ಸಂಶೋಧನೆಗೆ ವಿಮರ್ಶಾತ್ಮಕವಾದ ದೃಷ್ಟಿಕೋನ ಮುಖ್ಯ - ಡಾ.ಡಿ.ಬಿ.ಕರಡೊಣಿ

ಸಂಶೋಧನೆಗೆ ವಿಮರ್ಶಾತ್ಮಕವಾದ ದೃಷ್ಟಿಕೋನ  ಮುಖ್ಯ - ಡಾ.ಡಿ.ಬಿ.ಕರಡೊಣಿ
ಧಾರವಾಡ  :
ಸಂಶೋಧನೆಗೆ ವಿಮರ್ಶಾತ್ಮಕವಾದ ದೃಷ್ಟಿಕೋನ ಬಹಳ ಮುಖ್ಯ ಪ್ರಸ್ತುತ ವಿದ್ಯಾರ್ಥಿಗಳು ಅದನ್ನು ರೂಢಿಸಿಕೊಳ್ಳುವದು ಬಹಳ ಅಗತ್ಯವಿದೆ ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ.ಕರಡೊಣಿ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಕಲಾ ಕಾಲೇಜಿನ ಇಂಗ್ಲೀಷ್ ಅಧ್ಯಯನ ವಿಭಾಗವು ಕಾಲೇಜಿನ ಬಿಬಿಎ ಸಭಾಂಗಣದಲ್ಲಿ ಆಯೋಜಿಸಿದ ಸಂಶೋಧನಾ ವಿಧಾನದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಭವಿಷ್ಯತ್ತಿನಲ್ಲಿ ಸಂಶೋಧನೆಗೆ ಹೆಚ್ಚಿನ ಅವಕಾಶಗೆ ಇವೆ ಎಂದ ಅವರು ಪ್ರಸ್ತುತ ಪದವಿ ವಿದ್ಯಾರ್ಥಿಗಳು ಸಂಶೋಧನೆ ಕುರಿತು ತಿಳಿಯುವದು ಅಗತ್ಯವಿದೆ, ಸಂಶೋಧನೆ  ಬರವಣಿಗೆಗೆ ಭಾಷಾ ಪ್ರಭುತ್ವ ಬಹಳ ಮುಖ್ಯ ಎಂದ  ಅವರು ಪ್ರಾಯೋಗಿಕವಾಗಿ ಸತತ ಪರಿಶ್ರಮ,ಓದು ಪ್ರಯತ್ನ ಮೂಲಕ ಸಂಶೋಧನಾ ಬರವಣಿಗೆಯ ಕೌಶ್ಯಲವನ್ನು ರೂಢಿಸಿಕೊಳ್ಳಬೇಕು ಎಂದರು.  ಈ ಕಾರ್ಯಾಗಾರದ ಉಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳ ಪಡೆದುಕೊಳ್ಳಬೇಕು ಎಂದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಈರಣ್ಣ ಮುಳಗುಂದ ಮಾತನಾಡಿ ಪ್ರಸ್ತುತ ಉದ್ಯಮ ವ್ಯವಹಾರಿಕ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚು ಪ್ರಾಶಸ್ತ್ಯ ಹೊಂದಿದ್ದು, ಸಂಶೋಧನೆ ಬರವಣಿಗೆ ಕೌಶಲ್ಯವನ್ನು ರೊಢಿಸಿಕೊಳ್ಳುವದು ಬಹಳ ಅವಶ್ಯಕತೆ ಇದೆ. ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆಯಲ್ಲಿ ಯೋಜನಾ ಬರವಣಿಗೆ ಬಹಳ ಮಹತ್ವ ಪಡೆದುಕೊಂಡಿದೆ ಎಂದರು. 

ಕವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ. ಎನ್.ಎಚ್.ಕಲ್ಲೂರ ಮಾತನಾಡಿ ವಿಷಯದ ಆಯ್ಕೆ, ಸಾಹಿತ್ಯ ಅಧ್ಯಯನ, ಸಂಶೋಧನಾ ವಿಧಾನ ಸಂಶೋಧನೆಗೆ ಬಹಳ ಮುಖ್ಯ ಎಂದು ಅವರು ವಿಷಯ ಮತ್ತು ಭಾಷೆಯ ಮೇಲೆ ಪ್ರಭುತ್ವವನ್ನು ಹೊಂದುವುದು ಅವಶ್ಯಕತೆ ಇದೆ.ಸಂಶೋಧನೆಗೆ ಪೂರಕವಾದ ತಯಾರಿ ನಡೆಸುವದು ಬಹಳ ಮುಖ್ಯ ಎಂದ ಅವರು ಸಂಶೋಧನಾ ವಿಶ್ಲೇಷಣೆ  ಬರವಣಿಗೆ ಬಹಳ ಮುಖ್ಯ ಎಂದರು. ಮಾಹಿತಿಯ ಸಂಗ್ರಹಕ್ಕೆ ಪೂರಕವಾದ ಗ್ರಂಥಗಳ ಉಲ್ಲೇಖಿಸುವುದು ಅಗತ್ಯವಾಗಿದೆ ಎಂದರು.

ಇಳಕಲ್ ಎಸ್.ಎಂ.ವಿ ಕಾಲೇಜಿನ ಸಹಪ್ರಾಧ್ಯಾಪಕ ಡಾ.  ಎಸ್.ಬಿ.ಬಿರಾದರ್ ಮಾತನಾಡಿ ಸಂಶೋಧನಾ ಬರವಣಿಗೆ ಒಂದು ರೀತಿ ಭಿನ್ನವಾಗಿದ್ದು, ಸಂಶೋಧನಾ ಬರವಣಿಗೆಯನ್ನು ರೂಢಿಸಿಕೊಳ್ಳಲು ನಿಯತಕಾಲಿಕೆಗಳಲ್ಲಿ ಬರುವ ಸಂಶೋಧನಾ ಲೇಖನಗಳನ್ನು ವಿದ್ಯಾರ್ಥಿಗಳು ಅವಲೋಕಿಸಿ ಓದಬೇಕು ಎಂದು ಸಲಹೆ ನೀಡಿದ ಅವರು ಸಂಶೋಧನಾ ವರದಿ ತಯಾರಿಸುವಲ್ಲಿ ಬರವಣಿಗೆ ಬಹಳ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂಶೋಧನೆಗೆ ಸಂಬಂಧಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡರು. ಕಾರ್ಯಗಾರದಲ್ಲಿ ಅಕಾಡೆಮಿಕ್ ಡೀನ್ ಡಾ. ಮುಕುಂದ ಲಮಾಣಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ. ಕಾಂಚನ್ ಗಾಂವಕರ್, ಡಾ. ಸುಕನ್ಯಾ ಜಾಲಿಹಾಳ್, ಡಾ. ಸಿ.ಬಿ ಐನಳ್ಳಿ, ಡಾ. ಸುಬ್ರಮಣ್ಯ ಭಟ್, ಡಾ. ಜೋನ್ ಮಾಡ್ತಾ, ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಫೋಟೊ ಶಿರ್ಷಿಕೆ:

ಕರ್ನಾಟಕ ಕಲಾ ಕಾಲೇಜಿನ ಇಂಗ್ಲೀಷ್ ಅಧ್ಯಯನ ವಿಭಾಗವು ಕಾಲೇಜಿನ ಬಿಬಿಎ ಸಭಾಂಗಣದಲ್ಲಿ ಆಯೋಜಿಸಿದ ಸಂಶೋಧನಾ ವಿಧಾನದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ.ಬಿ.ಕರಡೋಣಿ ಮಾತನಾಡಿದರು.
ನವೀನ ಹಳೆಯದು

نموذج الاتصال