ಕಾರ್ಗಿಲ್ ಸ್ತೂಪಕ್ಕೆ ಗೌರವ ನಮನ ಸಲ್ಲಿಸಿದ ಡಿಸಿ ದಿವ್ಯ ಪ್ರಭು
ಧಾರವಾಡ 26 : ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಡಿಸಿ ಕಂಪೌಂಡ್‌ನಲ್ಲಿರುವ ಕಾರ್ಗಿಲ್ ಸ್ತೂಪಕ್ಕೆ ಗೌರವ ನಮನ ಸಲ್ಲಿಸಿದರು .
ಆಪರೇಶನ್ ವಿಜಯ್ ಹೆಸರಿನಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ಗೆದ್ದು ಇಂದಿಗೆ 25 ವರ್ಷಗಳಾಗಿವೆ . ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ವತಿಯಿಂದ ಧಾರವಾಡದಲ್ಲಿ ನಿರ್ಮಿಸಲಾಗಿರುವ ಕಾರ್ಗಿಲ್ ಸ್ತೂಪಕ್ಕೆ ಇಂದು ಮಾಜಿ ಸೈನಿಕರು ಅವರ ಕುಟುಂಬಸ್ಥರು ಹಾಗೂ ಸೇನೆಯಲ್ಲಿರುವಾಗಲೇ ಪ್ರಾಣ ತ್ಯಾಗ ಮಾಡಿದ ಸೈನಿಕರ ಕುಟುಂಬಸ್ಥರು ಬಂದು ಗೌರವ ನಮನ ಸಲ್ಲಿಸಿದರು .
ಅದೇ ರೀತಿ ಜಿಲ್ಲಾಡಳಿತದ ವತಿಯಿಂದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಕಾರ್ಗಿಲ್ ಸ್ತೂಪಕ್ಕೆ ಪುಷ್ಪನ ನಮನ ಸಲ್ಲಿಸಿದರು. ಇದೇ ವೇಳೆ ಎನ್‌ಸಿಸಿ ವಿದ್ಯಾರ್ಥಿಗಳು ಗೌರವ ವಂದನೆಯನ್ನು ಸಲ್ಲಿಸಿದರು.
Dc Divya Prabhu paid homage to the Kargil Stupa
Dharwad 26: In the wake of Kargil Victory Day, Dharwad District Collector Divya Prabhu paid homage to the Kargil Stupa at DC Compound.
Today it has been 25 years since India won the Kargil war in the name of Operation Vijay. Today, the families of ex-servicemen and the families of soldiers who sacrificed their lives while in the army came and paid their respects at the Kargil Stupa constructed in Dharwad by the North Karnataka Soldiers' Welfare Committee.
Similarly, Dharwad District Collector Divya Prabhu paid floral tributes to the Kargil Stupa on behalf of the district administration. Meanwhile, NCC students paid their respects.