ಮಾಜಿ ಕೇಂದ್ರ ಸಚಿವರು, ಶಾಸಕರಾದ ಸನ್ಮಾನ್ಯ ಬಸನಗೌಡ ಪಾಟೀಲ ಯತ್ನಳರವರು,
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ, ಹಜರತ್ ನಿಜಾಮುದ್ದೀನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ಐದು ದಿನ ಓಡಿಸಲು, ಮೈಸೂರು- ಬಾಗಲಕೋಟ ಮಧ್ಯ ಸಂಚರಿಸುವ ಬಸವ ಎಕ್ಸಪ್ರೆಸ್ ರೈಲು ಗದಗ ವರೆಗೆ ವಿಸ್ತರಣೆಗೆ, ಮುಂಬಯಿ- ಸೋಲಾಪುರ ಒಂದೇ ಭಾರತ್ ರೈಲು ವಿಜಯಪುರ ವರೆಗೆ ಓಡಿಸಲು ಹಾಗೂ ವಿಜಯಪುರ ನಗರದಲ್ಲಿ ರೈಲ್ವೆ ಮೇಲ್ಸೆತುವೆ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದರು.
ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದು, ಆದಷ್ಟು ಶೀಘ್ರವಾಗಿ ಬೇಡಿಕೆ ಈಡೇಸುವ ಭರವಸೆಯಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.