ಅಪರೂಪದ ರಕ್ತದ ಗುಂಪಿನ ರಕ್ತದಾನ ಮಾಡಿ ಮಾನವೀತೆ ಮರೆದ ಮಹಾಂತೇಶ್

ಅಪರೂಪದ ರಕ್ತದ ಗುಂಪಿನ ರಕ್ತದಾನ ಮಾಡಿ ಮಾನವೀತೆ ಮರೆದ ಮಹಾಂತೇಶ್
    ಧಾರವಾಡ:--ನಗರದ ಜುಬ್ಲಿ ಸರ್ಕಲ್ ನಲ್ಲಿರುವ ದೇಶಪಾಂಡೆ ಆಸ್ಪತ್ರೆಯಲ್ಲಿ ನಿನ್ನೆ ದಿ
3 ರಂದು ರೋಟವೈರಲ್ ಅತಿಸಾರ ಪೌಷ್ಟಿಕಾಂಶದ ರಕ್ತಹೀನತೆಯಿಂದ ದಾಖಲಾಗಿದ್ದ ಅಭಿನಂದನ್ ಎಂಬ 13 ತಿಂಗಳು ಮಗುವಿಗೆ ಪ್ರಪಂಚದಲ್ಲಿಯೇ ಅತಿ ಅಪರೂಪದ ರಕ್ತದ ಗುಂಪಾದ O+ve ಬಾಂಬೆ ಬ್ಲಡ್ ಗ್ರೂಪ್ ರಕ್ತದ ಅವಶ್ಯಕತೆ ತುಂಬಾ ಇತ್ತು. ತಕ್ಷಣವೇ ಓವ೯ ವ್ಯಕ್ತಿ ದೂರದ ಊರಿದ್ದ ಬಂದ್ದು ರಕ್ತ ದಾನಮಾಡಿ ಮಾನವೀಯತೆ ಮೆರೆದ ಘಟನೆ ಜರುಗಿದೆ.
   ಎಷ್ಟೇ ಹುಡುಕಿದರೂ ಸಹಿತ ಬೇಕಾಗಿದ್ದ ರಕ್ತ ಸಿಗದಿದ್ದಾಗ ಶ್ರೀ ವಿವೇಕಾನಂದ ರಕ್ತದಾನ ಫೌಂಡೇಶನ್ ಸಂಪರ್ಕಿಸಿದಾಗ ಫೌಂಡೇಶನ್ ಸಂಸ್ಥಾಪಕರಾದ ಶಿವಕುಮಾರ್ ರಟ್ಟಿಹಳ್ಳಿ ಅವರು ಬಿಜಾಪುರದ ಅಪರೂಪದ ರಕ್ತದಾನಿ ಮಹಾಂತೇಶ್ ತುಂಬರಕಟ್ಟಿ ಅವರನ್ನು ಸಂಪರ್ಕಿಸಿ ರೋಗಿಯ ಪರಿಸ್ಥಿತಿಯನ್ನು ವಿವರಿಸಿದಾಗ ತಕ್ಷಣವೇ ಬರಲು ಒಪ್ಪಿಕೊಂಡು 197.7 ಕಿಲೋಮೀಟರ್ ದೂರದಿಂದ ಅಂದರೆ ಬಿಜಾಪುರದಿಂದ ರಕ್ತದಾನ ಮಾಡಲು ಬಂದು  ಸಂಜೆ 6 ಕ್ಕೆ ಹುಬ್ಬಳ್ಳಿಯನ್ನು ತಲುಪಿ ಧಾರವಾಡ ಜರ್ಮನ್ ಹಾಸ್ಪಿಟಲ್ ರಕ್ತದಾನ ಮಾಡಿದ್ದಾರೆ.
    ಅಪರೂಪದ ರಕ್ತದಾನಿಯಾದ ಮಹಾಂತೇಶ್ ತುಂಬರಕಟ್ಟಿ ಅವರಿಗೆ ಶ್ರೀ ವಿವೇಕಾನಂದ ರಕ್ತದಾನ ಫೌಂಡೇಶನ್ ಸಂಸ್ಥಾಪಕರಾದ ಶ್ರೀ ಶಿವಕುಮಾರ್ ರಟ್ಟಿಹಳ್ಳಿ ಮತ್ತು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿ ನೇತ್ರಾವತಿ ಮಡ್ಲಿ ಫೌಂಡೇಶನ್ ಸರ್ವ ಸದಸ್ಯರು ಮತ್ತು ದೇಶಪಾಂಡೆ ಹಾಸ್ಪಿಟಲ್ ಎಲ್ಲ ವೈದ್ಯಕೀಯ ಸಿಬ್ಬಂದಿಗಳು ರಕ್ತದಾನಿಗೆ ಅಭಿನಂದನೆ
 ಸಲ್ಲಿಸಿದ್ದಾರೆ.
ನವೀನ ಹಳೆಯದು

نموذج الاتصال