ದೇಶದ ಅಭಿವೃದ್ಧಿ ಮತ್ತು ಬಲಿಷ್ಠಗೊಳಿಸಲು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಲುವಾಗಿ ಈ ಬಾರಿಯೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮತದಾರರಲ್ಲಿ ಮನವಿ ಮಾಡಿದರು.

ಧಾರವಾಡ : ದೇಶದ ಅಭಿವೃದ್ಧಿ ಮತ್ತು ಬಲಿಷ್ಠಗೊಳಿಸಲು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಲುವಾಗಿ ಈ ಬಾರಿಯೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮತದಾರರಲ್ಲಿ ಮನವಿ ಮಾಡಿದರು.
ಗುರುವಾರ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ  ಜೋಗೆಲ್ಲಾಪುರ ಗ್ರಾಮಲ್ಲಿ  ಮತದಾರರನ್ನು ಭೇಟಿ ಮಾಡಿ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಮತಯಾಚಿಸಿ ಮಾತನಾಡಿದರು.

ಜಗತ್ತನ್ನು ಕಾಡಿದ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಎಲ್ಲ‌ ಭಾರತೀಯರಿಗೂ ಲಸಿಕೆ ನೀಡುವ ಕೆಲಸವನ್ನು‌ ನರೇಂದ್ರ ಮೋದಿ‌ ನೇತೃತ್ವದ ಸರಕಾರ ಯಶಸ್ವಿಯಾಗಿ  ಕೈಕೊಂಡಿತು. ಅಲ್ಲದೇ ಅಗತ್ಯವಿರುವ ಅನ್ಯ‌ದೇಶಗಳಿಗೂ ಲಸಿಕೆ ಕೊಡಲಾಯಿತು.
ದೇಶದಲ್ಲಿ ಇಂದು ಗುಣಮಟ್ಟದ‌ ಪ್ರತಿದಿನ ನೂರಾರು ಕಿ.ಮೀ.ಗಳಷ್ಟು ರಸ್ತೆಗಳನ್ನು ನಿರ್ಮಾಣ‌ ಮಾಡಲಾಗುತ್ತಿದೆ.
ಸಚಿವ ನಿತಿನ್ ಗಡ್ಕರಿ ಅವರ ಸತತ ಪರಿಶ್ರಮದಿಂದ ರಸ್ತೆಗಳು ಸುಧಾರಣೆ ಕಂಡು ಸಂಚಾರವನ್ನು ಸುಗಮಗೊಳಿಸಿವೆ.
ಅಲ್ಲದೇ ರೈಲು‌,
ವಿಮಾನ ನಿಲ್ದಾಣಗಳನ್ನು ದಾಖಲೆಯ ರೀತಿಯಲ್ಲಿ ಸುಧಾರಣೆ ಮಾಡಲಾಯಿತು.
ಮಹಿಳೆಯರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಮೂಲಕ ಮತ್ತಷ್ಟು ಸ್ವಾವಲಂಬಿ ಮಾಡಲು ಶ್ರಮವಹಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು 
ಕೈಕೊಂಡಿರುವ ಪ್ರಹ್ಲಾದ ಜೋಶಿ ಅವರು ಅತ್ಯಂತ ಕ್ರಿಯಾಶೀಲ ಮತ್ತು ಸಚ್ಚಾರಿತ್ರ್ಯ ಹೊಂದಿರುವ ವ್ಯಕ್ತಿತ್ವದವರು. ಜೋಶಿ ಅವರನ್ನು ಈ ಬಾರಿಯೂ ಗೆಲ್ಲಿಸುವ ಮೂಲಕ‌‌ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ‌ ನೀಡಬೇಕು ಎಂದು ಬೆಲ್ಲದ ಮನವಿ ಮಾಡಿದರು.
ಮಾಜಿ ಮೇಯರ ಮಂಜುಳಾ ಅಕ್ಕೂರ, ಪಾಲಿಕೆ ಸದಸ್ಯೆ ಲಕ್ಷ್ಮೀ ಹಿಂಡಸಗೇರಿ, ಮುಖಂಡರಾದ ದುರ್ಗಪ್ಪ‌ ಜೋಗಣ್ಣವರ, ಬಸವನಗೌಡ ಪಾಟೀಲ, ಫಕ್ಕೀರಪ್ಪ ವಾಲೀಕಾರ, ಮಾರುತಿ‌ ಹಿಂಡಸಗೇರಿ ಇತರರು ಜೊತೆಗಿದ್ದರು.
ನವೀನ ಹಳೆಯದು

نموذج الاتصال