DHARWAD :- ವಿದ್ಯಾರ್ಥಿ ತನ್ನ ಅಂತರಂಗದಲ್ಲಿ ಸಾಕಷ್ಟು ಜ್ಞಾನ ಉಂಟು ಮಾಡಿಕೊಂಡು ಮನಸ್ಸಿನಲ್ಲಿ ಬಹಳ ತಿಳಿದುಕೊಳ್ಳುತ್ತಾನೆ
ಆದರೆ ಆ ಜ್ಞಾನವು ಬಹಿರಂಗದ ಕ್ರೀಯಾರೂಪದಲ್ಲಿ ಉಪಯೋಗವಾಗವಾದರೆ ಆತನ ಸಾಧನೆ ಹಾದಿ ಸುಲಭವಾಗುತ್ತದೆ ಎಂದು ಶಿಶು ಶಿಕ್ಷಣ ತಜ್ಞೆ ಶ್ರೀಮತಿ ಮೃಣಾಲ ಅರುಣ ಜೋಶಿ ಅಭಿಪ್ರಾಯಪಟ್ಟರು.
ಶಹರದ ಚರಂತಿಮಠ ಗಾರ್ಡನದಲ್ಲಿರುವ ಶ್ರೀ ಬನಶಂಕರಿ ಭವನ ವತಿಯಿಂದ ಎಸ್ಸೆ.ಎಸ್ಸೆ.ಎಲ್.ಸಿ, ಪಿಯುಸಿ ಪಾಸಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಮಾತನಾಡಿದರು. ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸದತ್ತ ಗಮನ ನೀಡಿದರೆ ಮನಸ್ಸು ಕಲ್ಮಷಗೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿಯಲ್ಲಿ ಕ್ರಿಯಾ ಮತ್ತು ಜ್ಞಾನಗಳ ಸಮನ್ವಯವಾಗಬೇಕು ಅಂದರೆ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ಭಾರತ ದೇಶದ ಯುವಶಕ್ತಿಯಲ್ಲಿರುವ ಮನಸ್ಸು ಹಾಗೂ ಶರೀರ ಶುದ್ದಿಕರಣಗೊಂಡರೆ ಈ ದೇಶ ಬಲಿಷ್ಟಗೊಳ್ಳಲು ಅನುಕೂಲವಾಗಲಿದೆ. ಆದರೆ ಖೇದಕರ ಸಂಗತಿ ಎಂದರೆ ಯುವಜನರು ದುಶ್ಚಟಕ್ಕೆ ಬಲಿಯಾಗಿ ಆರೋಗ್ಯವನ್ನೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ನಾವು ಸಿದ್ದರಾಗಬೇಕಿದೆ ಎಂದರು.
ಶಹರ ಠಾಣೆ ಪಿ.ಎಸ್.ಐ ಕುಮಾರಿ.ಸ್ವಾತಿ ಮುರಾರಿ ಮಾತನಾಡಿ, ಟಿ.ವಿ, ಮೊಬೈಲ್, ಇಂಟರನೆಟ್ ಬಳಕೆಯನ್ನು ದುರ್ಬಳಕೆ ಮಾಡಿಕೊಳ್ಳುವ ವಿಕೃತ ಮನಸ್ಸುಗಳು ತಂದೆ ಮಗಳ ಮೇಲೆ ಅತ್ಯಾಚಾರ, ಗುರು ಶಿಷ್ಯಳ ಮೇಲೆ ಅತ್ಯಾಚಾರ, ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಮೌಲ್ಯಯುತ ಸಂಸ್ಕಾರ ಶಿಕ್ಷಣ ನೀಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಮಾತನಾಡಿ, ಜ್ಯೋತಿ ಮುಟ್ಟಿ ಜ್ಯೋತಿಯೇ ಆಗುವಂತೆ ಗುರುಮುಟ್ಟಿ ಗುರುವಾದ ಶಿಷ್ಯನನ್ನು ಗುರುವೆಂದು ಕಾಣದವನು ತನ್ನ ಸ್ವರೂಪ ಅರಿಯದ ಅಜ್ಞಾನಿಯಾದಂತೆ. ಗುರು ಶಿಷ್ಯರೆಂದು ಭಿನ್ನ ಮಾಡಿದರೆ ಅಲ್ಲಿ ಗುರುತ್ವವಿಲ್ಲ ಸಂಸ್ಕಾರ ಸ್ವರೂಪವಾದ ವಿದ್ಯಾರ್ಥಿ ತನ್ನ ತಾನರಿದಡೆ ತನ್ನರಿವೆ ಗುರುವಾಗಬಲ್ಲ ಎಂದರು.
ಶ್ರೀ ಧರ್ಮಶಾಸ್ತಾ ಸೇವಾ ಸಮಿತಿ ರಮೇಶ ಪಾತ್ರೋಟ ಸ್ವಾಮಿಜಿ ಸಾನಿಧ್ಯವಹಿಸಿ ಮತನಾಡಿದರು. ಶ್ರೀ ಬನಶಂಕರಿ ಭವನ ಅಧ್ಯಕ್ಷ ಶಿವಾನಂದ ಲೋಲೆನವರ ಅಧ್ಯಕ್ಷತೆವಹಿಸಿ ಮಾತನಾಡಿದರು. ರವಿಕುಮಾರ ಆಶಯನುಡಿಗಳನ್ನಾಡಿದರು. ರೊಟರಿ ಕ್ಲಬ್ ಆಫ್ ಸೆವೆನ ಹಿಲ್ಸ್ ಅಧ್ಯಕ್ಷೆ ಗೌರಿ ಮದಲಬಾವಿ, ಬಸವಂತ ತೋಟದ, ಬಸವರಾಜ ಸೂರಗೊಂಡ ಉಪಸ್ಥಿತರಿದ್ದರು ಅ್ರಶೋಕ ನಾಗಸಮುದ್ರ ನಿರೂಪಿಸಿದರು. ರಾಘವೇಂದ್ರ ಸ್ವಾಗತಿಸಿದರು. ಶ್ರೀಮತಿ ಸುನಿತಾ ವಂದಿಸಿದರು. ಸಮಾರಂಭದಲ್ಲಿ ಎಸ್ಸೆ.ಎಸ್ಸೆ.ಎಲ್.ಸಿ, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ನೆರವೇರಿತು.
Dharwad :- Child education expert Mrs. Mrinala Arun Joshi opined that a student will acquire enough knowledge in his mind and know a lot in his mind, but if that knowledge is used in the form of open action, his path to success will be easier.He spoke on behalf of Sri Banashankari Bhavan at the Charantimath Garden in the city, awarding the students in the talent award and meritorious ceremony of the Sc.Sc.LC, PUC passed students. If a student pays attention to his studies, his mind cannot become polluted. In the student there must be coordination of action and knowledge, only that achievement is possible.