2024 ರ-ವೈದ್ಯಶ್ರೀ ಪ್ರಶಸ್ತಿಗೆ
ಹುಬ್ಬಳ್ಳಿಯ ಡಾ. ಕವಿತಾ ಏವೂರ ಮತು ಪುತ್ತೂರಿನ ಡಾ. ರವಿಶಂಕರ ಪರ್ವಾಜೆ ಅವರು ಆಯ್ಕೆ
(ಹುಬ್ಬಳ್ಳಿಯ ಕಿಮ್ಸ್ ಪ್ಯಾಥಾಲಜಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕವಿತಾ ಏವೂರ ಮತ್ತು
ಪುತ್ತೂರಿನ ಸುಶ್ರೂತಾ ಆಯುರ್ವೇಧ ಆಸ್ಪತ್ರೆಯ ಶಸ್ತçಚಿಕಿತ್ಸಕ ಡಾ. ರವಿಶಂಕರ ಪರ್ವಾಜೆ ಅವರು ಆಯ್ಕೆ)
********
ವೈದ್ಯಕೀಯ ಕ್ಷೇತ್ರದಲ್ಲಿ ಶ್ರಮಿಸಿದ ವೈದ್ಯರಿಗೆ ಕಲಾ ಸ್ಪಂದನ- ಹಾವೇರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಕೊಡಮಾಡುತ್ತಿರುವ ಪ್ರತಿಷ್ಠಿತ ವೈದ್ಯಶ್ರೀ ಪ್ರಶಸ್ತಿಯನ್ನು ಈ ಬಾರಿ ಹುಬ್ಬಳ್ಳಿಯ ಕಿಮ್ಸ್ ಪ್ಯಾಥಾಲಜಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕವಿತಾ ಏವೂರ ಮತ್ತು ಪುತ್ತೂರಿನ ಸುಶ್ರೂತಾ ಆಯುರ್ವೇಧ ಆಸ್ಪತ್ರೆಯ ಶಸ್ತçಚಿಕಿತ್ಸಕ ಡಾ. ರವಿಶಂಕರ ಪರ್ವಾಜೆ ಅವರಿಗೆ 2024 ನೇ ಸಾಲಿನ ವೈದ್ಯಶ್ರೀ ಪ್ರಶಸ್ತಿಯನ್ನು ನೀಡಲು ಆಯ್ಕೆ ಸಮಿತಿಯ ಅದ್ಯಕ್ಷರು, ವೈದ್ಯರಾದ ಡಾ. ಸತ್ಯನಾರಾಯಣ ಮಾಸ್ತಮ್ಮನವರ ಅವರ ತಂಡ ತಿರ್ಮಾನಿಸಿ ಆಯ್ಕೆಮಾಡಿದ್ದಾರೆೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ ಚಿ. ವ್ಹಿ ಎಸ್ ವ್ಹಿ ಪ್ರಸಾದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೇಬಾಸೂರ ಗ್ರಾಮದ ಮೌನೇಶಪ್ಪ ಕತ್ತಿ ಯವರ ಮಕ್ಕಳು ಸೇರಿ (2019)ನೇ ವರ್ಷದಿಂದ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ. ಈ ಪ್ರಶಸ್ತಿಯು 25,000 ಸಾವಿರ ನಗದು, ಪ್ರಮಾಣಪತ್ರ, ಹಣ್ಣುಹಂಪಲು, ಶಾಲು-ಪಲಕ ಒಳಗೊಂಡಿದೆ.
ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ವೈದ್ಯರ ಸೇವೆಯ ಮಹತ್ವ ತಿಳಿಯುತ್ತದೆ. ಪ್ರತಿಯೊಬ್ಬರಿಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಮಾಡಿ ಗುಣಮುಖರಾಗುವಂತೆ ತಮ್ಮ ಜೀವನದ ಹಂಗು ತೊರೆದು ಕಾರ್ಯ ಮಾಡುವ ವೈದ್ಯರ ಸೇವೆಯನ್ನು ಪರಿಗಣಿಸಿ ಅವರನ್ನು ಗೌರವಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವೈದ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಅದರಂತೆ ಹುಬ್ಬಳ್ಳಿಯ ಕಿಮ್ಸ್ ಪ್ಯಾಥಾಲಜಿ ವಿಭಾಗದ ಸಹ ಪ್ರಾಧ್ಯಾಪಕಿ ಮತ್ತು ರಕ್ತ ನಿಧಿ ಕೇಂದ್ರದಲ್ಲಿ ಕಾರ್ಯಮಾಡುತ್ತಿರುವ ಡಾ. ಕವಿತಾ ಏವೂರ ವರು ಕೋವಿಡ್ ಸಮಯದಲ್ಲಿ ಪ್ಲಾಸ್ಮಾಥೆರಪಿಯ ಚಿಕಿತ್ಸೆಯ ಕಾರ್ಯ ಮತ್ತು ಸುಧಾರಿತ ರಕ್ತ ಹೊಂದಾಣಿಕೆಯ ವಿಧಾನದ ಉನ್ನತೀಕರಣದ ಸಾಧನೆ ಹಾಗೂ ಬಡಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಮಾರ್ಗದರ್ಶನ, ಲೈಂಗಿಕ ಕಾರ್ಯಕರ್ತರಿಗೆ ಜಾಗೃತ ಶಿಬಿರ, ರೋಗಿಗಳ ಆರೈಕೆ ಮತ್ತು ರೋಗಗಳ ಮುಂಜಾಗ್ರತಾ ಕ್ರಮಗಳ ಸಮಾಲೋಜನೆ, ಹೀಗೆ ಅವರ ಹಲವಾರು ಸೇವೆ ಮತ್ತು ಇವರ ಜೊತೆಗೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಸುಶ್ರೂತಾ ಆಯುರ್ವೇಧ ಆಸ್ಪತ್ರೆಯ ಶಸ್ತçಚಿಕಿತ್ಸಕ ಡಾ. ರವಿಶಂಕರ ಪರ್ವಾಜೆ ಅವರು ನಿತ್ಯ ಸಾವಿರಾರು ರೋಗಿಗಳಿಗೆ ಅತೀ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಾ ಜನಮನಣೆ ಪಡೆದವರು, ಭಾರತೀಯ ಆಯುರ್ವೇಧ ಪದ್ದತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಬದುಕುವ ಕಲೆಗಳ ಬಗ್ಗೆ ಶಿಬಿರ ಆಯೋಜನೆ ಹೀಗೆ ಮುಂತಾದ ಸಾಧನೆ ಪರಿಗಣಿಸಿ ಈ ಇಬ್ಬರು ಸಾಧಕರಿಗೆ 2024 ನೇ ಸಾಲಿನ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಬ್ಬರಿಗೂ ತಲಾ 12500/- ನಗದು,ಪಲಕ, ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ.ಸತ್ಯನಾರಾಯಣ ಮಾಸ್ತಮ್ಮನವರ ಅದ್ಯಕ್ಷರಾಗಿ, ನಾರ್ಥ ಬೆಂಗಳೂರು ಹಾಸ್ಪಿಟಲ್‌ನ ನಿರ್ದೇಶಕ ಡಾ. ಶಿವಕುಮಾರ ಉಪ್ಪಳ, ಗದಗದ ಸಂಕನೂರ ಆಸ್ಪತ್ರೆಯ ಡಾ ಶ್ವೇತಾ ಸಂಕನೂರ, ಮತ್ತು ಪ್ರಶಸ್ತಿ ಸಂಸ್ಥಾಪಕ ಮಂಜುನಾಥ ಎಮ್ ಕೆ ಸದಸ್ಯರು ಇದ್ದರು.
