ಲಯನ್ಸ್ ಕ್ಲಬ್ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ಡಾ ರವಿ ಹೆಗಡೆ ಕರೆ

ಲಯನ್ಸ್ ಕ್ಲಬ್ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ಡಾ ರವಿ ಹೆಗಡೆ ಕರೆ 
ಸತತ 60 ವರ್ಷಗಳಿಂದ ಲಯನ್ಸ್ ಕ್ಲಬ್ ಸಮಾಜಮುಖಿ ಅಭಿವೃದ್ಧಿ ಯೋಜನೆಗಳ ಮುಖಾಂತರ ಅಂತರ ರಾಷ್ಟ್ರೀಯವಾಗಿ ಗಮನ ಸೆಳೆದಿದೆ.
ಸಮಾಜದಲ್ಲಿ ಅಶಕ್ತರು, ಆರ್ಥಿಕ ದುರ್ಬಲರ ಏಳಿಗೆಗಾಗಿ ಶ್ರಮಿಸುತ್ತಿರುವ ಲಯನ್ಸ್ ಕ್ಲಬ್ ಅತ್ಯಂತ ಜನಪ್ರಿಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಮಾಜಿ ಜಿಲ್ಲಾ ಗವರ್ನರ್  
ಸಿದ್ದಾಪುರ ಹೂವಿನ ಮನೆಯ ಡಾ ರವಿ ಹೆಗಡೆ ಅವರು ಹೇಳಿದರು.
ಅವರು ಸತ್ತೂರಿನ ಟ್ರಾವೆಲ್ಸ್ ಹೋಟೆಲ್ ನಲ್ಲಿ ಆಯೋಜಿಸಿದ್ದ 
ಲಯನ್ಸ್ ಕ್ಲಬ್ ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಇಂದಿನ ಮಾಧ್ಯಮಗಳಲ್ಲಿ ರಾಜಕೀಯ ಮತ್ತು ಕೌರ್ಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಿದೆ ಸಮಾಜ ಸುಧಾರಣೆ ಮಾಡುವ ಲಯನ್ಸ್ ಕ್ಲಬ್ ಸೇವಾ ಕಾರ್ಯಕ್ರಮಗಳನ್ನು ಮುಖಪುಟದಲ್ಲಿ ಸುದ್ದಿ ಪ್ರಕಟಿಸಿದರೆ ಇತರರಿಗೆ ಒಳ್ಳೆಯ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿಯೇ ಹಿರಿಮೆ ಸಾಧಿಸುವಂತಹ ಕಾರ್ಯಕ್ರಮ ಮಾಡಲಿ ಎಂದು ಮಾಜಿ ಜಿಲ್ಲಾ ಗವರ್ನರ್ ಹರ್ಷಾ ದೇಸಾಯಿ ಅವರು ಶುಭ ಹಾರೈಸಿದರು.
2024-25ನೇ ಸಾಲಿನ ಲಯನ್ಸ್ ಕ್ಲಬ್ ದ ಅಧ್ಯಕ್ಷರಾಗಿ ಗುರುರಾಜ ಪಿಸೆ, ಕಾರ್ಯದರ್ಶಿ ಕವಿತಾ ಅಂಗಡಿ, ಖಜಾಂಚಿ ವೃಷಭ ಕರೋಲೆ, ಮತ್ತು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ನೂತನ ಅಧ್ಯಕ್ಷರಾದ ಗುರುರಾಜ ಪಿಸೆ ಅವರು ಮಾತನಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಮಾಡುವ ಭರವಸೆ ನೀಡಿದರು.
ಮಾಜಿ ಅಧ್ಯಕ್ಷರಾದ ಶೈಲಾ ಕರಗುದರಿ ಅವರು ಮಾತನಾಡಿ ನನ್ನ ಅಧಿಕಾರದ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಮಾಡಿದ ಅನುಭವವನ್ನು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಶಿಲ್ಪಾ ಪಿಸೆ, ಶ್ಯಾಮಲಾ ಹೆಗಡೆ, ಆನಂದ ಕಮಲಾಪುರ, ಮುಕುಂದ ಹೆಬ್ಲಿಕರ, ಕೆ.ವಿ.ಅಚ್ಚುತ, ಆರ್.ಕೆ.ಹೆಗಡೆ. ವಿದ್ಯಾಧರ ಅಂಗಡಿ,ವಿಜಯ ಮುಧೋಳ್ ಕರ, ನಂದಿನಿ ಬಾಗಿ, ಉಷ್ಮಾ ದೇಸಾಯಿ,ಭುಜಾಂಗ ಶೆಟ್ಟಿ, ಗಿರಿಧರ್ ದೇಸಾಯಿ, ಡಾ ಅನಿರುದ್ಧ ಕುಲಕರ್ಣಿ,ಡಾ ಉಷಾ ಗದ್ದಗಿಮಠ, ಅನುಪಮಾ ಶೆಟ್ಟಿ, ವನಿತಾ ಹೆಬಸೂರ. ಶ್ರೀಕಾಂತ್ ದೇವಗಿರಿ, ಇನ್ನೀತರು ಉಪಸ್ಥಿತರಿದ್ದರು .
ಅನಿತಾ ಭಟ್ ಪ್ರಾರ್ಥಿಸಿದರು.
ಆರತಿ ಕಮಲಾಪುರ ಸ್ವಾಗತಿಸಿದರು. ಮೀರಾ ರಾವ್ ಧ್ವಜ ವಂದನೆ ಸಲ್ಲಿಸಿದರು.
ಅಶ್ವಿನಿ ಕೊಪ್ಪಿಕರ್ ಮತ್ತು ಹರ್ಷಾ ಡಂಬಳ ಅತಿಥಿಗಳನ್ನು ಪರಿಚಯಿಸಿದರು.
ಪ್ರಾದೇಶಿಕ ಅಧ್ಯಕ್ಷರಾದ ಅರವಿಂದ ಹೆಬಸೂರ ಶುಭ ಹಾರೈಸಿದರು.
ಡಾ ರಾಜಶ್ರೀ ಗುದಗನವರ ಮತ್ತು ಪ್ರೊ ಸುರೇಶ್ ಗುದಗನವರ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯದರ್ಶಿ ಕವಿತಾ ಅಂಗಡಿ ಒಂದನಾರ್ಪಣಿ ಮಾಡಿದರು.
ಲಯನ್ಸ್ ಕ್ಲಬ್ ಸರ್ವ ಸದಸ್ಯರು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال