ಕೆ.ಎಮ್ ಎಫ್ ಅಧ್ಯಕ್ಷ ಶಂಕರ ಮುಗದ ಅವರಿಗೆ ಅಭಿನಂದನೆ ಮತ್ತು ಸಂಗೀತ ಕಾರ್ಯಕ್ರಮ
ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ವತಿಯಿಂದ ಮೂರನೇ ಬಾರಿಗೆ ಕೆ.ಎಮ್ ಎಫ್ ಧಾರವಾಡದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಶಂಕರ ಮುಗದ ಅವರಿಗೆ ಅಭಿನಂದನೆ ಮತ್ತು ಸಂಗೀತ ಕಾರ್ಯಕ್ರಮವನ್ನು ದಿನಾಂಕ 16-07-2024 ಮಂಗಳವಾರ ಸಂಜೆ 6-00 ಗಂಟೆಗೆ ಡಾ. ರಾಜನ್ ದೇಶಪಾಂಡೆ ಮಕ್ಕಳ ಆಸ್ಪತ್ರೆ, ಮೂರನೇ ಮಹಡಿಯಲ್ಲಿರುವ ತೇಜ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳತಜ್ಞರಾದ ಡಾ. ರಾಜನ್ ದೇಶಪಾಂಡೆ ವಹಿಸುವರು ಮುಖ್ಯ ಅತಿಥಿಗಳಾಗಿ ವಿರೋಧ ಪಕ್ಷದ ಉಪನಾಯಕರು, ಶಾಸಕರಾದ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ಅಮೃತ ದೇಸಾಯಿ, ನ್ಯಾಯವಾದಿಗಳಾದ ಅರುಣ ಜೋಶಿ, ಆರ್.ಐ.ಡಿ 3170ನ ಅಸಿಸ್ಟೆಂಟ್ ಗೌರ್ನರ್ ಡಾ. ಪಲ್ಲವಿ ದೇಶಪಾಂಡೆ, ರೋಟರಿ ಕ್ಲಬ್, ಧಾರವಾಡ ಪ್ರೈಮ್ ನ ಅಧ್ಯಕ್ಷರಾದ ಡಾ. ಶಿಲ್ಪಾ ಅಡೂರ, ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ನ ಅಧ್ಯಕ್ಷರಾದ ಕರಣ ದೊಡ್ಡವಾಡ, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ್,ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ನ ಮಾಜಿ ಅಧ್ಯಕ್ಷರಾದ ಸುನೀಲ ಬಾಗೇವಾಡಿ ಆಗಮಿಸುವರು.
ರೋಟರಿ ಕ್ಲಬ್, ಧಾರವಾಡ ಸೆಂಟ್ರಲ್, ಕಾರ್ಯದರ್ಶಿಗಳಾದ ವಾಮನ ಮಂತ್ರಿ, ರೋಟರಿ ಕ್ಲಬ್, ಧಾರವಾಡ ಪ್ರೈಮ್ ನ ಕಾರ್ಯದರ್ಶಿಗಳಾದ ಡಾ. ಅವಿನಾಶ ದೊಡ್ಡ ಮನಿ ಗೌರವ ಉಪಸ್ಥಿತಿ ಇರುವರು.
ನಂತರ ಗಾಯಕರಾದ ಪ್ರೇಮಾನಂದ ಶಿಂದೆ ಮತ್ತು ಶಿವಾನಂದ ಹೂಗಾರ ಸಂಗೀತ ಕಚೇರಿ ನಡೆಸಿಕೊಡುವರು ಎಂದು ಪ್ರತಿಷ್ಠಾನದ ಕಾರ್ಯದರ್ಶಿ, ಸಂಘಟಕರಾದ ಮಾರ್ತಾಂಡಪ್ಪ ಕತ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.