ಇಂದು ಕೃಷಿ ವಿವಿಯಲ್ಲಿ ವಿಶೇಷ ಉಪನ್ಯಾಸ

ಇಂದು ಕೃಷಿ ವಿವಿಯಲ್ಲಿ ವಿಶೇಷ ಉಪನ್ಯಾಸ

ಧಾರವಾಡ : ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ದಿ. ಡಾ. ಎಸ್.ಎ.ಪಾಟೀಲರ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಸ್ಮರಣಾರ್ಥ ಡಾ. ಎಸ್.ಡಬ್ಲು. ಮೆನಸಿಣಕಾಯಿ ಎಜ್ಯುಕೇಶನ್ ಆಂಡ್ ರಿಸರ್ಚ್ ಫೌಂಡೇಶನ್ ಸಹಯೋಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆ.5 ರಂದು ಮಧ್ಯಾಹ್ನ 3 ಗಂಟೆಗೆ  ವಿವಿಯ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಲಾಗಿದೆ

ಐಸಿಎಆರ್ ಮಾಜಿ ನಿರ್ದೇಶಕ ಹಾಗೂ ಡಿಎಆರ್‌ಇ ಕಾರ್ಯದರ್ಶಿ ಪದ್ಮಶ್ರೀ ಡಾ. ಎಸ್. ಅಯ್ಯಪ್ಪನ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. 

ವಿಶ್ರಾಂತ ಕುಲಪತಿ ಡಾ. ಜೆ.ವಿ. ಗೌಡ, ಡಾ.ಎಸ್.ಎ.ಪಾಟೀಲರ ಪತ್ನಿ ಅನ್ನಪೂರ್ಣ ಪಾಟೀಲ ಉಪಸ್ಥಿತರಿರುವರು ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನವೀನ ಹಳೆಯದು

نموذج الاتصال