ಎಸ್ ಡಿ ಎಂ ನಲ್ಲಿ ವಿಶ್ವ ಪರಿಸರ ದಿನಾಚರಣೆ.

ಎಸ್ ಡಿ ಎಂ ನಲ್ಲಿ ವಿಶ್ವ ಪರಿಸರ ದಿನಾಚರಣೆ. 
ಧಾರವಾಡ:
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧವಳಗಿರಿ, ಧಾರವಾಡ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾಧಿಕಾರಿ
 ಶ್ರೀಮತಿ. ದಿವ್ಯ ಪ್ರಭು ಜೆ.ಆರ್. ,  ಮುಖ್ಯ ಅತಿಥಿಗಳಾಗಿ ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿದರು. 
ಮಾತನಾಡಿದ ಅವರು 
 ಭೌತಿಕ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಮತ್ತು ನಮ್ಮ ಅಗತ್ಯಗಳ ಬಗ್ಗೆ ತುಂಬಾ ಸ್ವಾರ್ಥಿಗಳಾಗಿದ್ದೇವೆ , ಪರಿಸರವನ್ನು ನಿರ್ಲಕ್ಷಿಸಲಾಗಿದೆ, ಅದರ  ಫಲಿತಾಂಶ ಬರ ಮತ್ತು ಮರುಭೂಮಿ. ಆದ್ದರಿಂದ ನಮ್ಮ ಸುತ್ತಮುತ್ತಲಿನ ಜನರು, ಪ್ರಾಣಿಗಳು ಮತ್ತು ಇತರ ಜೀವಿಗಳ ಅಗತ್ಯತೆಗಳ ಬಗ್ಗೆ ಸಂವೇದನಾಶೀಲರಾಗಿರಲು ಮತ್ತು ಅವುಗಳ ಪೋಷಣೆಗೆ ನಾವು ಕಾಳಜಿ ವಹಿಸುವ ಅಗತ್ಯವಿದೆ ಎಂದು  ವಿದ್ಯಾಥಿ೯ಗಳಿಗೆ ಕರೆ ನೀಡಿದರು. 

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೇಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆ ಅದರಲ್ಲೂ ಕೆರೆ, ಜಲಮೂಲಗಳ ಸಂರಕ್ಷಣೆಯಲ್ಲಿ ತಮ್ಮದೇ ಆದ ಅನುಭವಗಳನ್ನು ತಿಳಿಸಿದರು. ಧರ್ಮಸ್ಥಳ ಟ್ರಸ್ಟ್ನಿಂದ 600 ಕ್ಕೂ ಹೆಚ್ಚು ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಎಂದು ತಿಳಿಸಿದರು.

ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ  ವಿವೇಕ ಕವರಿ, ಹಿರಿಯ ಪರಿಸರ ಅಧಿಕಾರಿ, ವಲಯ ಕಚೇರಿ, ಧಾರವಾಡ  ಗೋಪಾಲಕೃಷ್ಣ ಸಣ್ಣತಂಗಿ, ಖ್ಯಾತ ಪರಿಸರ ತಜ್ಞ  ಶಂಕರ ಕುಂಬಿ, ಡಿಡಿಪಿಐ  ಕೆಳದಿಮಠ, ಎಸ್ಡಿಎಂಇ ಸೊಸೈಟಿ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳು. ಹಾಗೂ ಅರಣ್ಯ ಇಲಾಖೆ ಉಪಸ್ಥಿತರಿದ್ದರು.

ಎಸ್ಡಿಎಂಸಿಇಟಿಯ ಪ್ರಾಂಶುಪಾಲರಾದ ಡಾ.ರಮೇಶ ಎಲ್.ಚಕ್ರಸಾಲಿ ಅವರ ಸ್ವಾಗತ ಭಾಷಣದೊಂದಿಗೆ ಸಭೆ ಆರಂಭಗೊಂಡಿತು. ಈ ದಿನದ ಮಹತ್ವದ ಕುರಿತು ಪರಿಸರ ಅಧಿಕಾರಿ  ಜಗದೀಶ್ ಎಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಕೃತಿ ಸಂರಕ್ಷಣೆ ಕುರಿತು ಪ್ರಸ್ತಾಪಿಸಿದರು. ಎಸ್ ಡಿಎಂಸಿಇಟಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೊ.ವಿ.ಕೆ.ಪಾರ್ವತಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಪರಿಸರಕ್ಕೆ ಸಂಬಂಧಿಸಿದ ವಿಷಯದ ಕುರಿತು ಭಾಷಣ, ಚರ್ಚಾಸ್ಪರ್ಧೆ ಮತ್ತು ಪ್ರಬಂಧ ರಚನೆಯಂತಹ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಎಸ್ಡಿಎಂಸಿಇಟಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮುಖ್ಯ ಕಾರ್ಯದ ನಂತರ ವೃಕ್ಷ ನೆಡುವ ಕಾರ್ಯಕ್ರಮವು ಡಿಸಿ, ಶ್ರೀಮತಿ. ದಿವ್ಯ ಪ್ರಭು ಜೆ.ಆರ್.ಜೆ ಮತ್ತು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೇಜಿ, ಎಸ್ಡಿಎಂಇ ಸೊಸೈಟಿಯ ಉಪಾಧ್ಯಕ್ಷ  ಡಿ.ಸುರೇಂದ್ರ ಕುಮಾರ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال