35800 ಕೋಟಿ ರೂ. ವಹಿವಾಟು ದಾಟಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್

35800 ಕೋಟಿ ರೂ. ವಹಿವಾಟು ದಾಟಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್.
 ಧಾರವಾಡ 24 : 
ಬರ ಮತ್ತಿನ್ನಿತರ ಸಂದಿಗ್ಧ ಪರಿಸ್ಥಿಯ ನಡುವೆಯೂ ಕೆನರಾ ಬ್ಯಾಂಕ್ 
ಪ್ರವರ್ತಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 8.24 ಪ್ರತಿಶತ 
ಪ್ರಗತಿ ದರದಲ್ಲಿ 35884 ಕೋಟಿ ರೂ. ಒಟ್ಟಾರೆ ವಹಿವಾಟು ದಾಖಲಿಸಿದೆ 
ಮತ್ತು ಬ್ಯಾಂಕಿನ ನಿಕ್ಕಿ ಲಾಭ 40.25 ಕೋಟಿ ರೂ. ಗಳಿಂದ 104.16
ಕೋಟಿ ರೂ. ಗಳಿಗೆ ವೃದ್ಧಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ 
ಶ್ರೀಕಾಂತ ಎಮ್ ಭಂಡಿವಾಡ ತಿಳಿಸಿದರು.
 
      ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,  ಬ್ಯಾಂಕಿನ ನಿವ್ವಳ ಸಂಪತ್ತು 1264.56 ಕೋಟಿ ರೂ.ಗಳಿಂದ 1368.61
ಕೋಟಿ ರೂ.ಗಳಿಗೆ ವೃದ್ಧಿಸಿದೆ ಎಂದು ತಿಳಿಸಿದರು. ವೃದ್ಧಿಸಿದ ವಹಿವಾಟು:
ಪ್ರಗತಿ ವಿವರಿಸಿ ಮಾತನಾಡಿದ ಶ್ರೀಕಾಂತ ಎಮ್ ಭಂಡಿವಾಡ 2022-2023 ರ 
ಸಾಲಿನ ಒಟ್ಟು ವ್ಯವಹಾರದ (ರೂ.33151 ಕೋಟಿ) ಮೇಲೆ 2733 ಕೋಟಿ 
ರೂ. ನಿವ್ವಳ ಹೆಚ್ಚಳವನ್ನು ಸಾಧಿಸಿರುವ ಬ್ಯಾಂಕು ವರದಿಯ 
ವರ್ಷದಲ್ಲಿ 8.24 % ಪ್ರಗತಿ ದರದಲ್ಲಿ 35884 ಕೋಟಿ ರೂ. ವಹಿವಾಟು 
ದಾಖಲಿಸಿದೆ. ಠೇವಣಿ ಸಂಗ್ರಹಣೆಯಲ್ಲಿ 6.12% ಪ್ರತಿಶತ ಪ್ರಗತಿ 
ದರದಲ್ಲಿ 19856 ಕೋಟಿ ರೂ. ಮಟ್ಟವನ್ನು ತಲುಪಿರುವ ಬ್ಯಾಂಕು 
ಗ್ರಾಹಕರ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದು, ಅದು 67 ಲಕ್ಷ
ಮೀರಿದೆ. ಪ್ರತಿ ಉದ್ಯೋಗಿಯ ಸರಾಸರಿ ವಹಿವಾಟು 10.08 ಕೋಟಿ 
ರೂ.ಗಳಿಂದ 10.98 ಕೋಟಿ ರೂ. ಗಳಿಗೆ ಏರಿದೆ ಎಂದೂ ಶ್ರೀಕಾಂತ 
ಭಂಡಿವಾಡ ತಿಳಿಸಿದರು.
     ಪ್ರಗತಿಗೆ ಪೂರಕವಾದ ಸಾಲ ಸೌಲಭ್ಯ :
9 ಜಿಲ್ಲೆಗಳಲ್ಲಿ 629 ಶಾಖೆಗಳನ್ನು ಹೊಂದಿರುವ ಬ್ಯಾಂಕು 2023-2024 
ರ ಸಾಲಿನಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿ 11908 ಕೋಟಿ ರೂ. ಸಾಲ 
ವಿತರಿಸಿದೆ. ಬ್ಯಾಂಕಿನ ಸಾಲ ಹಾಗೂ ಮುಂಗಡಗಳು 9.9% ಪ್ರಗತಿ 
ದರದಲ್ಲಿ 160x 27 ಕೋಟಿ ರೂ. ಮಟ್ಟವನ್ನು ತಲುಪಿದೆ. ಆದ್ಯತಾ
ರಂಗಕ್ಕೆ ಮಹತ್ವ ನೀಡಿರುವ ಬ್ಯಾಂಕು ಈ ರಂಗದಡಿ 14299 ಕೋಟಿ 
ರೂ. ಸಾಲವನ್ನು ಹೊಂದಿದ್ದು ಇದು ಒಟ್ಟೂ ಸಾಲದ 89.22
ಪ್ರತಿಶತವಾಗಿದೆ. ಬ್ಯಾಂಕಿನ ಒಟ್ಟು ಸಾಲದಲ್ಲಿ ಕೃಷಿರಂಗದ ಸಾಲದ 
ಪ್ರಮಾಣ 11569 ಕೋಟಿ ರೂ. ಗಳಾಗಿದ್ದು ಅದು ಒಟ್ಟಾರೆ ಸಾಲದ 
72.18 ಪ್ರತಿಶತವಾಗಿದೆ. ಕಳೆದ ಸಾಲಿನಲ್ಲಿ ಬ್ಯಾಂಕು ಕಿಸಾನ್ ಕ್ರೆಡಿಟ್ 
ಕಾರ್ಡ್ ಯೋಜನೆಯಡಿ 458879 ರೈತರಿಗೆ 8712 ಕೋಟಿ ರೂ. ಸಾಲ 
ವಿತರಿಸಿದೆ . ಒಟ್ಟಾರೆ ಸಾಲ ವಿತರಣೆಯಲ್ಲಿ ಕೃಷಿ ಅಭಿವೃದ್ಧಿಗೆ 11569 
ಕೋಟಿ ರೂ., ಎಮ್ ಎಸ್ ಎಮ್ ಇ ರಂಗಕ್ಕೆ 876 ಕೋಟಿ ರೂ. ಮತ್ತು 
ಗೃಹ ರಂಗಕ್ಕೆ 48 ಕೋಟಿ ರೂ.ವಿತರಿಸಿದೆ ಎಂದರು.
 ಅನುತ್ಪಾದಕ ಆಸ್ತಿಗಳ ನಿಯಂತ್ರಣ :--
ಕೋವಿಡ್ ನಂತರದ ಮತ್ತು ಪ
2024-2025 ರ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕು 22000 
ಕೋಟಿ ರೂ. ಠೇವಣಿ ಮತ್ತು 18000 ಕೋಟಿ ರೂ. ಮುಂಗಡ 
ಮಟ್ಟವನ್ನು ತಲುಪುವ ಮೂಲಕ 40000 ಕೋಟಿ ರೂ. ವಹಿವಾಟು 
ಸಾಧಿಸುವ ಹಾಗೂ ಕನಿಷ್ಠ 175 ಕೋಟಿ ರೂ.ನಿಕ್ಕಿ ಲಾಭಗಳಿಸುವ 
ಮಹತ್ವಾಕಾಂಕ್ಷಿ ಗುರಿಯನ್ನು ಶ್ರೀಕಾಂತ ಭಂಡಿವಾಡ 
ಪ್ರಕಟಿಸಿದರು. ಸಾಲದ ಬಡ್ಡಿಯನ್ನು ಸಾಕಷ್ಟು ತಗ್ಗಿಸಲಾಗಿದ್ದು 
ಹೊಸ ಆರ್ಥಿಕ ವರ್ಷದ ಸಾಲಿನಲ್ಲೂ ಕೃಷಿ ,ಉದ್ಯಮ ಮತ್ತು 
ಗೃಹಸಾಲ ಒಳಗೊಂಡು ರಿಟೇಲ್ ಸಾಲಗಳಿಗೆ ಆದ್ಯತೆ  ನೀಡಲಾಗುವುದು ಎಂದೂ ಶ್ರೀಕಾಂತ ಎಮ್ ಭಂಡಿವಾಡ 
ಹೇಳಿದರು. 
    ಪತ್ರಿಕಾ ಗೋಷ್ಠಿಯಲ್ಲಿ ಬ್ಯಾಂಕಿನ ಮಹಾ ಪ್ರಬಂಧಕರುಗಳಾದ, 
ಸತ್ಯಪ್ರಸಾದ ಎನ್, ಮಾಲಾಕಿ ಪುನೀತ, 
ಆರ್. ಟಿ. ಕಾಂಬ್ಳೆ, ಸತೀಶ ಆರ್,ಉಲ್ಲಾಸ ಗುಣಗಾ ಮತ್ತಿತರ ಹಿರಿಯ ಅಧಿಕಾರಿಗಳು 
ಉಪಸ್ಥಿತರಿದ್ದರು.

ನವೀನ ಹಳೆಯದು

نموذج الاتصال