ತಾಯಿಯ ಪ್ರೀತಿ, ಮಮತೆ, ಕರುಣೆ, ವಾತ್ಸಲ್ಯ ಅಪಾರ. ಇದನ್ನು ಪದಗಳಲ್ಲಿ ವಣಿಸುವುದು ಅಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ಸುರೇಖಾದೇವಿ ಹೇಳಿದರು.

*ತಾಯಿ ಋಣ ತೀರಿಸುವುದು ಅಸಾಧ್ಯ* 
ಧಾರವಾಡ: ತಾಯಿಯ ಪ್ರೀತಿ, ಮಮತೆ, ಕರುಣೆ, ವಾತ್ಸಲ್ಯ ಅಪಾರ. ಇದನ್ನು ಪದಗಳಲ್ಲಿ ವಣಿಸುವುದು ಅಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ಸುರೇಖಾದೇವಿ ಹೇಳಿದರು.
ನಗರದ ಅಂಜುಮನ್ ಕಲಾ, ವಿಜ್ಞಾನ-ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಹಯೋಗದಲ್ಲಿ ನಡೆದ ತಾಯಂದಿರ ದಿನಾಚರಣೆಯಲ್ಲಿ ಮಾತನಾಡಿದರು.
ನಿಸ್ವಾರ್ಥ ಜೀವನ ನಡೆಸುವ ತಾಯಿ ಮಕ್ಕಳ ಏಳಿಗೆ ಬಯಸುತ್ತಾಳೆ. ಎಲ್ಲ ಗೌರವಕ್ಕೆ ಅರ್ಹಳಾದ ತಾಯಿ ಯೋಗ್ಯ ರೀತಿ ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ ಎನ್ ಎಂ ಮಕಾನದಾರ ಮಾತನಾಡಿ, ತಾಯಿ ಗುಣ ವಣಿಸಿತ್ತ, ಅವಳ ಋಣ ತೀರಿಸುವುದು ಅಸಾಧ್ಯ ಎಂದರಲ್ಲದೇ,  ತಾಯಿ ಬಗ್ಗೆ ಕಾವ್ಯ ಪ್ರಸ್ತುತಪಡಿಸಿದರು. 
ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಡಾ.ರಾಹುತ್ ಉನ್ನಿಸಾ, ಡಾ.ಎ.ಎಸ್. ಬಳ್ಳಾರಿ,
 ಡಾ.ಎನ್.ಬಿ.ನಾಲತವಾಡ,  ಪತ್ರಿಕೋದ್ಯಮ ಮುಖ್ಯಸ್ಥ     ಡಾ. ಎಸ್ ಎಸ್ ಅದೋನಿ  ಪ್ರೊ.ಶಮಿಮ್ ಕಲಬುರ್ಗಿ ಸೇರಿ ಅನೇಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಾಹಿಲ್ಲಾ ಪಠಾಣ ಕುರಾನ್ ಹಾಗೂ ಮಹಬ್ಬುನಿ ದಪೇದಾರ ಶ್ಲೋಕ ಪಠಿಸಿದರು. ಪ್ರೊ.ಶಮೀಮ್ ಕಲಬುರ್ಗಿ ನಿರೂಪಿಸಿದರು. ಪ್ರೊ.ಸೀರಿನ ಶಿರಗುಪ್ಪಿನ ವಂದಿಸಿದರು.

ನವೀನ ಹಳೆಯದು

نموذج الاتصال