7 ರಂದು ಧಾರವಾಡ ಲಯನ್ಸ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ.
ಧಾರವಾಡ 05 :
ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಧಾರವಾಡ ಲಯನ್ಸ್ ಸಂಸ್ಥೆಯ 2024-25 ನೇ ಸಾಲಿನ ಪದಗ್ರಹಣ ಸಮಾರಂಭವು ಜುಲೈ 07 ರಂದು ಸಂಜೆ 6,30 ಕ್ಕೆ ಇಲ್ಲಿಗೆ ಸಮೀಪದ ಸತ್ತೂರಿನ ಟ್ರಾವಲ್ ಇನ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಗುರುರಾಜ ಪಿಸೆ ತಿಳಸಿದರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಅಂತಾರಾಷ್ಟ್ರೀಯ ಲಯನ್ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಸಿದ್ದಾಪೂರದ ಹೂವಿನಮನೆಯ ಡಾ.ರವಿ ಹೆಗಡೆ 60 ನೇ ಪದಾಧಿಕಾರಿಗಳ ತಂಡಕ್ಕೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಎಂದರು ಗೌರವ ಅತಿಥಿಗಳಾಗಿ ಧಾರವಾಡ ಲಯನ್ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಹರ್ಷ ದೇಸಾಯಿ ಆಗಮಿಸುವರು.
ಧಾರವಾಡ ಲಯನ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಗುರುರಾಜ ಪಿಸೆ, ಕಾರ್ಯದರ್ಶಿಯಾಗಿ ಕವಿತಾ ಅಂಗಡಿ ಮತ್ತು ಖಜಾಂಚಿಯಾಗಿ ವೃಷಭ್ ಕರೋಲೆ ಅಧಿಕಾರ ಸ್ವೀಕರಿಸಲಿದ್ದಾರೆ.
ಪರಿಸರ, ದೃಷ್ಟಿ, ಯುವ ಜನಾಂಗ, ವಿಪತ್ತು ಪರಿಹಾರ, ಮಾನವೀಯತೆ, ಮಧುಮೇಹ, ಬಾಲ್ಯ ಕ್ಯಾನ್ಸರ್, ಹಸಿವು ಕ್ಷೇತ್ರಗಳಲ್ಲಿ ಕಾರ್ಯ ಮಾಡಲು ಅವಕಾಶ ದೊರೆತಿದೆ ಎಂದರು . ಮಳೆಗಾಲದ ಹಿನ್ನೆಲೆಯಲ್ಲಿ ಮೊದಲಿಗೆ ಪರಿಸರದ ಕಾರ್ಯಚಟುವಟಿಕೆಯಿಂದ ನೂತನ ತಂಡವು ಕಾರ್ಯೋನ್ಮುಖವಾಗಲಿದೆ. ಲಾರಿ, ಟ್ಯಾಕ್ಸಿ ಚಾಲಕರ ಕಣ್ಣುಗಳ ತಪಾಸಣೆ, ಮಕ್ಕಳ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಸಂಸ್ಥೆಯು ಕಾರ್ಯಚಟುವಟಿಕೆ ಹಮ್ಮಿಕೊಂಡಿದೆ. ಆಧುನಿಕ ಜೀವನ ಶೈಲಿ ಹಿನ್ನೆಲೆಯಲ್ಲಿ ಮಕ್ಕಳಾದಿಯಾಗಿ ಯುವಕರಿಗೂ ಮಧುಮೇಹ ಬರುತ್ತಿದ್ದು, ಮಧುಮೇಹ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಯುವ ಜನಾಂಗ ಮಾಧಕ ದ್ರವ್ಯ ಸೇರಿದಂತೆ ಅನೇಕ ಚಟಗಳಿಗೆ ಬಲಿಯಾಗುತ್ತಿದ್ದು, ವಿವಿಧ ಕಾಲೇಜುಗಳಿಗೆ ತೆರಳಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಗ್ರಂಥಾಲಯಗಳಿಗೆ ಪುಸ್ತಕಗಳ ಸಹಕಾರ, ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರಿಗಾಗಿ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ, ಬುದ್ಧಿಮಾಂದ್ಯ ಮಕ್ಕಳಿಗೆ ನೆರವು, ಮಹಿಳಾ ಸ್ವಾವಲಂಬನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಹೊಂದಲಾಗಿದೆ ಎಂದು ತಿಳಸಿದರು .
ಪತ್ರಿಕಾಗೋಷ್ಟಿಯಲ್ಲಿ ವೃಷಭ ಕರೋಲೆ (ನೂತನ ಖಜಾಂಚಿ), ಶೈಲಾ ಕರಗುದರಿ (ಮಾಜಿ ಅಧ್ಯಕ್ಷರು), ಅನಿರುದ್ಧ ಕುಲಕರ್ಣಿ (ಮಾಜಿ ಕಾರ್ಯದರ್ಶಿ), ಉಷಾ ಗದಗಿಮಠ (ಮಾಜಿ ಕೋಶಾಧಿಕಾರಿ) ಇದ್ದರು.
ಲಯನ್ಸ್ ಇತಿಹಾಸ.
ಲಯನ್ಸ್ ಕ್ಲಬ್ ಧಾರವಾಡ ಮಾತ್ರವಲ್ಲದೇ ಇಡೀ ಜಗತ್ತಿನಲ್ಲಿ ಪಸರಿಸಿದೆ. ಅಮೆರಿಕಾದ ಚಿಕಾಗೋದಲ್ಲಿ 1917 ರಲ್ಲಿ ಶುರುವಾಗಿದ್ದು ಶತಮಾನ ಕಂಡಿರುವ ಸಂಸ್ಥೆ ಇದು. ಜಗತ್ತಿನಾದ್ಯಂತ ೪೯ ಸಾವಿರ ಕ್ಲಬ್‌ಗಳಿದ್ದು ಸದಸ್ಯರ ಸಂಖ್ಯೆ 1.40 ಕೋಟಿ. ಧಾರವಾಡದಲ್ಲಿ 1965 ರಲ್ಲಿ ಲಯನ್ಸ್ ಕ್ಲಬ್ ಕಾರ್ಯಚಟುವಟಿಕೆಗಳು ಆರಂಭವಾಗಿದ್ದು, ಇದು 60 ನೇ ಪದಗ್ರಹಣ ಕಾರ್ಯಕ್ರಮ. ಸದ್ಯ ಧಾರವಾಡ ಲಯನ್ಸ್ದಲ್ಲಿ 63 ಸದಸ್ಯರು ಇದ್ದಾರೆ ಎಂಬ ಮಾಹಿತಿಯನ್ನು ನೀಡಿದರು.