ನಾಮಕೆವಾಸ್ತೆ ಅಧ್ಯಕ್ಷರಾಗದೆ,ಪತ್ರಿಕಾ ಭವನ ಹಾಗೂ ಪತ್ರಕರ್ತರ ಅಭಿವೃದ್ದಿಗಾಗಿ ಶ್ರಮಿಸುತ್ತಿರುವದನ್ನು ಪರಿಗಣಿಸಿ ಡಾ ಬಸವರಾಜ ಹೂಂಗಲ ತಂಡ ಮರು ಆಯ್ಕೆ.
ಧಾರವಾಡ : ಧಾರವಾಡ ಜರ್ನಲಿಸ್ಟ್ ಗಿಲ್ಡ್‌ಗೆ ಸತತ ಮೂರನೇ ಬಾರಿ ಅಧ್ಯಕ್ಷರಾಗಿ ಉದಯವಾಣಿ ಉಪಮುಖ್ಯ ವರದಿಗಾರ ಹಾಗೂ ಹಿರಿಯ ಪತ್ರಕರ್ತ ಡಾ.ಬಸವರಾಜ್ ಹೊಂಗಲ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಗಿಲ್ಡ್‌ನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತದ ಮೇರೆಗೆ ಅಧ್ಯಕ್ಷರಾಗಿ ಡಾ.ಹೊಂಗಲ್ ಮುಂದಿನ ಎರಡು ವರ್ಷಗಳ ಅವಧಿಗೆ ಮತ್ತೆ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಛಾಯಾಗ್ರಾಹಕ ಬಸವರಾಜ್ ಅಳಗವಾಡಿ ಕಾರ್ಯದರ್ಶಿಯಾಗಿ ಹಿರಿಯ ಪತ್ರಕರ್ತ ನಿಜಗುಣಿ ದಿಂಡಲಕೊಪ್ಪ, ಖಜಾಂಚಿಯಾಗಿ ಪತ್ರಕರ್ತ ವಿಕ್ರಮ್ ನಾಡಿಗೇರ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಹಿರಿಯ ಪತ್ರಕರ್ತರಾದ ಡಾ.ವಿಶ್ವನಾಥ ಕೋಟಿ, ಮಂಜುನಾಥ ಅಂಗಡಿ, ಶ್ರೀನಿಧಿ ಆರ್, ರವಿಕುಮಾರ ಕಗ್ಗಣ್ಣವರ, ರಾಜು ಕರಣಿ ಹಾಗೂ ಛಾಯಾಗ್ರಾಹಕ ಸದ್ದಾಂ ಮುಲ್ಲಾ. ಹಿರಿಯ ಛಾಯಾಗ್ರಾಹಕರಾದ ಮಿಲಿಂದ್ ಪಿಸೆ, ಆಯ್ಕೆ ಮಾಡಲಾಯಿತು.
ಇದಕ್ಕು ಮುನ್ನ ಸಭೆಯಲ್ಲಿ ಗಿಲ್ಡ್ ಅಧ್ಯಕ್ಷ ಡಾ.ಬಸವರಾಜ್ ಹೊಂಗಲ್ ಗಿಲ್ಡ್‌ನ್ ವಾರ್ಷಿಕ ಕಾರ್ಯಚಟುವಟಿಕೆ ಕುರಿತು ವರದಿ ಮಂಡಿಸಿದರು. ಖಜಾಂಚಿ ವಿಕ್ರಮ ನಾಡಿಗೇರ ವಾರ್ಷಿಕ ಲೆಕ್ಕಪತ್ರ ವಿವರ ನೀಡಿದರು.
ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ ಸ್ವಾಗತಿಸಿದರು, ಉಪಾಧ್ಯಕ್ಷರಾದ ಬಸವರಾಜ ಅಳಗವಾಡಿ ಕೊನೆಯಲ್ಲಿ ವಂದಿಸಿದರು. ಧಾರವಾಡ ಜರ್ನಲಿಸ್ಟ್ ಗಿಲ್ಡ್‌ನ ಸರ್ವ ಸದಸ್ಯರು ಹಾಜರಿದ್ದರು.