ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಧಾರವಾಡ ತಾಲೂಕ ಸಮಿತಿ ವತಿಯಿಂದ ಅಖಿಲ ಭಾರತ ಬೇಡಿಕೆಗಳ ದಿನದ ಅಂಗವಾಗಿ ಧಾರವಾಡ ತಾಲೂಕಿನ ಮನಸೂರು, ಮುಗದ, ಸಲಕಿನ ಕೊಪ್ಪ, ಮಾವಿನಕೊಪ್ಪ ಗ್ರಾಮದಲ್ಲಿ ಪ್ರತಿಭಟನೆ.

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಧಾರವಾಡ ತಾಲೂಕ ಸಮಿತಿ ವತಿಯಿಂದ  ಅಖಿಲ ಭಾರತ ಬೇಡಿಕೆಗಳ ದಿನದ ಅಂಗವಾಗಿ ಧಾರವಾಡ ತಾಲೂಕಿನ  ಮನಸೂರು, ಮುಗದ, ಸಲಕಿನ ಕೊಪ್ಪ, ಮಾವಿನಕೊಪ್ಪ ಗ್ರಾಮದಲ್ಲಿ  ಪ್ರತಿಭಟನೆ
 ಮಾಡಿ  ಮುಖ್ಯಮಂತ್ರಿಗಳಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ  ಮನವಿ  ಸಲ್ಲಿಸಲಾಯಿತು.
ರೈತರು ನಮ್ಮ ದೇಶದ ಬೆನ್ನೆಲುಬು. ಆದರೆ ಇಲ್ಲಿಯವರೆಗೂ ನಮ್ಮನ್ನಾಳಿರುವ ಸರ್ಕಾರಗಳ ನೀತಿಗಳಿಂದ ಅವರ ಬದುಕು ಅತ್ಯಂತ ದುಸ್ಥಿತಿಗೆ ತಳ್ಳಿ ಅವನ ಬೆನ್ನೆಲುಬನ್ನೇ ಮುರಿದುಹಾಕಿದೆ. ವ್ಯವಸಾಯವು ಇಂದು ಲಾಭರಹಿತ ಉದ್ದಿಮೆಯಾಗಿ ರೈತರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಆತ್ಮಹತ್ಯೆಗೆ ಮೊರೆಹೋಗುವಂತೆ ಮಾಡಿವೆ. ರೈತರು ಬಳಸುವ ಒಳಸುರಿಗಳಾದ ಗೊಬ್ಬರ, ಬೀಜ, ಕೀಟನಾಶಕ ವ್ಯವಸಾಯಕ್ಕೆ ಬಳಸುವ ಸಲಕರಣೆ ಮತ್ತು ಯಂತ್ರಗಳ ಬೆಲೆಗಳು ಬಾರಿ ದುಬಾರಿಯಾಗಿ ರೈತರ ಉತ್ಪಾದನಾ ವೆಚ್ಚ ಗಗನಕ್ಕೇರಿದೆ. ಆದರೆ ರೈತನು ಬೆಳೆದ ಉತ್ಪನ್ನಕ್ಕೆ ಖಚಿತವಾದ ಸೂಕ್ತ ಬೆಲೆ ಸಿಗದೆ ನಿರಂತರ ನಷ್ಟವನ್ನು ಅನುಭವಿಸುತ್ತಲೇ ಇದ್ದಾನೆ. ಪರಿಣಾಮವಾಗಿ ರೈತನು ತನ್ನ ಭೂಮಿಯನ್ನು ಮಾರಿಕೊಂಡು ಕೃಷಿ ಕಾರ್ಮಿಕನಾಗುತ್ತಿದ್ದಾನೆ. ಇದು ಮಾತ್ರವಲ್ಲದೆ ಹವಾಮಾನ ವೈಪರಿತ್ಯದಿಂದಾಗಿ ಕೆಲವೊಮ್ಮೆ ಅತೀವೃಷ್ಟಿ, ಅನಾವೃಷ್ಟಿಗೆ ಸಿಲುಕಿ ಕಂಗಾಲಾಗಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಜೀವನಗೈಯ್ಯಲು ಪಟ್ಟಣಗಳಿಗೆ ವಲಸೆ
 ಹೋಗಲೇಬೇಕಾದ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾನೆ.
 ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎ ಐ ಕೆ ಕೆ ಎಮ್ ಎಸ್ ಮನವಿ ಮಾಡುತ್ತದೆ.
 ಬೇಡಿಕೆಗಳು 
 ಕನಿಷ್ಠ ಬೆಂಬಲ ಬೆಲೆ (ಎಮ್ಎಸ್‌ಪಿ)ಯನ್ನು ಕಾನೂನುಬದ್ಧಗೊಳಿಸಿ.
  ವಿದ್ಯುತ್ ಮಸೂದೆ 2023 ಕೈಬಿಡಿ, ರೈತರ ಸಾಲ ಮನ್ನಾ ಮಾಡಿ ,ನರೇಗಾ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸಕೊಡಿ.  
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ,ಉಪಾದ್ಯಕ್ಷರಾದ ಹನುಮೇಶ ಹುಡೇದ, ಸಮಿತಿ ಸದಸ್ಯರಾದ ಉಳವಪ್ಪ ಅಂಗಡಿ, ಮಲ್ಲಪ್ಪ , ರಸೂಲ್ ನದಾಪ್, ಬಸಮ್ಮ , ಶಿವಯ್ಯ ನಾಗಪ್ಪ,ಮಾರುತಿ ಪೂಜಾರ ಮುಂತಾದವರು ಬಾಗವಹಿಸಿದ್ದರು.
ನವೀನ ಹಳೆಯದು

نموذج الاتصال