ಧಾರವಾಡ:ಸಾರ್ವತ್ರಿಕ ಮಾನವ ಮೌಲ್ಯಗಳು" ಕುರಿತು 3-ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ

"ಸಾರ್ವತ್ರಿಕ ಮಾನವ ಮೌಲ್ಯಗಳು" ಕುರಿತು 3-ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ 
ಧಾರವಾಡ : 
(ಎಫ್ ಡಿ ಪಿ))
ಎ ಐ ಸಿ ಟಿ ಈ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ ಧವಳಗಿರಿ, ಧಾರವಾಡ
ಸಹಯೋಗದೊಂದಿಗೆ 22 ರಿಂದ 24  ರವರೆಗೆ “ಸಾರ್ವತ್ರಿಕ ಮಾನವ ಮೌಲ್ಯಗಳು” ಕುರಿತು 3-ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಕ್ರಮವನ್ನು (ಎಫ್ ಡಿ ಪಿ) ಆಯೋಜಿಸಿದೆ. ಉತ್ತರ ಕರ್ನಾಟಕದ ವಿವಿಧ ಕಾಲೇಜುಗಳಿಂದ 108 ಶಿಕ್ಷಕರು  ಈ ಎಫ್ಡಿಪಿಗೆ ನೋಂದಾಯಿಸಿಕೊಂಡಿದ್ದಾರೆ. ಜೀವಂಧರಕುಮಾರ್, ಕಾರ್ಯದರ್ಶಿ, ಯಸ್ ಡಿ ಎಂ ಈ ಸೊಸೈಟಿ, ಧಾರವಾಡ 22 ನೇ ಆಗಸ್ಟ್ ೨೦೨೪ ರಂದು ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. ಗಾಜಿಯಾಬಾದ್ನ ಡಾ. ಮನೀಷಿ ಮಿಶ್ರಾ, ಸೊಲ್ಲಾಪುರದ ಪ್ರೊ.ಅನಿತಾ ಮಾನೆ, ಜಿಐಟಿ ಬೆಳಗಾವಿಯಿಂದ ಡಾ.ಪೂರ್ವ ವಿ.ಅಧ್ಯಾಪಕ್ ಮತ್ತು ಡಾ.ಶಶಿಕಾಂತ ಕುರೋಡಿ ಅವರು ಈ ಎಫ್ಡಿಪಿಯ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಎಸ್ ಡಿಎಂಸಿಇಟಿಯ ಪ್ರಾಚಾರ್ಯ ಡಾ.ಆರ್.ಎಲ್.ಚಕ್ರಸಾಲಿ ಸಮಾರೋಪ ನುಡಿಗಳನ್ನಾಡಿದರು. ಡಾ.ಎ.ಎ.ಕಿತ್ತೂರ ಧನ್ಯವಾದವಿತ್ತರು, ಪ್ರೊ.ಸಂಜೀತ್ ಅಮೀನಭಾವಿ ಸಮಾರಂಭ ನಡಿಸಿ ಕೊಟ್ಟರು.
ನವೀನ ಹಳೆಯದು

نموذج الاتصال