ಮೌನೇಶಪ್ಪ ಕತ್ತಿ ಇವರ ಪರಿಚಯ:
ಮೌನೇಶಪ್ಪ ಕತ್ತಿ : ಕರ್ನಾಟಕದ ಹೆಬ್ಬಾಗಿಲು, ಯಾಲಕಿ ಕಂಪಿನ ನಾಡು ಹಾವೇರಿ ಜಿಲ್ಲೆಯ ಹಾನಗಲ ತಾಲೂಕಿನ ಹಿರೇಬಾಸೂರ ಒಂದು ಚಿಕ್ಕ ಗ್ರಾವi. ಅಲ್ಲಿ ಕಡು ಬಡತನದಲ್ಲಿದ್ದ ನಿಂಗಪ್ಪ ಮತ್ತು ಬಂದವ್ವ ಎಂಬ ದಂಪತಿಗಳಿಗೆ ಆರು ಜನ ಮಕ್ಕಳಲ್ಲಿ ಮೂರನೆಯವರು ಮೌನೇಶಪ್ಪನವರು.ಮೂಲತ ಕೃಷಿ ಮನೆತನದಲ್ಲಿ ಬೆಳೆದು ಬಂದ ಇವರು ಇದ್ದ ಅಲ್ಪ (ಒಂದು ಎಕರೆ) ಜಮೀನಿನಲ್ಲೇ ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಅವರು ನಿತ್ಯ ಕೃಷಿ,ಕೂಲಿ ಮಾಡುತ್ತಾ ನಿತ್ಯದ ಜೀವನವನ್ನು ಕಡು ಬಡತನದಲೇ ಸಾಗಿಸುತ್ತಿರುವ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳು ಬಂದರು ಸಹ ತಾಳ್ಮೆ,ಸಹನೆಯಿಂದ ಎದುರಿಸಿದವರು. ಇಂತಹ ಸಂದರ್ಭದಲ್ಲಿ ಚಿಕ್ಕ ವಯಸ್ಸಿನಲೇ ಹಳ್ಳಿಯ ಸಂಪ್ರದಾಯದAತೆ 26ನೇ ವಯಸ್ಸಿನಲ್ಲಿ ಕಂಚಿನೆಗಳೂರು ಗ್ರಾಮದ ಮಹಾದೇವಪ್ಪ ಮತ್ತು ಪಾರ್ವತೆವ್ವ ದಂಪತಿಯ ಮಗಳಾದ ನಾಗವ್ವಳನ್ನು ಮೌನೇಶಪ್ಪ ಮದುವೆಯಾದರು. ನಂತರ ಬಡತನದಲ್ಲಿಯೇ ದಿನಗೂಲಿ, ಟ್ಯಾಕ್ಟರಲ್ಲಿ ಹಮಾಲಿ, ಅರಣ್ಯ ಇಲಾಖೆಯ ಸಸಿನೆಡಲು ತಗ್ಗು ತೋಡುವ ದಿನಗೂಲಿ ಕೆಲಸ ಮಾಡುತ್ತಾ ಜೀವನವನ್ನು ಸಾಗಿಸುತ್ತಾ ಬರುತ್ತಾರೆ. ಅದರಂತೆಯೇ ಮೌನೇಶಪ್ಪನಿಗೆ ಮಾರ್ತಾಂಡಪ್ಪ, ಜಗದೀಶ, ಮಂಜುನಾಥ ಎಂಬ ಮೂವರು ಗಂಡುಮಕ್ಕಳು ಹಾಗೂ ಅಕ್ಕಮ್ಮ ಪುತ್ರಿಯೊಂದಿಗೆ ತುಂಬು ಸಂಸಾರವನ್ನು ನಡೆಸುವುದು ಕಷ್ಟವಾದಾಗ ಹಿರಿಯ ಮಗನ್ನು ಎರಡು ವರ್ಷದ ಬಾಲಕನಿದ್ದಾಗಲೇ ಅಜ್ಜಿಯ ಮನೆಯಲ್ಲಿ ಬಿಟ್ಟು ಬರುವಾಗ ಎಷ್ಟು ನೋವು ಅನುಭವಿಸಿದ್ದಾರೆಂದು ಮಕ್ಕಳ ಮುಂದೆ ತೋಡಿಕೊಂಡಾಗ ಯಾರಿಗೂ ಸಹ ಕಣ್ಣಿರು ಬಾರದೇ ಇರಲು ಸಾದ್ಯವಿಲ್ಲ. 63 ವರ್ಷಗಳನ್ನು ಕಳೆದು 64ನೇ ವರ್ಷಕ್ಕೆ ಕಾಲಿಟ್ಟರು ಸಹ ಪ್ರತಿದಿನ ಹೊಲದಲ್ಲಿ ಕೆಲಸ ಮಾಡುತ್ತಲೇ ಜೀವನ ಕಳೆದ ಮೌನೇಶಪ್ಪ ಕತ್ತಿಯವರ ಹೆಸರಿನಲ್ಲಿ ಅವರ ಮಕ್ಕಳು ಈ ಪ್ರಶಸ್ತಿ ಕೊಡುತ್ತಿರುವದು ಹೆಮ್ಮೆಯ ಸಂಗತಿ ಎಂದು ವೈದ್ಯಶ್ರೀ ಪ್ರಶಸ್ತಿ ಸಂಸ್ಥಾಪಕರಾದ ಮಾರ್ತಾಂಡಪ್ಪ ಕತ್ತಿ ತಿಳಿದರು.
