ಪಿಂಜಾರ್ ನದಾಫ್ ಅಭಿವೃದ್ಧಿ ನಿಗಮಕ್ಕೆ ಆರ್ಥಿಕ ನೆರವು ನೀಡಿ;ಅತಿ ಹಿಂದುಳಿದ ಸಮುದಾಯವನ್ನು ಸರಕಾರ ಕಣ್ತೆರೆದು ನೋಡಿ

ಪಿಂಜಾರ್ ನದಾಫ್ ಅಭಿವೃದ್ಧಿ ನಿಗಮಕ್ಕೆ ಆರ್ಥಿಕ ನೆರವು ನೀಡಿ;ಅತಿ ಹಿಂದುಳಿದ ಸಮುದಾಯವನ್ನು ಸರಕಾರ ಕಣ್ತೆರೆದು ನೋಡಿ
ಹುಬ್ಬಳ್ಳಿ :- ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಜನಾಂಗವು ರಾಜ್ಯಾದ್ಯಂತ 22 ರಿಂದ 25 ಲಕ್ಷಗಳ ಜನಸಂಖ್ಯೆ ಹೊಂದಿರುವ ಸಮುದಾಯವಾಗಿದೆ ಎಂದು ಕರಾನಪಿಂಸ ಮಾಜಿ ಅಧ್ಯಕ್ಷ  ಕೆ ಎಂ ಹಾರೋಬೇಡಿ ಹೇಳಿದರು.

 ಹುಬ್ಬಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 
ಉನದಾಫ್ ಪಿಂಜಾರ ಜನಾಂಗವು ಸಾಮಾಜಿಕ , ಶೈಕ್ಷಣಿಕ , ಸಂಸ್ಕೃತಿಕ ,ಉದ್ಯೋಗಿಕ, ರಾಜಕೀಯ ಹಾಗೂ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದ ಶೋಷಿತ ಸಮಾಜವಾಗಿದೆ, ಈ ಜನಾಂಗ ಇಸ್ಲಾಂ ಧರ್ಮದ ಮುಸ್ಲಿಂ (ಅಲ್ಪಸಂಖ್ಯಾತರ) ಪಂಗಡದಲ್ಲಿದ್ದು ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದ ನದಾಫ್ ಪಿಂಜಾರ್ ಉಪಜಾತಿಯ ಪ್ರವರ್ಗ -1 ರ ಮೀಸಲಾತಿಯನ್ನು ಹೊಂದಿದೆ.  
ಆದರೂ ಇಲ್ಲಿಯವರೆಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ  ಮತ್ತು ಇತರೆ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸರ್ಕಾರದ ನಿರ್ದೇಶನ ಇದ್ದರೂ, ಸತತವಾಗಿ ತಾಂತ್ರಿಕ ದೋಷಗಳಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷತೆಯಿಂದ ಯಾವುದೇ ಯೋಜನೆಗಳು ಸರಿಯಾಗಿ ತಲುಪದೇ ವಂಚಿತರಾಗಿದ್ದೇವೆ ಎಂದು ತಿಳಿಸಿದರು. 
 ಸಮಾಜದ ಹಿರಿಯ ಮುಖಂಡ ನಿವೃತ್ತಿ ಶಿಕ್ಷಕ ಎನ್ ಪಿ ನದಾಫ್ ಮಾತನಾಡಿ ನದಾಫ್ ಪಿಂಜಾರ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡಿದ್ದ ಫಲವಾಗಿ ಹಿಂದಿನ ಸರಕಾರ ಮಾರ್ಚ್ 2023ಕ್ಕೆ ಪ್ರತ್ಯೇಕವಾಗಿ "ಪಿಂಜಾರ ನದಾಫ್ ಅಭಿವೃದ್ಧಿ ನಿಗಮ"ದ ಆದೇಶ ಮಾಡಿ ಘೋಷಣೆ ಮಾಡಿದೆ .(ಆದೇಶ ಸಂಖ್ಯೆ ಹಿಂವಕ 132 ಬಿಸಿಎ 2023,ಬೆಂಗಳೂರು ದಿ-24-03-2023)  ಘೋಷಿಸಿದೆ.
 ಆದರೆ ಈ ಹೊಸ ಸರ್ಕಾರ ಬಂದ ನಂತರ ಸಮಾಜದ ಹಿತ ದೃಷ್ಟಿಯಿಂದ ಅನುದಾನ ನೀಡಬೇಕೆಂದು ಸತತವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳವರಿಗೆ ಸಚಿವರುಗಳಿಗೆ ಮನವಿ ನೀಡಿದರು ಸರ್ಕಾರ ಸ್ಪಂದಿಸುತ್ತಿಲ್ಲ ಈ ಕುರಿತು ಸಾರ್ವಜನಿಕವಾಗಿ ಸರ್ಕಾರದ ಗಮನ ಸೆಳೆಯಲು ದಿನಾಂಕ- 22/7/2024  ಸೋಮವಾರ ದಂದು ರಾಜ್ಯಾದ್ಯಂತ ಏಕಕಾಲದಲ್ಲಿ ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಮಾನ್ಯ ಮುಖ್ಯಮಂತ್ರಿಗಳವರಿಗೆ ಮಾನ್ಯ ತಶಿಲ್ದಾರ್ ಅವರಿಗೆ ಮನವಿ ನೀಡಲಾಗುವದು. 
 ಈ ಕುರಿತಾಗಿ ನಮ್ಮ ಕರ್ನಾಟಕ ರಾಜ್ಯ ನದಾಫ್  ಪಿಂಜಾರ ಸಂಘದ ರಾಜ್ಯಾಧ್ಯಕ್ಷ  ಎಚ್ ಜಲೀಲ್ ಸಾಬ್ ಅವರ ಆದೇಶದ ಮೇರೆಗೆ ಕುಂದಗೋಳ ತಾಲೂಕು ಘಟಕದ ವತಿಯಿಂದ ದಿ-22-7-2024  ಸೋಮವಾರದಂದು ಬೆಳಿಗ್ಗೆ  11:30ಕ್ಕೆ ಕುಂದಗೋಳ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುತ್ತಿದ್ದೇವೆ.  ಅಂದು ರಾಜ್ಯಾದ್ಯಂತ ಸಲ್ಲಿಸುತ್ತಿರುವ ಮನವಿಗೆ ಸರ್ಕಾರ ಮಣಿಯದೆದಿದ್ದರೆ  ತಾಲೂಕಿನಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 ಪತ್ರಿಕಾಗೋಷ್ಠಿಯಲ್ಲಿ ಕರಾನಪಿಂಸ ಕುಂದಗೋಳ ತಾಲೂಕು ಅಧ್ಯಕ್ಷ  ಖಾದರ್ ಸಾಬ್ ನದಾಫ್ , ಕಾರ್ಯದರ್ಶಿ ಎಂ ಆರ್ ನದಾಫ್, ಮಹಿಳಾ ಜಿಲ್ಲಾಧ್ಯಕ್ಷ ಪರಿದಾಬೇಗ  ನದಾಫ್, ಮಾಜಿ ಅಧ್ಯಕ್ಷ  ಬಾಬುಬಲಿ ನದಾಫ್, ಜಿಲ್ಲಾ ಪದಾಧಿಕಾರಿ ಶರೀಫ್ ಸಾಬ್ ನದಾಫ್ ಇದ್ದರು.
ನವೀನ ಹಳೆಯದು

نموذج الاتصال