ. ಸ್ಥಳ ಸೃಜನಾ ರಂಗಮಂದಿರ, ಕರ್ನಾಟಕ ಕಾಲೇಜು ಆವರಣ ಧಾರವಾಡ.
ಮ್ಯೂಸಿಕ್ ಫೆಸ್ಟಿವಲ್ ಕಾರ್ಯಕ್ರಮ ನಡೆಸಲು ಪ್ರಾಯೋಜಕರಾಗಿ ತನಿಷ್ಕ್ ಕ್ಯಾರಟ್ ಲೇನ್, ಟಾಟಾ ತನಿಷ್ಕ್, ಟಾಟಾ ತನೈರಾ, ಪ್ರಶಾಂತ್ ಹಾಸ್ಪಿಟಲ್ ಮತ್ತು ಐವಿಎಫ್ ಸೆಂಟರ್, ಆಸ್ಥಾ ವುಮೆನ್ ಹೆಲ್ತ್ ಸೆಂಟರ್ ಸ್ಟೇಷನ್ ರೋಡ್ ಧಾರವಾಡ, ಎಂ ಎಂ ಜೋಷಿ ನೇತ್ರಾಲಯ ಮತ್ತು ರವಿ ಮತ್ತು ಜಯ ಭೂಪಾಲಪುರ್ ಫೌಂಡೇಶನ್ ನ್ಯೂ ಯಾರ್ಕ್ ಮತ್ತು ವಿನಾಯಕ ಎಲೆಕ್ಟ್ರಾನಿಕ್ಸ್ ಸಹಕಾರ ನೀಡಿರುತ್ತಾರೆ.
ಈ ಆಧುನಿಕ ಕಾಲಘಟ್ಟದಲ್ಲಿ ಸದಭಿರುಚಿಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ ಒಂದು ಸಾಹಸ. ಈ ಸಾಹಸ ಮಾಡಲು ಧೈರ್ಯವೆಂದರೆ ನೆರವು ಬೆಂಬಲ ನೀಡುವ ಸಹೃದಯ ಸದಸ್ಯರು, ಕಲಾಪ್ರೇಮಿಗಳು ಹಾಗೂ ಪೋಷಕರು. ಕಾಲಕಾಲಕ್ಕೆ ಸದಸ್ಯತ್ವ ನವೀಕರಣೆ ಮಾಡುವ ಸದಸ್ಯರಿಗೆ ಕೇವಲ ವಿದ್ಯಾಲಯವಷ್ಟೇ ಅಲ್ಲ, ಸಮಸ್ತ ಕಲಾಲೋಕ ಆಭಾರಿಯಾಗಿರುತ್ತದೆ. ಪೋಷಕರ ಉದಾರ ಕೊಡುಗೆಯು ಕಲೆ ಸಂಸ್ಕೃತಿಯ ಉಳಿವಿಗೆ ಬೆಳವಣಿಗೆಗೆ ದಾರಿಯಾಗುತ್ತಿದೆ.
ಸದರಿ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆಕಲಾರಸಿಕರು ಸಂಗೀತಪ್ರೇಮಿಗಳು ಹಾಗೂ ಪೋಷಕರು ಆಗಮಿಸಿ ಕಲೆಯನ್ನು ಆಸ್ವಾದಿಸಬೇಕು ಎಂಬುದಾಗಿ ಸಂಘಟಕರು ವಿನಂತಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶಫೀಕ್ ಖಾನ್
ಪ್ರವೀಣ ಹೋಗಾರ ಇದ್ದರು.