ಡಾ. ಕವಿತಾ ಏವೂರ ಇವರ ಪರಿಚಯ
ಇವರು ಹುಬ್ಬಳ್ಳಿಯ ಕಿಮ್ಸ್ನಲ್ಲಿ ರಕ್ತ ನಿಧಿ ಕೇಂದ್ರದ ಸಹ ಪ್ರಾದ್ಯಾಪಕಿಯಾಗಿ ಕಾರ್ಯನಿವಹಿಸುತ್ತಿದ್ದಾರೆ. ಇವರು ವಿಶೇಷವಾಗಿ ರಕ್ತ ಹೊಂದಾಣಿಕೆಯ ಜೆಲ್ ತಂತ್ರಜ್ಞಾನದ ಮುಖಾಂತರ ರೋಗಿಗಳಿಗೆ ರಕ್ತ ನೀಡುವಿಕೆ, ನರರೋಗ ವಿಭಾಗದಲ್ಲಿ ರೋಗಿಗಳಿಗೆ ಪ್ಲಾಸ್ಮಾಥೆರಪಿಯ ಚಿಕಿತ್ಸೆಯ ಮೂಲಕ ಆರೈಕೆ. ರೋಗಿಯ ಸ್ಥಿತಿ ಮತ್ತು ಚಿಕಿತ್ಸೆ, ಕಾಳಜಿಯೊಂದಿಗೆ ಮೇಲ್ವಿಚಾರಣೆ ಮಾಡುವುದು ಇವರ ವೈಶಿಷ್ಟö್ಯ. ಉತ್ರ ಕರ್ನಾಟಕದ ಬಾಗದ ಬೇರೆ ಬೇರೆ ಕಡೆ ರಕ್ತದಾನದ ಮಹತ್ವ ಮತ್ತು ರಕ್ತದ ಅವಶ್ಯಕತೆ ಕಾಳಜಿÀ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜಾಗೃತಿ ಮಾಡುತ್ತಿರುವರು. ಕೋವಿಡ್ ಸಮಯದಲ್ಲಿ ಪ್ಲಾಸ್ಮಾ ಥೆರಪಿ ಮಾಡಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದ ಕೀರ್ತಿ ಕಿಮ್ಸಗೆ ಸಲ್ಲುತ್ತದೆ ಅದರಲ್ಲಿ ಇವರು ಕಾರ್ಯಮಾಡಿ ಪ್ಲಾಸ್ಮಾ ದಾನಿಗಳನ್ನು ಪ್ರೇರೆಪಿಸಿ ಹೆಚ್ಚು ಪ್ಲಾಸ್ಮಾ ನೀಡಲು ಸಹಕರಿಸದ್ದಾರೆ. ರೋಗಿಗಳಿಗೆ ಚಿಕಿತ್ಸೆ ಮತ್ತು ಮೇಲ್ವಿಚಾರಣೆಯ ಆರೈಕೆ ಅಲ್ಲದೆ ಸುರಕ್ಷಿತ ಸಮಾಲೋಚನೆ ಮೂಲಕ ಮಾನಸಿಕ ನೆಮ್ಮದಿ ನೀಡುವಲ್ಲಿ ಎತ್ತಿದ ಕೈ ಅವರದು. ಇವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ-ಸAಸ್ಥೆಯವರು ಪುರಸ್ಕಾರ ನೀಡಿ ಗೌರವಿಸಿವೆ.
