ಶರಣರ ಆದರ್ಶಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.
ಧಾರವಾಡ. ಶರಣ ಸಂಕುಲವು ಸಂವಿಧಾನದ ತತ್ವಕ್ಕನುಸಾರವಾಗಿ ಬದುಕನ್ನು ಕಟ್ಟಿಕೊಂಡಿತ್ತು. ಜಗತ್ತಿನ ಪ್ರಪ್ರಥಮ ಶ್ರಮಿಕರನ್ನು ಸಂಘಟಿಸಿ ಸಮೃದ್ಧ ಸಮಾಜ ಕಟ್ಟಲು ಪ್ರಯತ್ನಿಸಿದವರು ಶರಣರು. ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾನತೆ, ಸ್ವಾಭಿಮಾನ, ಭಾವೈಕ್ಯತೆ, ಮಾನವೀಯತೆ ಸಾಮಾಜಿಕ ನ್ಯಾಯ ಆರ್ಥಿಕ ಸಮಾನತೆ ಮೊದಲಾದ ಮೌಲ್ಯಗಳನ್ನು ವಚನ ಸಾಹಿತ್ಯದಲ್ಲಿ ಕಾಣಬಹುದು. ಶಾಸ್ತ್ರ - ಶಸ್ತ್ರಗಳನ್ನು ಹೊಂದಿದ ಅಧಿಕಾರದಲ್ಲಿ ಜನಸಾಮಾನ್ಯರು ಗುಲಾಮರಾಗುತ್ತಾರೆ. ಶರಣರ ಪ್ರಗತಿಪರ ಕ್ರಾಂತಿಕಾರಿ ವಿಚಾರಗಳನ್ನು ಅಂತರ್ಗತಗೊಳಿಸಿಕೊಂಡ ಶರಣ ಸಾಹಿತ್ಯ ಬಂಡಾಯ ಸಾಹಿತ್ಯವು ಸಮಾಜವನ್ನು ಪುನರ್ ವ್ಯವಸ್ಥೆಗೊಳಿಸಲು ಶರಣರು ಪ್ರಯತ್ನಿಸಿದರೆಂದು ಡಾ. ರಂಜಾನ್ ದರ್ಗಾ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಸವ ಜಯಂತಿ ಸಮಾರಂಭದ ಕಾಲಕ್ಕೆ ನಿಂಗಯ್ಯ ಮಾಸ್ತಮರಡಿ ರುದ್ರಾಪೂರ ಮತ್ತು ಶಿವಲಿಂಗಯ್ಯ ಪ್ರಭು ದೇಸಾಯಿ ದತ್ತಿ ಹಾಗೂ ದಿ. ಎಸ್ ಎಸ್ ವಿದ್ವಾನ್ ಮತ್ತು ಎಸ್ ಗುರುಕುಮಾರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿದರು.
ಉದ್ಘಾಟನೆ ಮಾಡಿದ ಎಸ್ ಜಿ ನಡಕಟ್ಟಿ ಅವರು ಶರಣ ಸಾಹಿತ್ಯ ಸ್ವಾಭಿಮಾನ ಮತ್ತು ಸ್ವಾವಲಂಬನೆ ಕಾಯಕ ದಾಸೋಹ ಸಮಾನತೆ ಏಕದೇವೋಪಾಸನೆ ಮೌಲ್ಯಕ್ಕೆ ಮೂಲ ಶಿಕ್ಷಣ ಮತ್ತು ದಾಸೋಹ ಎಂದು ತಿಳಿಸಿದರು. ಡಾ. ಆರ್ ಬಿ ಖಾದೀರನಾಯಕರ ಅವರು ವಚನ ಸಾಹಿತ್ಯದ ಮಹತ್ವದ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರು ಪ್ರಸಕ್ತ ವರ್ಷ 115 ದತ್ತಿ ಹೊಂದಿದ್ದು, ಪ್ರತಿಯೊಂದು ದತ್ತಿಯನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ 15 ಜನ ಸಹೃದಯರು ವಚನ ವಾಚನ ಮತ್ತು ಗಾಯನ ಮಾಡಿದರು. ಶಾರದಾ ಕುರವತ್ತಿ, ಸುಮಂಗಲಾ ಅಂಗಡಿ, ಮೇಘಾ ಹುಕ್ಕೇರಿ, ಭಾರತಿ ಬಡಿಗೇರಿ, ಶಿವು ಕುನ್ನುರ ಮುಂತಾದವರು ವಚನ ವಾಚನ ಮಾಡಿದರು.
ಡಾ. ರಾಜೆಂದ್ರ ಪೋದ್ದಾರ, ಸುರೇಶ ಕುಲಕರ್ಣಿ, ಡಾ. ಶಶಿಧರ ನರೆಂದ್ರ,ಸೋಮಶೇಖರ್ ಇಟಗಿ, ರಾಜಶೇಖರ ಬಸೆಟ್ಟಿ, ಪಾಟೀಲ ಕುಲಕರ್ಣಿ, ಗಂಗಾಧರ ಗಾಡದ, ಪ್ರೊ ನಾವಲಗಿ, ಮುಂತಾದವರು ಉಪಸ್ಥಿತರಿದ್ದರು .
ಶ್ರೀಮತಿ ಪ್ರಮೀಳಾ ಜಕ್ಕನ್ನವರ ಪ್ರಾರ್ಥಿಸಿದರು. ಪ್ರೊ. ಕೆ ಎಸ್ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಾಂತೇಶ ನರೇಗಲ್ ವಂದಿಸಿದರು.