ಜ್ಞಾನದ ಬೆಳಕು ನೀಡಿದ ಕವಿವಿ ಪ್ರಸಾರಾಂಗ - ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಅಭಿಮತ.

ಕ ವಿ ವಿ ಪ್ರಸಾರಾಂಗ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ
ಸೇವೆಯಿಂದ ನಿವೃತ್ತಿ.
               ಜ್ಞಾನದ ಬೆಳಕು ನೀಡಿದ ಕವಿವಿ ಪ್ರಸಾರಾಂಗ - ಕವಿವಿ ಕುಲಪತಿ  ಪ್ರೊ. ಕೆ.ಬಿ.ಗುಡಸಿ ಅಭಿಮತ. 

ಧಾರವಾಡ  :
ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವು ಜ್ಞಾನವನ್ನು ಹಂಚುವಲ್ಲಿ ಮಹತ್ವದ ಪಾತ್ರ ವಹಿಸಿ ಕವಿವಿಯ ಗರಿಮೆ ಹೆಚ್ಚಿಸಿದೆ ಎಂದು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅಭಿಪ್ರಾಯಪಟ್ಟರು.

ಅವರು ಕವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗವು ಪ್ರಕಟಿಸಿದ. ‘ ನಮ್ಮ ಪ್ರಸಾರಾಂಗ' ಎಂಬ ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮ ಮತ್ತು ಸೇವೆಯಿಂದ ನಿವೃತ್ತಿ ಹೊಂದಿದ ಕವಿವಿ ಪ್ರಸಾರಾಂಗ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ ಅವರನ್ನು ಸನ್ಮಾನಿಸಿ ಮಾತನಾಡಿದರು.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗವು ಜ್ಞಾನದ ಬೆಳಕು ನೀಡುವಲ್ಲಿ ಅವಿರತವಾಗಿ ಶ್ರಮಿಸುತ್ತಲೇ ಬಂದಿದೆ. 1952 ರಲ್ಲಿ ಪ್ರಾರಂಭವಾದ ಪ್ರಸಾರಾಂಗವು ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಸಂಗ ವಿಸ್ತರಣೆ, ಉಪನ್ಯಾಸ, ಪುಸ್ತಕ ಪ್ರಕಟಣೆ, ಮೂಲ ತತ್ವ ಉಪನ್ಯಾಸ, ನಿಯತಕಾಲಿಕೆಗಳ ಮುದ್ರಣ, ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾನ್ಯ ಜನರಿಗೆ, ಪ್ರಾಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದ ಅವರು ವಚನ ಸಾಹಿತ್ಯ, ಕನಕ ಸಾಹಿತ್ಯ, ವೇಮನ ಸಾಹಿತ್ಯ, ವಿಮರ್ಶೆ ಮತ್ತು ಸಂಶೋಧನೆ ಮುಂತಾದ ಮಹತ್ವದ ಗ್ರಂಥಂಗಳು ಪ್ರಸಾರಾಂಗದಿಂದ ಪ್ರಕಟಣೆಗೊಂಡು ಓದುಗರನ್ನು ಆಕರ್ಷಿಸಿದೆ ಎಂದರು.

ಧಾರವಾಡ ಆಕಾಶವಾಣಿ ನಿಲಯ ನಿರ್ದೇಶಕರಾದ ಡಾ. ಬಸು ಬೇವಿನಗಿಡದ ಮಾತನಾಡಿ ಡಾ. ಚಂದ್ರಶೇಖರ ರೊಟ್ಟಿಗವಾಡ ಅವರು ಒಬ್ಬ ಬರಹಗಾರ, ಸಾಹಿತಿ ಮತ್ತು ವಿಮರ್ಶಕರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡು, ಕವಿವಿ ಪ್ರಸಾರಾಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಪ್ರಸಾರಾಂಗದ ನಿರ್ದೇಶಕರಾಗಿ ನಿವೃತ್ತರಾದ ಡಾ ಚಂದ್ರಶೇಖರ ರೊಟ್ಟಿಗವಾಡ ಅವರು ಕುಲಪತಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪ್ರಸಾರಂಗದಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ನನಗೆ ಸಂತೋಷವನ್ನು ತಂದಿದೆ. ನಾಡಿಗೆ ಜ್ಞಾನದ ಬೆಳಕನ್ನು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡು ನನಗೆ ಅಭಿಮಾನದ ಸಂಗತಿ ಎಂದ ನನ್ನ ಸೇವಾ ಅವಧಿಯಲ್ಲಿ  ಸಹಕರಿಸಿದ ಕುಲಪತಿ, ಕುಲಸಚಿವರು ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರುಗಳಿಗೆ, ಶಿಕ್ಷಕೇತರ ಬಂಧುಗಳಿಗೆ ಧನ್ಯವಾದಗಳನ್ನು ತಿಳಿಸಿದರು. 

ಪ್ರಸಾರಾಂಗದ ಸಹಾಯಕ ನಿರ್ದೆಶಕ ಡಾ. ಸಿದ್ದಪ್ಪ. ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಶ್ಯಾಮಲಾ ಕತ್ನಾಕರ, ಡಾ. ವಿ.ಎಲ್.ಪಾಟೀಲ,  ಮೌಲ್ಯಮಾಪನ ಕುಲಸಚಿವರಾದ ಡಾ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ಆರ್.ಬಿ.ಚಿಲುಮಿ, ಡಾ ರಾಮಚಂದ್ರ ದೊಂಗಡಿ, ಡಾ. ಜಿನದತ್ತ ಹಡಗಲಿ, ಡಾ. ವೈ. ಎಮ್ ಭಜಂತ್ರಿ, ಡಾ.ರಾಜಶೇಖರ ದಾನರೆಡ್ಡಿ, ಡಾ.ಶಿವಾನಂದ ಶೆಟ್ಟರ, ಶಿಕ್ಷಕ ಮತ್ತು ಶಿಕ್ಷಕೇತರರು ಡಾ.ಚಂದ್ರಶೇಖರ ರೊಟ್ಟಿಗವಾಡ ಅವರ ಕುಟುಂಬ ವರ್ಗದವರು ಹಾಜರಿದ್ದರು. 


 ಫೋಟೋ ಶಿರ್ಷಿಕೆ:-1

ಕವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗವು ಪ್ರಕಟಿಸಿದ. ‘ನಮ್ಮ ಪ್ರಸಾರಾಂಗ' ಎಂಬ ಪುಸ್ತಕವನ್ನು ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಬಿಡುಗಡೆ ಮಾಡಿದರು. 

 ಫೋಟೋ ಶಿರ್ಷಿಕೆ:-2

ಕವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಕವಿವಿ ಪ್ರಸಾರಾಂಗ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ ಅವರನ್ನು ಕವಿವಿ ಕುಲಪತಿ ಪ್ರೊ.ಕೆ.ಬಿ. ಗುಡಸಿ ಸನ್ಮಾನಿಸಿ ಮಾತನಾಡಿದರು.
ನವೀನ ಹಳೆಯದು

نموذج الاتصال