ಡಾ. ರವಿಶಂಕರ ಪರ್ವಾಜೆ ಇವರ ಪರಿಚಯ
ಇವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರ ತಾಲೂಕಿನ ಸುಶ್ರೂತಾ ಆಯುರ್ವೇಧ ಆಸ್ಪತ್ರೆಯ ಶಸ್ತçಚಿಕಿತ್ಸಕರಾಗಿ ಕಾರ್ಯನಿವಹಿಸುತ್ತಿದ್ದಾರೆ. ಇವರು ನಿತ್ಯ ಸಾವಿರಾರು ರೋಗಿಗಳಿಗೆ ಅತೀ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಾ ಜನಮನಣೆ ಪಡೆದವರು, ಭಾರತೀಯ ಆಯುರ್ವೇಧ ಪದ್ದತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಬದುಕುವ ಕಲೆಗಳ ಬಗ್ಗೆ ಶಿಬಿರ ಆಯೋಜನೆ ಮಾಡಿ ರೋಗಗಳ ಮುಂಜಾಗ್ರತಾ ಕ್ರಮಗಳು ಮತ್ತು ಆಹಾರ ಪದ್ದತಿ ಕುರಿತು ಅರಿವು ಮೂಡಿಸುತ್ತಾರೆ. ಪಾಶ್ವವಾಯು ರೋಗಕ್ಕೆ, ಎಲಬು ಸವಕಳಿ ರೋಗಕ್ಕೆ ಉತ್ತಮ ಚಿಕಿತ್ಸೆ ಮೂಲಕ ಹೆಚ್ಚು ರೋಗಿಗಳ ಆರೈಕೆ ಮಾಡಿ ಗುಣಮುಖರನ್ನಾಗಿ ಮಾಡಿದ್ದಾರೆ. ಇವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ರಾಜೀವಗಾಂಧಿ ವಿಶ್ವವಿದ್ಯಾಲಯದಿಂದ ಕೊಡುವ ಆಯುರ್ವೇಧ ರತ್ನ ಪ್ರಶಸ್ತಿ, 2019 ರಲ್ಲಿ ವೈದ್ಯಕೀಯ ಕ್ಷೇತ್ರದ ಜೀವಮಾನ ಸಾಧನಾ ಪ್ರಶಸ್ತಿ, ದೆಹಲಿ ಗುರು ಪುರಸ್ಕಾರ ಹೀಗೆ ಹಲವಾರು ಸಂಘ-ಸAಸ್ಥೆಯವರು ಪುರಸ್ಕಾರ ನೀಡಿ ಗೌರವಿಸಿವೆ.
ಈಗಾಗಲೇ
2019 ರಲ್ಲಿ ಡಾ.ಶಿವಕುಮಾರ ಉಪ್ಪಳ (ನಾರ್ಥ ಬೆಂಗಳೂರು ಆಸ್ಪತ್ರೆ-ಬೆಂಗಳೂರು)
2020 ರಲ್ಲಿ ಡಾ. ಘನಶ್ಯಾಮ ವೈಧ್ಯ (ಕರ್ನಾಟಕ ಆರೋಗ್ಯಧಾಮ, ಘಟಪ್ರಭ)
2021 ರಲ್ಲಿ ಡಾ. ನಿರಂಜನಕುಮಾರ (ಎಸ್‌ಡಿಎಮ್ ಆಸ್ಪತ್ರೆ-ಧಾರವಾಡ)
2022 ರಲ್ಲಿ ಡಾ.ರಾಜನ್ ದೇಶಪಾಂಡೆ (ಮಕ್ಕಳ ತಜ್ಞರು-ಧಾರವಾಡ) ಮತ್ತು
ಡಾ ಪಿ.ಆರ್ ಹಾವನೂರು (ಜಿಲ್ಲಾ ಆಸ್ಪತ್ರೆ-ಹಾವೇರಿ)